ತುಳುನಾಡ ಸಂಸ್ಕೃತಿಗೆ ಅವಮಾನಿಸಿದ ಫೆವಿಕಾಲ್

ದಕ್ಷಿಣ ಕನ್ನಡ: ತುಳುನಾಡ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಗಂಡು ಕಲೆ ಯಕ್ಷಗಾನವನ್ನು ಫೆವಿಕಾಲ್ ಕಂಪನಿಯು ತನ್ನ ನೂತನ ವೀಡಿಯೋ ಜಾಹೀರಾತಿನಲ್ಲಿ ಕೆಟ್ಟದಾಗಿ ಚಿತ್ರೀಕರಿಸಿ ಅವಮಾನಿಸಿದೆ.ಮೂಲತಃ ಯಕ್ಷಗಾನ ಎಂಬುದು ಗಾಂಭೀರ್ಯ ಪ್ರದಾನವಾದ ಗಂಡುಕಲೆ. ಪ್ರತಿಯೊರ್ವ ಕಲಾವಿದನು ರಂಗಸ್ಥಳ ಏರುವ ಮೊದಲು ದೇವರಲ್ಲಿ ಪ್ರಾರ್ಥಿಸಿ ರಂಗಸ್ಥಳಕ್ಕೆ ನಮಿಸಿ ವೇದಿಕೆ ಏರುತ್ತಾರೆ. ಹಾಗೆ ಯಕ್ಷಗಾನದಲ್ಲಿ ಬರುವ ಹಾಸ್ಯವೂ ಕೂಡ ತನ್ನದೇ ಆದ ಚೌಕಟ್ಟಿನಲ್ಲಿ ಇದೆ.

ಆದರೆ ಫೆವಿಕಾಲ್ ಕಂಪನಿಯ ನೂತನ ಜಾಹಿರಾತಿನಲ್ಲಿ ಸಂಪೂರ್ಣ ರಂಗಸ್ಥಳವನ್ನೆ ಹಾಸ್ಯಾಸ್ಪದವಾಗಿ ತೋರಿಸಿದ್ದು ಕಲೆಗೆ ಮಾಡಿದ ಅವಮಾನ ಎಂದು ಯಕ್ಷಗಾನ ಪ್ರೇಮಿಗಳು ತುಳುವರು ಸೇರಿದಂತೆ ಕರಾವಳಿ ಕರ್ನಾಟಕದ ಜನರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಜಾಹಿರಾತಿನಲ್ಲಿ ತೆಂಕು ತಿಟ್ಟಿನ ಯಕ್ಷಗಾನ ಪ್ರದರ್ಶನದ ವೇಳೆ ರಂಗಸ್ಥಳದಲ್ಲಿ ಸಿಂಹಾಸನದಲ್ಲಿ ವೇಷಧಾರಿ ಕುಳಿತುಕೊಳ್ಳುವಾಗ ಸಿಂಹಾಸನ ಮುರಿದು ಬೀಳುತ್ತದೆ. ಬಳಿಕ ವೇಷದಾರಿ ಹಿಮ್ಮೆಳದವರನ್ನ ಓಡಿಸಿಕೊಂಡು ಹೋಗುವಂತೆ ಚಿತ್ರೀಕರಣ ಮಾಡಿದ್ದು. ಸಿಂಹಾಸನ ವನ್ನು ಫೆವಿಕಾಲ್‌ನಿಂದ ಅಂಟಿಸಿದ್ದರೆ ಈ ಪ್ರಸಂಗ ಏರ್ಪಡುತ್ತಿರಲಿಲ್ಲ ಎಂಬುದಾಗಿ ಇದೆ.

ಈ ಜಾಹಿರಾತು ಕರಾವಳಿಯ ಯಕ್ಷಗಾನ ಕಲೆಗೆ ಮಾಡಿದ ಅಪಮಾನವಾಗಿದ್ದು…ಸಂಸ್ಥೆ ಕೂಡಲೇ ಬಹಿರಂಗ ಕ್ಷಮೆಯನ್ನು ಕೇಳಬೇಕು ಹಾಗು ಜಾಹೀರಾತನ್ನು ಟಿವಿಯಲ್ಲಿ ಪ್ರದರ್ಶಿಸುತ್ತಿರು ವುದನ್ನು ಈ ಕೂಡಲೇ ಸ್ಥಗಿತಗೊಳಿಸಬೇಕೆಂದು ಯಕ್ಷಪ್ರೇಮಿಗಳು ಸೇರಿದಂತೆ ಸಾರ್ವಜನಿಕಕರು ನಿರಂತರವಾಗಿ ಆಗ್ರಹಿಸುತ್ತಿದ್ದಾರೆ.

