ಶ್ರೀ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ರಾಷ್ಟ್ರೀಯ ಪ್ರಶಸ್ತಿ- 2022 ಪ್ರಧಾನ

ದಿನಾಂಕ: 28/08/2022 ರಂದು ಅಶ್ವಿನಿ ಪ್ರಕಾಶನ ಗದಗ ಇವರ 35 ನೆಯ ವರ್ಷದ ಅಂಗವಾಗಿ 100 ಕೃತಿಗಳ ಅನಾವರಣ ಸಂಭ್ರಮ, ಮತ್ತು ಸಾಹಿತ್ಯ ಸಮ್ಮೇಳನ ಮತ್ತು ಶ್ರೀ ಹಾನಗಲ್ ಕುಮಾರೇಶ್ವರ ಹಾಗೂ ಶ್ರೀ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ರಾಷ್ಟ್ರೀಯ ಪ್ರಶಸ್ತಿ- 2022 ಪ್ರಧಾನ ಕಾರ್ಯಕ್ರಮವು ಶ್ರೀ ವೀರೇಶ್ವರ ಪುಣ್ಯಶ್ರಮ ಗದಗ ಇಲ್ಲಿ ಜರುಗಿತು. ಈ ಸಂದರ್ಭದಲ್ಲಿ ನಾಡಿನ ಪ್ರಸಿದ್ಧ ಜಾನಪದ ಗಾಯಕ ಸಂಘಟಕ ಡಾ.ಗಣೇಶ್ ಗಂಗೊಳ್ಳಿ ಅವರಿಗೆ 32 ವರ್ಷಗಳ ಜಾನಪದ ಸಂಗೀತ ಮತ್ತು ಸಂಘಟನಾ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ರಾಷ್ಟ್ರೀಯ ಪ್ರಶಸ್ತಿಯನ್ನು ಪರಮ ಪೂಜ್ಯ ಡಾ.ಕಲ್ಲಯ ಅಜ್ಜನವರು ಪೀಠ ಅಧಿಪತಿ ವೀರೇಶ್ವರ ಪುಣ್ಯಶ್ರಮ ಗದಗ ಇವರು ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಪ್ರಧಾನ ಮಾಡಿದರು… ಕಾರ್ಯಕ್ರಮದ ಸಂಘಟಕರು ಮತ್ತು ಸಾಹಿತಿಗಳು ಆದ ಶ್ರೀಮತಿ ವೀ.ಬೀ. ಹಿರೇಮಠ ಇವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply