ರೈತ ಸಮುದಾಯವು ಕೃಷಿಯ ಬಗ್ಗೆ ನಿರಾಸಕ್ತಿಗೆ ಜನಪ್ರತಿನಿಧಿಗಳೇ ಕಾರಣ – ಕೆ.ವಿ ರಮೇಶ್ ರಾವ್

ಕೋಟ: ರೈತನೇ ಈ ದೇಶದ ಬೆನ್ನೆಲುಬು ಎನ್ನುವುದು ಬರಿ ಘೋಷಣೆಗೆ ಸೀಮಿತಗೊಂಡಿದೆ ಅವರ ಬಗ್ಗೆ ಸರಕಾರದ ಜನಪ್ರತಿನಿಧಿಗಳಿಗೆ ಕಾಳಜಿ ಶೂನ್ಯ ಎಂದು ಪಾಂಡೇಶ್ವರದ ರಕ್ತೇಶ್ವರಿ ದೇವಳದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಪಾಂಡೇಶ್ವರ ಹೇಳಿದ್ದಾರೆ.

ಶುಕ್ರವಾರ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾ ಮಂಡಲ ಕೋಟ ಇವರ ನೇತ್ರತ್ವದಲ್ಲಿ ಗಿಳಿಯಾರು ಯುವಕ ಮಂಡಲ,ಮಣೂರು ಫ್ರೆಂಡ್ಸ್ ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ,ಗೆಳೆಯರ ಬಳಗ ಕಾರ್ಕಡ ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಹಯೋಗದೊಂದಿಗೆ ೧೫ನೇ ಮಾಲಿಕೆ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ ಅಂಗವಾಗಿ ಪಾಂಡೇಶ್ವರದ ಸಾಧಕ ಹಿರಿಯ ಕೃಷಿಕ ಜೂಲಿಸ್ರ‍್ವಾಚ್ ಇವರನ್ನು ಸನ್ಮಾನಿಸಿ ಮಾತನಾಡಿ ಇತ್ತೀಚಿಗಿನ ದಿನಗಳಲ್ಲಿ ಹಡಿಲು ಭೂಮಿ ಕಷಿ ಮಾಡುವುದನ್ನು ಕೇಳುತ್ತಿದ್ದೇವೆ ಆ ಹಡಿಲು ಭೂಮಿಯಾಗಲು ಕಾರಣ ಯಾರು ಸರಕಾರಿ ನೌಕರರಿಗಿದ್ದ. ಸವಲತ್ತು ರೈತರಿಗೆ ಉಂಟೇ ಹಾಗಾದರೆ ರೈತ ಸಮಯದಾಯದ ಗೋಳು ಕೇಳುವರಿಲ್ಲದೆ ಹಡಿಲು ಬೀಳುವ ಸ್ಥಿತಿ ಉಂಟಾಗಿದೆ ಇದನ್ನೆ ಬಂಡವಾಳವಾಗಿಸಿಕೊAಡ ರಾಜಕಾರಣಿಗಳು ಹಡಿಲುಭೂಮಿ ಹಸನಾಗಿಸಲು ಪ್ರಯತ್ನಿಸುತ್ತಿದ್ದಾರೆ ಇದೆಂಥ ರ್ದೌಭಾಗ್ಯ ರೈತನಿಗೆ ಪ್ರೋತ್ಸಾಹ ನೀಡಿದರೆ ಈ ರೀತಿ ಸನ್ನಿವೇಶ ಎದುರಾದಿತೇ ಎಂದು ಪ್ರಶ್ನಿಸಿದರು.ಮೊದಲು ಈ ದೇಶದ ರೈತನ ಪರಿಸ್ಥಿತಿ ಅವಲೋಕಿಸಿ ಅವರು ಬೆಳೆದ ಬೆಳೆಗಳಿಗೆ ನಿರ್ದಿಷ್ಟ ಬೆಲೆ ನೀಡಿ ಪೋಷಿಸುವ ಕೆಲಸ ಸರಕಾರ ಮಾಡಲಿ ಎಂದು ಆಗ್ರಹಿಸಿ ಒಂದು ಸರಕಾರ ರೈತನನ್ನು ಗುರುತಿಸುವ ಕೆಲಸ ಸಂಘಸAಸ್ಥೆಗಳು ಮಾಡುತ್ತಿವೆ ಇದು ಶ್ಲಾಘನೀಯ ಕಾರ್ಯ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಹಿರಿಯ ಸಾಧಕ ಕೃಷಿಕ ಜೂಲಿಸ್ರ‍್ವಾಚ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ ವಹಿಸಿದ್ದರು.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಉಡುಪಿ ಜಿಲ್ಲಾ ಸಂಯೋಜಕ ರವೀಂದ್ರ ಮೊಗವೀರ ಕೃಷಿ ವಿಮಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಪಾಂಡೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಕಲ್ಪನಾ ದಿನಕರ್,ರೈತಧ್ವನಿ ಸಂಘ ಕೋಟ ಇದರ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಕದ್ರಿ ಮಂಜುನಾಥೇಶ್ಚರ ದೇವಳ ಮಂಗಳೂರು ಇದರ ಟ್ರಸ್ಟಿ ಕುಸುಮಾ ಹೆಚ್ ದೇವಾಡಿಗ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮದ ಸುಜಾತ ಬಾಯರಿ,ಗಿಳಿಯಾರು ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಸುರೇಶ್ ಗಿಳಿಯಾರು, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್,ಹಂದಟ್ಟು ಮಹಿಳಾ ಬಳಗ ಅಧ್ಯಕ್ಷೆ ಪುಷ್ಭಾ ಕೆ ಹಂದಟ್ಟು,ಪಙಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣ ಯುವಕ ಮಂಡಲದ ಕಾರ್ಯದರ್ಶಿ ನಿತೀನ್ ಕುಮಾರ್ ಕೋಟ ಸ್ವಾಗತಿಸಿದರು.ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ವಿಶೇಷತೆ: ಸಾಧಕ ರೈತನ ಗುರುತಿಸುವ ಸರಣಿ ಕಾರ್ಯಕ್ರಮದಲ್ಲಿ ಕೃಷಿಕನ ಮನೆಯಂಗಳದಿ ಅತಿಥಿಗಳ ಸಮ್ಮುಖದಲ್ಲಿ ಗಿಡ ನಡುವ ಕಾರ್ಯ ನಡೆಯಿತು.ಅಲ್ಲದೆ ವಿವಿಧ ತರಹ ಕೃಷಿ ಪರಿಕರ ನೀಡಿ ಗೌರವಿಸಲಾಯಿತು.