ಈ ವಿಷಯದ ಕುರಿತು ಶಾಸಕ ವೇದವ್ಯಾಸ ಕಾಮತ್ ಕೂಡ ಅಭಿಪ್ರಾಯ ವ್ಯಕ್ತಪಡಿಸಿ, ಜಾಹಿರಾತು ಸಂಸ್ಥೆಯು ಕ್ಷಮೆ ಕೇಳಬೇಕಾಗಿ ಆಗ್ರಹಿಸದ್ದಾರೆ.ಅಲ್ಲದೆ ಸಾಮಾಜಿಕ ಕಾರ್ಯಕರ್ತ ದಿಲ್ ರಾಜ್ ಆಳ್ವ ಅವರು, ಫೆವಿಕಾಲ್ ನಂತಹ ಕಂಪನಿಗಳು ತಮ್ಮ ಪ್ರೋಡಕ್ಟ್ಗಳ ಮಾರ್ಕೆಟ್ ಮಾಡುವ ಸಲುವಾಗಿ ಹೇಸಿಗೆ ತಿನ್ನಲೂ ಹೇಸುವುದಿಲ್ಲ ಅಂದೆನಿಸುತ್ತೆ.

ಯಾಕೆ ಎಂದರೆ ಎಂಥಹ ಕೀಳುಮಟ್ಟಕ್ಕೂ ಇಳಿದು ಅವರು ಜಾಹಿರಾತುಗಳನ್ನು ತಯಾರಿಸುತ್ತಾರೆ. ಕಲೆ ಸಂಸ್ಕೃತಿ ನಾಡು ನುಡಿಯ ಬಗ್ಗೆಯೂ ಅವಹೇಳನ ಮಾಡಿ ಇವರು ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತ, ತಮ್ಮ ಪ್ರಾಡಕ್ಟ್ಗಳ ಜಾಹೀರಾತು ತಯಾರಿಸಿ ಕೀಳುಮಟ್ಟದ ಪ್ರದರ್ಶನ ಮಾಡುತ್ತಾರೆ ಎಂದು ಆಗ್ರಹಿಸಿದ್ದಾರೆ.

ಇನ್ನು ಫೆವಿಕಾಲ್ ಕಂಪನಿ ತನ್ನ ಅಂಟು ಮಾರಾಟ ಮಾಡಲೋಸುಗ ನಮ್ಮ ದೈವೀಕಲೆ ಯಕ್ಷಗಾನ ಹಾಗೂ ಪಾತ್ರಗಳನ್ನು ಅವಹೇಳನ ಕಾರಿಯಾಗಿ ಬಿಂಬಿಸಿ,ಅವಮಾನಕಾರಿಯಾಗಿ ಚಿತ್ರಿಸಿ, ಜಾಹೀರಾತನ್ನು ತಯಾರಿಸಲಾಗಿದೆ. ಇದು ಯಕ್ಷಗಾನದ ಕಲೆಗೆ ಮಾಡಿದ ಅವಮಾನ. ಅಷ್ಟೇ ಅಲ್ಲದೆ ತುಳುನಾಡಿನ ಜನರ ಭಾವನೆಗಳ ಮೇಲೆ ಘಾಸಿ ಉಂಟುಮಾಡಲಾಗಿದೆ. ಸಂಬಂಧಪಟ್ಟವರು ಶೀಘ್ರದಲ್ಲಿ ಈ ಜಾಹೀರಾತನ್ನು ಹಿಂಪಡೆದು ಕ್ಷಮೆಕೇಳಲೇಬೇಕು ಎಂದು ದಿಲ್‌ರಾಜ್ ಆಳ್ವ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 
 
 
 
 
 
 
 
 
 
 

Leave a Reply