​ಗಾಂಧಿ ಆಸ್ಪತ್ರೆಯಿಂದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಾಥ್

ದೇಶದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರಕಾರದ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಲು ಗಾಂಧಿ ಆಸ್ಪತ್ರೆಯ ವತಿಯಿಂದ ಭಾರತದ ತ್ರಿವರ್ಣ ಧ್ವಜದ ಮಹತ್ವ ವಿವರಿಸಿ, ಎಲ್ಲಾ ಸಿಬ್ಬಂದಿಗಳಿಗೆ ಧ್ವಜವನ್ನು ನೀಡುವ  ಕಾರ್ಯಕ್ರಮ ನೆರವೇರಿಸಲಾಯಿತು. 
 
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ. ಆರ್. ರವರು ಹರ್ ಘರ್ ತಿರಂಗಾ ಅಭಿಯಾನದ ಸಂಪೂರ್ಣ ಮಾಹಿತಿಯನ್ನು ನೀಡಿದರು. ಅಗಸ್ಟ್ 13ರಿಂದ 15ರವರೆಗೆ 3 ದಿನ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಧ್ವಜವನ್ನು ಹಾರಿಸಬೇಕು ಮತ್ತು ಧ್ವಜ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು. 
 
ಡಾ. ಸುರೇಶ್ ಹೆಗ್ಡೆಯವರು ಹರ್ ಘರ್ ತಿರಂಗಾ ಅಭಿಯಾನಕ್ಕೆ ಶುಭ ಹಾರೈಸಿದರು. ಆಸ್ಪತ್ರೆಯ ಆಡಳಿತ ನಿರ್ದೇಶಕ ಎಂ. ಹರಿಶ್ಚಂದ್ರರವರು  ಸ್ವಾತಂತ್ರೋತ್ಸವದ  ಮತ್ತು  ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ಪ್ರಸ್ತಾವಿಸಿದರು. ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿಯವರು ಕಾರ್ಯಕ್ರಮ ನಿರೂಪಿಸಿದರು. ಪಂಚಮಿ ಟ್ರಸ್ಟ್(ರಿ) ಮತ್ತು ಪಂಚಲಹರಿ ಫೌಂಡೇಶನ್(ರಿ) ವತಿಯಿಂದ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಭಾರತದ ಧ್ವಜವನ್ನು ನೀಡಲಾಯಿತು.

 

 

 
 
 
 
 
 
 
 
 

Leave a Reply