ಶುಕ್ರವಾರ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾ ಮಂಡಲ ಕೋಟ ಇವರ ನೇತ್ರತ್ವದಲ್ಲಿ ಗಿಳಿಯಾರು ಯುವಕ ಮಂಡಲ,ಮಣೂರು ಫ್ರೆಂಡ್ಸ್ ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ,ಗೆಳೆಯರ ಬಳಗ ಕಾರ್ಕಡ ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಹಯೋಗದೊಂದಿಗೆ ೧೫ನೇ ಮಾಲಿಕೆ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ ಅಂಗವಾಗಿ ಪಾಂಡೇಶ್ವರದ ಸಾಧಕ ಹಿರಿಯ ಕೃಷಿಕ ಜೂಲಿಸ್ ರೋಚ್ ಇವರನ್ನು ಸನ್ಮಾನಿಸಲಾಯಿತು. ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ, ಪಾಂಡೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಕಲ್ಪನಾ ದಿನಕರ್,ರೈತಧ್ವನಿ ಸಂಘ ಕೋಟ ಇದರ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಕದ್ರಿ ಮಂಜುನಾಥೇಶ್ಚರ ದೇವಳ ಮಂಗಳೂರು ಇದರ ಟ್ರಸ್ಟಿ ಕುಸುಮಾ ಹೆಚ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply