ತಂದೆ ಮನೆಯಲ್ಲಿ ಮಗನಿಗಿದ್ದ ಸ್ವಾತಂತ್ರ್ಯ, ಮಗನ ಮನೆಯಲ್ಲಿ ತಂದೆಗಿರುವುದಿಲ್ಲ ~ ಡಾ. ಶಶಿಕಿರಣ್ ಶೆಟ್ಟಿ

45 ವರ್ಷದ ಹಿಂದೆ ಆ ಚಿಕ್ಕ ಮನೆಯಲ್ಲಿ ಮಗ ಓಡಾಡಿ, ಕೂಗಾಡಿ ಕುಣಿದಾಡುತ್ತಿದ್ದದನ್ನು ನೋಡಿ ಖುಷಿ ಪಡುತ್ತಿದ್ದರು ಆ ತಂದೆ ತಾಯಿ. ಇಂದು ತಂದೆಗೆ 90 ವರ್ಷ ತಾಯಿಗೆ 80 ಮಗನ ದೊಡ್ಡ ಬಂಗಲೆಯ ಮೂಲೆಯ ಒಂದು ಚಿಕ್ಕ ರೂಮಿ ನೊಳಗೆ ಬಂದಿಯಾಗಿದ್ದಾರೆ.

ಕೆಮ್ಮುತ್ತಿರುವ ತಂದೆಗೆ ತಾಯಿ ಪದೇ ಪದೇ ಹೇಳುತ್ತಾಳೆ ರೂಮಿಂದ ಹೊರಗೆ ಹೋಗಬೇಡಿ ಎಂದು.
ಹಾಗೇ ಮೊನ್ನೆ ಹೊರಗಡೆ ಹೋಗಿ ಕೆಮ್ಮುತ್ತಿದ್ದಾಗ. ಅತ್ತೆ ರೂಮೊಳಗೆ ಕೆಮ್ಮ ಬಾರದೆ ಇಲ್ಲಿ ಮಕ್ಕಳೆಲ್ಲ ಓಡಾಡುತ್ತಿರುತ್ತಾರೆ, ಎಂದ ಸೊಸೆಯ ಅಧಿಕಾರಯುತ ಮಾತುಗಳು ನೆನಪಾಗಿತ್ತು. ತನ್ನ ಗಂಡನಿಗೆ ಇಂತಹ ಮಾತುಗಳು ಬೇಸರ ತರಿಸಬಹುದು ಎಂಬುದು ಆ ಕ್ಷಣದಲ್ಲಿ ಆಕೆಯ ಮನಸ್ಸಿನಲ್ಲಿ ಹುದುಗಿದ್ದ ಭಾವನೆಯಗಿತ್ತು.

ಅದೆಷ್ಟು ಸತ್ಯ ನೋಡಿ,ನಮ್ಮ ಸಮಾಜದಲ್ಲಿ ಅದೆಷ್ಟೋ ಮನೆಗಳಲ್ಲಿ ಇಂದು ಒಂದು ಕಾಲದಲ್ಲಿ ರಾಜರಂತೆ ಇದ್ದ ಹಿರಿಯರು ಇಂದು ಮನೆಯ ಮೂಲೆಯಲ್ಲೋ, ಟಾಯ್ಲೆಟ್ ಪಕ್ಕದ ರೂಮಿನಲ್ಲೋ, ವೃದ್ದಾಶ್ರಮದ ಒದ್ದೆ ಹಾಸಿಗೆಯಲ್ಲೋ ತಮ್ಮಜೀವನ ದ ಕೊನೆಯ ಗಳಿಗೆಯನ್ನು ಕಳೆಯುತ್ತಿದ್ದಾರೆ…. ಯಾಕೆಂದರೆ.

ತಂದೆ ಮನೆಯಲ್ಲಿ ಮಗನಿಗಿದ್ದ ಸ್ವಾತಂತ್ರ್ಯ,ಮಗನ ಮನೆಯಲ್ಲಿ ತಂದೆಗಿರುವುದಿಲ್ಲ.

 
 
 
 
 
 
 
 
 
 
 

Leave a Reply