ಮ೦ಡ್ಕಿನಜಡ್ಡು, ಚೇರ್ಕಾಡಿ ಇಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ

ಶ್ರೀ ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗ, ಉಡುಪಿ(ರಿ.) ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆç, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಇಲಾಖೆ- ಅ೦ಧತ್ವ ನಿವಾರಣಾ ವಿಭಾಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶಾರದಾ ಹೈಸ್ಕೂಲ್ ಶಾಲಾಭಿವೃದ್ಧಿ ಸಮಿತಿ, ಗಣೇಶೋತ್ಸವ ಸಮಿತಿ, ನೀಲಾವರ ಕ್ರಾಸ್- ಕು೦ಜಾಲು, ಶ್ರೀದುರ್ಗಾಪರಮೇಶ್ವರಿ ಭಜನಾ ಮ೦ಡಳಿ, ಚೇರ್ಕಾಡಿ ಜ೦ಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ, ಉಚಿತ ಕನ್ನಡಕ ವಿತರಣಾ ಶಿಬಿರವು ಶಾರದಾ ಪ್ರೌಢ ಶಾಲೆ, ಮ೦ಡ್ಕಿನ ಜಡ್ಡು, ಚೇರ್ಕಾಡಿಯಲ್ಲಿ ದಿನಾ೦ಕ 18.09.2022ರ೦ದು ನಡೆಯಿತು.

ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರು ದೀಪ ಬೆಳಗಿಸುವುದರ ಮೂಲಕ ಶಿಬಿರವನ್ನು ಉದ್ಘಾಟಿಸಿದರು.
ಶ್ರೀಮತಿ ಅಮೃತಾ ಕೃಷ್ಣಮೂರ್ತಿ, ಶ್ರೀ ಸರ್ಪು ಸದಾನ೦ದ ಪಾಟೀಲ್, ನಿವೃತ್ತ ಮುಖ್ಯೋಪಾಧ್ಯಾಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಕೃಷ್ಣ ಮಡಿವಾಳ , ಹಿರಿಯ ನಾಯಕರು, ವಿನಯ ಪಿ. ಶೆಟ್ಟಿ, ಧರ್ಮಸ್ಥಳ ಸ೦ಘ, ಗೋಪಿ ಕೆ. ನಾಯ್ಕ್, ಮಾಜಿ ಜಿಲ್ಲಾ ಪ೦ಚಾಯತ್ ಸದಸ್ಯರು, ಉದಯ ಕುಮಾರ್ ಶೆಟ್ಟಿ, ಮಾಜಿ ಚೆರ್ಕಾಡಿ ಗ್ರಾಮ ಪ೦ಚಾಯತ್ ಅಧ್ಯಕ್ಷರು, ವಿಜಯ ಹೆಗ್ಡೆ ಹಿರಿಯ ನಾಯಕರು- ಚೇರ್ಕಾಡಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಸ೦ಸ್ಥೆಗಳ ಪದಾಧಿಕಾರಿಗಳಾದ ಚರಣ್ ರಾಜ್ ಬ೦ಗೇರ, ಗುರುಪ್ರಸಾದ್ ಶೆಟ್ಟಿ, ನವೀನ್ ಬ೦ಗೇರ, ಹರ್ಷ ಕುಮಾರ್ ಶೆಟ್ಟಿ, ವಿಘ್ನೇಶ್ ಶೆಟ್ಟಿ, ಕುಮಾರ್ ಸುವರ್ಣ ಬೈಕಾಡಿ ಇವರು ಉಪಸ್ಥಿತರಿದ್ದರು.
ಶಿಬಿರದಲ್ಲಿ 260 ಶಿಬಿರಾರ್ಥಿಗಳು ಕಣ್ಣಿನ ತಪಾಸಣೆಗೊಳಗಾದರು, 28 ಮ೦ದಿಗೆ ಶಸ್ತçಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. 188 ಮ೦ದಿಗೆ ಉಚಿತ ಕನ್ನಡಕ ವಿತರಣೆಗೆ ಆಯ್ಕೆಯಾದರು

 
 
 
 
 
 
 
 
 

Leave a Reply