ಮುನಿಯಾಲು ಸಂಜೀವಿನಿ “ಗೋಧಾಮ”ದಲ್ಲಿ ದೀಪಾವಳಿ ಗೋಪೂಜೆ ಸಂಭ್ರಮ.

ಉಡುಪಿ/ಹೆಬ್ರಿ: ಹೆಬ್ರಿ ಸಮೀಪದ ಮುನಿಯಾಲು ಸಂಜೀವಿನಿ ಫಾರ್ಮ್ ಮತ್ತು ಡೇರಿ ಗೋಧಾಮದಲ್ಲಿ  ದೇಶಿಯ ತಳಿ ಹಸುಗಳಿಗೆ ಸಾಮೂಹಿಕ ಗೋ ಪೂಜೆ ಕಾರ್ಯಕ್ರಮ  ನಡೆಯಿತು. ಕಾರ್ಯಕ್ರಮದ ಸಮಾರಂಭ ವನ್ನು  ಸಾಂಕೇತಿಕವಾಗಿ ಗೋವುಗಳಿಗೆ  ಆರತಿ ಬೆಳಗಿಸಿ  ಪ್ರಸಾದ ತಿನ್ನಿಸುವ ಮೂಲಕ, ಮೂಡಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿಉದ್ಘಾಟಿಸಿದರು.
ನಂತರ ಆಶೀರ್ವಚನ ನೀಡುತ್ತಾ ಗೋಪೂಜೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.ಗೋವಿನ ದೇಹದಲ್ಲಿ ಹಲವಾರು ದೇವತೆಗಳ ವಾಸ ಸ್ಥಾನವಿದೆ. ಆರ್ಯರು ಗೋವುಗಳನ್ನು ಸಾಕುವ ಮೂಲಕ ನಮಗೆ ಒಂದು ಸಂಸ್ಕೃತಿಯನ್ನು ತಿಳಿಸಿಕೊಟ್ಟಿದ್ದಾರೆ.
ಹಾಗೆಯೇ ರಾಮಕೃಷ್ಣ ಪರಮಹಂಸರ ಧೇಯಗಳನ್ನೂ ಪಾಲಿಸುತ್ತಾ, ದೇಸಿ ತಳಿ  ಸಾಕುವ ಉದ್ಯಮಿ ರಾಮಕೃಷ್ಣ ಆಚಾರ್ ರಿಗೆ  ಅಭಿನಂಧಿಸುತ್ತೇನೆ, ಅಲ್ಲದೆ ದೇಸಿ ತಳಿ ಗಳನ್ನು ಸಂರಕ್ಷಿಸಿ ಬೆಳೆಸುವುದು ನಿಜಕ್ಕೂ ಸವಾಲಿನ ಕೆಲಸ.  
ಆಚಾರ್ ರವರು  ಮುನಿಯಾಲನಂತಹ ಪರಿಸರದಲ್ಲಿ ಇಂತಹ ವಿಸ್ತಾರವಾದ ಜಾಗದಲ್ಲಿ ಗೋಶಾಲೆಯನ್ನು ಸ್ಥಾಪಿಸಿ ಜನತೆಗೆ  ಗೋವಿನ  ಮಹತ್ವದ ಬಗ್ಗೆ  ಮಾಹಿತಿ ನೀಡುವ ಕೆಲಸ  ಶ್ಲಾಘನೀಯ ಎಂದರು.
ಅಲ್ಲದೆ ಸರ್ಕಾರ ಗೋವುಗಳನ್ನು ಸಾಕುವ ವ್ಯಕ್ತಿಗಳನ್ನು ಗುರುತಿಸಿ ,ಗೋವುಗಳನ್ನು ತರುವ  ಸಂಧರ್ಭ ಕೆಲವು ಸಂಘಟನೆ ಮತ್ತು ಆರಕ್ಷಕ ಇಲಾಖೆಯಿಂದ ಉಂಟಾಗುವ  ಸಮಸ್ಯೆಗಳಿಂದ ಪಾರಾಗಲು  ನಿಜವಾದ ಗೋವುಗಳನ್ನು ಸಾಕುವ ವ್ಯಕ್ತಿಗಳಿಗೆ  ವಿಶೇಷವಾದ ಗುರುತು ಪತ್ರಗಳನ್ನು ನೀಡಬೇಕೆಂದು ಈ ಸಂಧರ್ಭ ಮುಖ್ಯಮಂತ್ರಿ, ಸಚಿವ ಸುನೀಲ್ ಕುಮಾರ್ ರವರಿಗೆ ಮನವಿ ಮಾಡಿಕೊಂಡರು.
