ಪಾನಮತ್ತ ಚಾಲಕ: ಪರದಾಟದಲ್ಲಿ ಸಿಲುಕಿದ ಪ್ರಯಾಣಿಕ 

ಕಂಠ ಪೂರ್ತಿ ಕುಡಿದ ಚಾಲಕ ರಸ್ತೆ ಮಧ್ಯದಲ್ಲಿ ಲಾರಿಯನ್ನು ನಿಲ್ಲಿಸಿ ನಿದ್ದೆಗೆ ಜಾರಿದ ಘಟನೆ ಮಡಿಕೇರಿ – ಕುಶಾಲನಗರ ಹೆದ್ದಾರಿಯಲ್ಲಿ ಸಂಭವಿಸಿದೆ.

ಮಂಗಳೂರಿನಿಂದ ಕುಶಾಲನಗರಕ್ಕೆ ಟೈಲ್ಸ್ ಸಾಗಿಸುತ್ತಿದ್ದ ಲಾರಿಯ ಚಾಲಕ ಮದ್ಯ ಸೇವಿಸಿದ್ದಾನೆ.

 ಫುಲ್ ಟೈಟ್ ಆಗಿದ್ದರಿಂದ ಲಾರಿ ಚಲಾಯಿಸಲಾಗದೆ ಮಂಪರಿನಲ್ಲಿ ತೇಲುತ್ತಿದ್ದ. ಹೀಗಾಗಿ ರಸ್ತೆ ಮಧ್ಯದಲ್ಲಿಯೇ ಲಾರಿಯನ್ನು ನಿಲ್ಲಿಸಿ ನಿದ್ದೆ ಮಾಡಲಾರಾಂಭಿಸಿದ.

 ನಡು ರಸ್ತೆಯಲ್ಲಿ ನಿಂತ ಲಾರಿಯನ್ನು ಕಂಡವರು ಹೋಗಿ ನೋಡಿದಾಗ ವಿಷಯ ಬಯಲಾಗಿದೆ.

ಚಾಲಕನೊಂದಿಗೆ ಕ್ಲೀನರ್ ಕೂಡ ಗುಂಡಿನ ಮತ್ತಿನಲ್ಲಿದ್ದ ಎಂದು ಹೇಳಲಾಗಿದೆ. ನಂತರ ಲಾರಿಯನ್ನು ರಸ್ತೆ ಬದಿಗೆ ತಂದು ನಿಲ್ಲಿಸಲಾಯಿತು.

ರಸ್ತೆ ಮಧ್ಯದಲ್ಲಿ ಲಾರಿಯನ್ನು ನಿಲ್ಲಿಸದೆ ಮುಂದಕ್ಕೆ ಚಲಾಯಿಸಿದ್ದಿದ್ದರೆ ಭಾರೀ ಅನಾಹುತ ಸಂಭವಿಸಲಿತ್ತು.

ಸ್ಥಳೀಯರು ಬಂದು ನಂತರ ರಸ್ತೆಯನ್ನು ಕ್ಲಿಯರ್ ಮಾಡಿದ್ದಾರೆ. ಲಾರಿ ಬದಿಯಲ್ಲಿ ನಿಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

 
 
 
 
 
 
 
 
 
 
 

Leave a Reply