ಪ್ರಧಾನಿ ಭೇಟಿ ವೇಳೆ ಡ್ರೋನ್ ಹಾರಾಟ: ಮೂವರ ಬಂಧನ

ಪ್ರಧಾನಿ ನರೇಂದ್ರ  ಮೋದಿ ಅವರ ಗುಜರಾತ್ ಪ್ರವಾಸದ ವೇಳೆ ಭಾರೀ ಭದ್ರತಾಲೋಪ ಸಂಭವಿಸಿದೆ. ಅನುಮತಿಪಡೆಯದೆ ಡ್ರೋನ್ ಮೂಲಕ  ಚಿತ್ರೀಕರಣ ಮಾಡಲಾಗಿದೆ.  ಗುಜರಾತಿನ ಬಾವ್ಲಾದಲ್ಲಿ ಈ ಘಟನೆ ಸಂಭವಿಸಿದೆ.

ಹಾರಾಟ ನಡೆಸುತ್ತಿದ್ದ ಡ್ರೋನ್ ನ್ನು ನಾಶಪಡಿಸಲಾಗಿದೆ. ಪ್ರಕರಣ ಸಂಬಂಧ ರಮೇಶ್ ಪರ್ಮಾರ್, ರಾಕೇಶ್ ಮತ್ತು ರಾಜೇಶ್ ಕುಮಾರ್ ಮಂಗೀಲಾಲ್ ಎಂಬವರನ್ನು ಬಂಧಿಸಲಾಗಿದೆ.

ಭಯೋತ್ಪಾದಕ ಸಂಘಟನೆಗಳು  ಡ್ರೋನ್ ಬಳಸಿ ದಾಳಿ ಮಾಡುವ ಸಾಧ್ಯತೆಯಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಸಭೆಯಲ್ಲಿ ಡ್ರೋನ್ ಹಾರಾಟ ನಿಷೇಧಿಸಲಾಗಿದೆ.

 
 
 
 
 
 
 

Leave a Reply