ಮುಖ್ಯ ಅತಿಥಿ ಯಾಗಿ ಆಗಮಿಸಿದ್ದ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭುರವರು ಮಾತ ನಾಡುತ್ತಾ ದೇಶಕ್ಕೆ  ಮಹಾಮಾರಿ ಕೋವಿಡ್ ಬಂದು ನಮಗೆ ದೇಶಿ ಸಂಸ್ಕೃತಿಯನ್ನು ಕಲಿಯಲು ಬಹಳಷ್ಟು ಅವಕಾಶ ಕಲ್ಪಿಸಿದೆ. ಈ ಮೊದಲು  ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ಯತ್ತ ತಿರುಗಿದ್ದ ಜನತೆ ಈ ಬಾರಿಯ ಮಹಾಮಾರಿ ಕೊರೋಣದ  ನಂತರ ದೇಶೀಯ ಸಂಸ್ಕೃತಿ ಯನ್ನೂ ತಮ್ಮ ಜೀವನದಲ್ಲಿ  ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಅನ್ನೊಂದು ಸಂತೋಷದ  ವಿಷಯ. ಗೋವಿನ ಕೆಲಸ   ಇದೊಂದು ಪುಣ್ಯದ ಎಂದು ತಿಳಿಸಿದರು. 
ಮುನಿಯಾಲ ನಂತಹ ಪ್ರದೇಶವನ್ನು  ನಂದನವನದಂತೆ  ಪರಿವರ್ತನೆ ಮಾಡಿದ ರಾಮಕೃಷ್ಣ ಆಚಾರ ದಂಪತಿ ಯನ್ನು ಅಭಿನಂದಿಸುತ್ತೇನೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪಾಂಡೇಶ್ವರ ಯೋಗ ಗುರುಕುಲದ ಡಾ.ವಿಜಯ ಮಂಜರರವರು ಮಾತನಾಡುತ್ತಾ,  ಗೋಮಾತೆ ಅನ್ನೋದು ಪ್ರಭಲ ಶಕ್ತಿ, ಗೋವಿಗೆ ಇರುವ ದಿವ್ಯ ಶಕ್ತಿ ಬೇರೆ ಯಾವ  ಪ್ರಾಣಿಗೂ ಇಲ್ಲ.
ಗೋವಿಗೂ ಮನುಷ್ಯನಿಗೂ ಅಜಾರಮರ ಸಂಬಂಧವಿದೆ,ಭಗವಂತ  ಉದ್ಯಮಿ ರಾಮಕೃಷ್ಣ ಆಚಾರರವರೀಗೆ ಗೋವನ್ನು ಸಾಕೋದಕ್ಕೇ ಪ್ರೇರೇಪಣೆ ನೀಡಿ   ಅನುಗ್ರಹ ಮಾಡಿದಾರೆ ಹಾಗಾಗಿ  ಹವ್ಯಾಸವಾಗಿ, ಗೋವನ್ನು ಬೆಳೆಸಿಕೊಂಡು ಇಂದು ಸಮಾಜಕ್ಕೆ ಮಾದರಿಯಾಗಿದ್ದಾರೆ. 
ಭಾರತದಲ್ಲಿ ತಂತ್ರ ಜ್ಞಾನ. ಇನ್ನಷ್ಟು  ಮುಂದುವರಿಯಬೇಕು. ಹಾಗಾದಲ್ಲಿ ಮಾತ್ರ ಕೃಷಿ ಸಂಸ್ಕೃತಿ ಮುಂದುವರಿಯಬಹುದು ಎಂದು ಅಭಿಪ್ರಾಯ ಪಟ್ಟರು. ಗೋಧಾಮ  ಟ್ರಸ್ಟ್ಆಡಳಿತ ನಿರ್ದೇಶಕ ಜಿ.ರಾಮಕೃಷ್ಣ ಆಚಾರ್ ,ಪ್ರಾಸ್ತಾವಿಕವಾಗಿ  ಮಾತನಾಡಿ,ಪ್ರಾಚೀನ ಭಾರತದ  ಗೋವಿನ ವಿವಿಧ ತಳಿಗಳನ್ನು ಅಭಿವೃದ್ಧಿ ಮಾಡುವುದರೊಂದಿಗೆ,  ಸ್ವದೇಶಿ ತಳಿಗಳನ್ನು  ಸಂರಕ್ಷಿಸಿ ಅವುಗಳನ್ನು ಅಭಿವೃದ್ಧಿಪಡಿಸುವುದು ನಮ್ಮ  ಮೂಲ ಉದ್ದೇಶವಾಗಿದೆ.ಜೊತೆಗೆ ನೆಲ ಜಲವನ್ನು  ಸಂರಕ್ಷಿಸುವುದು.
