ಗಾಂಧಿ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ

ಗಾಂಧಿ ಆಸ್ಪತ್ರೆಯಲ್ಲಿ 75ನೇ   ಸ್ವಾತಂತ್ರ್ಯೋತ್ಸವದಲ್ಲಿ ಭಾರತೀಯ ಸೇನೆಯ ಮಾಜಿ ಅಧಿಕಾರಿ ಸುಬೇದಾರ್ ಮೇಜರ್ ಪಿ. ರಘುಪತಿ ರಾವ್‌ರವರು ಧ್ವಜಾರೋಹಣಗೈದು ಸ್ವಾತಂತ್ರ್ಯೋತ್ಸವದಲ್ಲಿ ಮಹತ್ವ, ದೇಶದ ಸಂಸ್ಕೃತಿಯ ಬಗ್ಗೆ ಮತ್ತು ಗಾಂಧಿ ಆಸ್ಪತ್ರೆಯ ಸಾಮಾಜಿಕ ಕಳಕಳಿಯ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. 
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ದೇಶಕ್ಕಾಗಿ ಸೇವೆ ಸಲ್ಲಿಸಿದ ಸುಬೇದಾರ್ ಮೇಜರ್ ಪಿ. ರಘುಪತಿ ರಾವ್‌ರನ್ನು ಸನ್ಮಾನಿಸ ಲಾಯಿತು ಇದೇ ಸಂದರ್ಭದಲ್ಲಿ ಉಡುಪಿ ನಗರ ಸಭೆಯ ಪೌರ ಕಾರ್ಮಿಕರನ್ನು ಹಾಗೂ ಆಸ್ಪತ್ರೆಯ ತ್ಯಾಜ್ಯ ವಿಲೇವಾರಿ ಮಾಡುವ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಶೈಕ್ಷಣಿಕ ಕ್ಷೇತ್ರಕ್ಕೆ ಸಂಬ೦ದಪಟ್ಟ೦ತೆ ಗ್ರಾಮಿಣ ಭಾಗದ ಹಾಗೂ ಸರಕಾರಿ ಒಳಕಾಡು ಶಾಲೆ ಮತ್ತು ಉಡುಪಿ ಜಿಲ್ಲೆಯ ಪ್ರತಿಭಾವಂತ ಪ್ರತಿಭೆಗಳಾದ ರೋಹಿತ್ ಕಾರಂತ್, ಶ್ರೀರಾಮ್ ಆಚಾರ್ಯ, ಕೇದಾರ್ ನಾಯಕ್, ಪ್ರಮಥ್ ಭಾಗವತ್, ಅಮೃತ ಪಿ. ಭಕ್ತ, ಪ್ರಜ್ಞಾ ಶೆಟ್ಟಿ ಮತ್ತು ಸಂಹಿತಾ ಎಸ್. ರಾವ್‌ರವರನ್ನು ಸನ್ಮಾನಿಸ ಲಾಯಿತು. 
ಹಲವು ಸಿಬ್ಬಂದಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲಾಯಿತು. ಆಸ್ಪತ್ರೆಯ ವತಿಯಿಂದ ಕಳೆದ 271ವಾರಗಳಿಂದ ನಡೆಸುವ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವ ರಾಜೇಶ್ ಭಟ್ ಪಣಿಯಾಡಿಯವರನ್ನು ಗೌರವಿಸಲಾಯಿತು. ವಿಶೇಷ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಉಡುಪಿಯ ಉಪ್ಪೂರು ಸಾಲ್ಮರದ ಸ್ಪಂದನ ಶಾಲೆಯ ಪ್ರಮುಖರಾದ ಜನಾರ್ದನ ಅವರಿಗೆ ಸಹಾಯಧನ ಹಸ್ತಾಂತರಿಸಲಾಯಿತು. ಕೊರೋನಾ ಸಂದಿಗ್ಧತೆಯ ಸಮಯದಲ್ಲಿ ಕೊರೋನಾ ವಾರಿಯರ್ಸ್ಯಾಗಿ ದುಡಿದ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಶುಭ ಹಾರೈಸಲಾಯಿತು. 
ಪರಿಸರ ಕಾಳಜಿಯ ಪ್ರಯುಕ್ತ ಹಲವಾರು ರೀತಿಯ ಸಸಿಗಳನ್ನು ವಿತರಿಸಲಾಯಿತು. ಡಾ. ಸುರೇಶ್ ಹೆಗ್ಡೆ, ಡಾ. ಕಿರಣ್ ಕುಮಾರ್, ಡಾ. ಹರ್ಷ ಶೆಟ್ಟಿ, ಡಾ. ವೈ. ಎಸ್. ರಾವ್, ಡಾ. ವಿದ್ಯಾ ವಿ. ತಂತ್ರಿ, ಹಯವದನ ಭಟ್, ದಾಮೋದರ್ ಎಂ. ಭಟ್, ಪಿ. ಆರ್. ಯಾಶೋದಾ ಹಾಗೂ ಪಂಚಮಿ ಟ್ರಸ್ಟ್ನ ಶ್ರೀಮತಿ ಲಕ್ಷ್ಮೀ ಹರಿಶ್ಚಂದ್ರ ರವರು ಉಪಸ್ಥಿತರಿದ್ದರು. 
ಆಸ್ಪತ್ರೆಯ ಆಡಳಿತ ನಿರ್ದೇಶಕ ಎಂ. ಹರಿಶ್ಚಂದ್ರರವರು  ಸ್ವಾತಂತ್ರ್ಯೋತ್ಸವ  ಯುವ ಜನಾಂಗದ ಸಾಮಾಜಿಕ ಜವಾಬ್ದಾರಿ ಮತ್ತು ಕರ್ತವ್ಯ ನಿಷ್ಠೆಯ ಬಗ್ಗೆ ಪ್ರಸ್ತಾವಿಸಿದರು. ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ ಸ್ವಾಗತಿಸಿದರು. ಶ್ವೇತಾರವರು ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
 
 
 
 
 
 
 
 
 
 
 

Leave a Reply