ಬಾಲಕಿಯರ ಪ. ಪೂ ಕಾಲೇಜಿನಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ಉಡುಪಿ: ಬಾಲಕಿಯರ ಪ. ಪೂ ಕಾಲೇಜಿನ ಪ್ರೌಢಶಾಲಾ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ದ. ಕ ಜಿಲ್ಲಾ ಮೀನುಗಾರಿಕಾ ಫೆಡರೇಷನ್‌ ಅಧ್ಯಕ್ಷ ಯಶಪಾಲ್ ಸುವರ್ಣ ಉದ್ಘಾಟಿಸಿದರು.

ಜಿಲ್ಲಾ ಸಾ ಶಿ ಇಲಾಖಾ ಉಪನಿರ್ದೇಶಕ ಎನ್ ಎಚ್ ನಾಗೂರು ಮಾತನಾಡಿ, ಹೆಣ್ಣು ಮಕ್ಕಳು ಸುಶಿಕ್ಷಿತಾರಾದರೆ ಮಾತ್ರ ಸಮಾಜದ ಕೆಟ್ಟ ಪದ್ದತಿಗಳನ್ನು ಹೋಗಲಾಡಿಸಲು ಸಾಧ್ಯ. ಸರಕಾರವು ಹೆಣ್ಣು ಮಕ್ಕಳಿಗೆ ನೀಡುವ ವಿಶೇಷ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಂಡು ದೇಶ ಸದೃಢಗೊಳಿಸುವ ಕಾಯಕದಲ್ಲಿ ಭಾಗಿಯಾಗಬೇಕು ಎಂದರು.

ಸಂಸ್ಥೆಯ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ತಾರಾದೇವಿ,ಸದಸ್ಯೆ ಪದ್ಮಾ ಕಿಣಿ, ಹಿರಿಯ ಶಿಕ್ಷಕಿ ಜಯಲಕ್ಷ್ಮಿ, ಎನ್ ಎಸ್ ಎಸ್ ಸಂಯೋಜಕಿ ಮಂಜುಳಾ ಕೆ ,ನಾಯಕಿ ನೇಹಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ವಿಶ್ವನಾಥ ಬಾಯರಿ ಸ್ವಾಗತಿಸಿ, ಶಿಕ್ಷಕಿ ಇಂದಿರಾ ವಂದಿಸಿದರು. ಶೇಕರ ಬೋವಿ ನಿರೂಪಿಸಿದರು. ವಿದ್ಯಾರ್ಥಿಗಳಿಗೆ ನಡೆದ ಹಲವು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.

 
 
 
 
 
 
 
 
 
 
 

Leave a Reply