ಮುಂದಿನ ಪೀಳಿಗೆಗೆ ಗ್ರಾಮೀಣ ಬದುಕನ್ನು ಪರಿಚಯಿಸುವುದು,ಯುವ ಜನತೆಯನ್ನು ಹೈನುಗಾರಿಕೆಗೆ ಪ್ರೇರೇಪಿ ಸುವುದು. ಅಲ್ಲದೆ ನಾನೋರ್ವ ಉದ್ಯಮಿಯಾಗಿ ಕೇಳಿಕೊಳ್ಳುವುದು ಏನೆಂದರೆ ಇಂದಿನ ಯುವ ಜನತೆ ಕೇವಲ ನಗರ ಜೀವನಕ್ಕೆ ಒಗ್ಗಿ ಕೊಳ್ಳದೆ ಹಳ್ಳಿಯಲ್ಲಿ ಬದುಕು ಕಟ್ಟಿಕೊಳ್ಳಲು ಬಯಸುವುದನ್ನು  ನಾವು ನೀವೆಲ್ಲಾ ಪ್ರಯತ್ನಿಸ ಬೇಕೆಂದು  ಮನವಿ ಮಾಡಿಕೊಂಡರು.
ಇಲ್ಲಿ ಗಿರ್, ಕಾಂಕ್ರಿಜ್, ಸಾಯಿವಾಲ ದಂತಹ  ಹಲವು ಜಾತಿಯ ದೇಶಿಯ ತಳಿಗಳನ್ನು ಸಾಕುತ್ತಿದ್ದೇವೆ. ಇಂದಿನ ಹಲವು ರೋಗಗಳಿಗೆ ರಾಸಾಯನಿಕ ಮಿಶ್ರಿತ ಹಾಲುಗಳೇ ಕಾರಣವಾಗುವ, ಕಾರಣ ರೋಗ ಮುಕ್ತ ಸಮಾಜಕ್ಕೆ ಪ್ರಯತ್ನಿಸುವುದು ಕೂಡ ನಮ್ಮ ಕರ್ತವ್ಯವಾಗಿದೆ.
ಜೊತೆಗೆ ಗೋವಿನ ಸೇವೆ ಮಾಡಬೇಕು, ಪೂಜೆ ಮಾಡ ಬೇಕೆಂಬ  ಆಸಕ್ತರಿಗೆ ತಿಂಗಳ  ಪ್ರತಿ ಆದಿತ್ಯವಾರ ದಂದು ಗೋಪೂಜೆ , ಗೋಗ್ರಾಸ ಸೇವೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಕಾರ್ಕಳದ ಉಪನ್ಯಾಸಕಿ ಅಕ್ಷಯ  ಗೋಖಲೆ ಮನುಷ್ಯರಿಗೆ  ಗೋವಿನಿಂದ ಸಿಗುವ ಉಪಕಾರಗಳ ಬಗ್ಗೆ ಮಾಹಿತಿ ನೀಡಿ  ಗೊಸ್ಮರಣೆ   ಮಾಡಿದರು. ಧರ್ಮಪತ್ನಿ ಸವಿತಾ ರಾಮಕೃಷ್ಣ ಆಚಾರ್ ರವರು  ಸ್ವಾಗತಿಸಿ ಅತಿಥಿಗಳ ಪರಿಚಯಿಸಿದರು. ಡಾ.ಜಯಪ್ರಕಾಶ ಮಾವಿನಕುಳಿ, ಕಾರ್ಯಕ್ರಮ ನಿರೂಪಿಸಿದರು. 
ಕಾರ್ಯಕ್ರಮದಲ್ಲಿ  ಸಂಜೀವಿನಿ ಪಾರ್ಮ್ ಮತ್ತು ಡೇರಿ ಟ್ರಸ್ಟಿ ಸವಿತಾ ಆರ್. ಆಚಾರ್, ಕಾರ್ಕಳದ ಪೊಲೀಸ್ ವೃತ್ತ ನಿರೀಕ್ಷಕ ರಾದ ಸಂಪತ್ ಕುಮಾರ್, ಕಾರ್ಕಳ, ಹೆಬ್ರಿ, ಅಜೇಕಾರ್ ಠಾಣೆಯ  ಸಬ್ಇನ್ಸ್ಪೆಕ್ಟರ್, ಮಂಗ ಳೂರು,ಮೂಡಬಿದ್ರಿ, ಉಡುಪಿ, ಕಾರ್ಕಳ, ಹೆಬ್ರಿ, ಮುನಿಯಾಲ್ ಪರಿಸರದ ಗಣ್ಯರು, ಉದ್ಯಮಿಗಳು ಉಪಸ್ಥಿತಿದ್ದರು.
 
 
 
 
 
 
 
 
 

Leave a Reply