ಗಣಪತಿ ವಿಸರ್ಜಿಸಿ ಬರುವಾಗ ವಿದ್ಯುತ್ ಶಾಕ್‌; ಮೂವರು ಮೃತ್ಯು

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಗಣಪತಿ ವಿಸರ್ಜಿಸಿ ಬರುವಾಗ ವಿದ್ಯುತ್ ಶಾಕ್‌ನಿಂದ ಮೂವರು ಮೃತಪಟ್ಟ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಟ್ರ್ಯಾಕ್ಟರ್‌ನಲ್ಲಿದ್ದ ಪೆಂಡಾಲ್‌ಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ರಾಜು (47), ರಚನಾ (35), ಪಾರ್ವತಿ (26) ಮೃತಪಟ್ಟಿದ್ದು, ಆರು ಜನ ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ಗಂಭೀರ ಗಾಯಗೊಂಡ ಸಂಗೀತ ಹಾಗೂ ಪಲ್ಲವಿಯನ್ನು ಹಾಸನಕ್ಕೆ ರವಾನಿಸಲಾಗಿದೆ. ಇನ್ನು ಇಂಜಿನ್ ಮೇಲೆ ಕೂತಿದ್ದ ಡ್ರೈವರ್ ಅಪಾಯದಿಂದ ಪಾರಾಗಿದ್ದು, ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
 
 
 
 
 
 
 
 
 
 

Leave a Reply