ಕೋಟ:ಕರಾವಳಿಯ ಮಣ್ಣಿಗೆ ಶೈಕ್ಷಣಿಕ ಕಂಪನ್ನು ಆನಂದ್ ಸಿ ಕುಂದರ್ ಪಸರಿಸಿದ್ದಾರೆ ಜೊತೆಗೆ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ಖಾಸಗಿ ಶಾಲೆಗಳಿಗೆ ಸರಿಸಮಾನವಾಗಿ ನಿಲ್ಲುವಂತೆ ಮಾಡಿರುವುದು ಶ್ಲಾಘನಾರ್ಯ ಎಂದು ಉಡುಪಿಯ ಡಯಟ್ ಶಿಕ್ಷಣ ಸಂಸ್ಥೆಯ ಉಪ ಪ್ರಾಂಶುಪಾಲ ಅಶೋಕ ಕಾಮತ್ ಹೇಳಿದ್ದಾರೆ
ಕೋಟದ ಮಣೂರು ಪಡುಕರೆ ಗೀತಾನಂದ ಫೌಂಡೇಶನ್ ಮಣೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕೆ.ಸಿ ಕುಂದರ್ ಸ್ಮರಣಾರ್ಥ ಸಹೋದರರ ಸಭಾಂಗಣದಲ್ಲಿ ಆನಂದೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆಗಿನ ಜಿಲ್ಲಾ ಪರಿಷತ್ ಅಧ್ಯಕ್ಷ ಕೆ.ಸಿ ಕುಂದರ್ ಕರಾವಳಿ ಭಾಗದ ಕಡಲ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕನಸನ್ನು ಸಾಕಾರಗೊಳಿಸಿದರು.ಆದರೆ ಅವರ ಸಹೋದರ ಆನಂದ್ ಸಿ ಕುಂದರ್ ಇಲ್ಲಿನ ಎಲ್ಲಾ ಭಾಗಗಳ ಶೈಕ್ಷಣಿಕ ಕಾರ್ಯಕ್ಕೆ ಪುನರ್ಜನ್ಮ ನೀಡುವ ಕೆಲಸ ಮಾಡಿದ್ದಾರೆ ಇದೊಂದು ಪ್ರಶಂಸನೀಯ ಕಾರ್ಯವಾಗಿದೆ.ಒಂದು ಸರಕಾರಿ ಶಾಲೆಯನ್ನು ಈ ಮಟ್ಟದಲ್ಲಿ ಕೊಂಡ್ಯೊಯ್ದ ಕೀರ್ತಿ ಗೀತಾನಂದ ಟ್ರಸ್ಟ್ ಗೆ ಸಲ್ಲಬೇಕಾಗಿದೆ ತಾನು ನೀಡುವ ಸಹಾಯವನ್ನು ಜಿಲ್ಲಾ ವ್ಯಾಪ್ತಿಯ ಹೆಚ್ಚಿನ ಶಾಲೆಗಳಿಗೆ ವಿಸ್ತರಿಸುವ ಮನೋಭಿಲಾಷೆ ಸರ್ವ ಶ್ರೇಷ್ಠವಾದದ್ದು. ಪ್ರಸ್ತುತ ಶೈಕ್ಷಣಿಕ ಕಾರ್ಯದಲ್ಲಿ ವಿದ್ಯಾರ್ಥಿಗಳು ಮೊಬೈಲ್ ವ್ಯಾಮೋಹದಿಂದ ಹೊರಬರಬೇಕಾದ ಅಗತ್ಯತೆ ಇದೆ ಈ ವಿಚಾರದಲ್ಲಿ ಪೋಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕಾದ ಅಗತ್ಯತೆ ಇದೆ ಎಂದು ಮನಗಾಣಿಸಿದರಲ್ಲದೆ ವಿದ್ಯಾರ್ಥಿಗಳು ತಮ್ಮಶೈಕ್ಷಣಿಕ ಬದುಕಿನಲ್ಲಿ ಸಾಧನೆಯ ಮೆಟ್ಟಿಲು ಏರಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಇತ್ತೀಚಿಗೆ ಮಣೂರು ಪಡುಕರೆ ಶಾಲೆಯಲ್ಲಿ ರಾಷ್ಟç ಮಟ್ಟಕ್ಕೆ ಆಯ್ಕೆಯಾದ ಶಿಕ್ಷಕಿ ಜಿ.ನಾಗರತ್ನ ರವನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ವಿಶಿಷ್ಟ ರೀತಿಯಲ್ಲಿ ತೆರ್ಗಡೆಯಾದ ೩೧ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಲ್ಲಿಸಲಾಯಿತು.ಒಟ್ಟು ಜಿಲ್ಲೆಯ ೨೨ಶಾಲೆಗಳ ೩,೫೦೦ಸಾವಿರಕ್ಕೂ ಅಧಿಕ ಮಕ್ಕಳಿಗೆ ನೋಟ್ ಬುಕ್ ಅನ್ನು ಆಯಾ ಶಾಲೆಯ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.