ದೇಶದಲ್ಲಿ ಬದಲಾವಣೆಯ ಗಾಳಿ: ಡಿ.ಕೆ. ಶಿವಕುಮಾರ್

ಬಿಜೆಪಿ ಬಗ್ಗೆ ಜನರಿಗೆ ಭ್ರಮನಿರಸನ ವಾಗಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯೊಂದಿಗೆ ಮುಂದಿನ ಚುನಾವಣೆಗೆ ತಯಾರಿ ನಡೆಸ ಬೇಕಾಗಿದೆ ಎಂದು ಕಾಪು ತೆಂಕ ಎರ್ಮಾಳು ರಾಜೀವ್ ಗಾಂಧಿ ನ್ಯಾಷನಲ್ ಅಕಾಡಮಿ ಆಫ್ ಪೊಲಿಟಿಕಲ್ ಎಜುಕೇಷನ್ ನಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಡಿಜಿಟಲ್ ಸದಸ್ಯತ್ವ ನೋಂದಣಿ ಶಿಬಿರದ ಉದ್ಘಾಟನೆಯನ್ನು ಮಾಡಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿಕೆ ಶಿವಕುಮಾರ್ ಅವರು ಹೇಳಿದರು.

ಪಕ್ಷದ ಬಲವರ್ಧನೆಗೆ ಹಾಗೂ ನಾಯಕತ್ವ ಹೊರ ಹೊಮ್ಮಲು ಸದಸ್ಯತ್ವ ಅಭಿಯಾನ ಅತಿ ಅಗತ್ಯ. ಡಿಜಿಟಲ್ ಸದಸ್ಯತ್ವ ಅಭಿಯಾನ ದ ವೀಕ್ಷಕರಾಗಿ ನೇಮಕಗೊಂಡ ಮುಖಂಡರು ಮುತುವರ್ಜಿಯಿಂದ ತಮ್ಮ ಜವಾಬ್ದಾರಿಯನ್ನು ನಿರ್ವಹಿಸ ಬೇಕಾಗಿದೆ.

ನೋಂದಣಿ ಕಾರರಾಗಿ ಆಯ್ಕೆಗೊಂಡ ವರು ಮನೆ ಮನೆಗೆ ಹೋಗಿ ಸದಸ್ಯತ್ವ ನೋಂದಣಿ ಮಾಡಬೇಕಾಗಿದೆ. ಪ್ರತಿ ಬೂತ್ ಮಟ್ಟದಲ್ಲಿ ಹೆಚ್ಚಿನ ಸದಸ್ಯತ್ವ ನೋಂದಣಿ ಆಗಬೇಕು. ಯುವಕರು, ಹಿರಿಯರು, ರೈತರು, ನಿರುದ್ಯೋಗಿಗಳು ಹೀಗೆ ಎಲ್ಲ ವಿಭಾಗವನ್ನು ಪ್ರತಿನಿಧಿಸಿ ವಂತೆ ಸದಸ್ಯತ್ವ ವನ್ನು ನೋಂದಣಿ ಮಾಡಿದಲ್ಲಿ ಮುಂದಿನ ದಿನದಲ್ಲಿ ಎಲ್ಲ ವಿಭಾಗಕ್ಕೂ ಪ್ರಾತಿನಿಧ್ಯ ದೊರೆಯುವಂತೆ ಆಗುವುದು ಎಂದರು.

ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಪ್ರಾಸ್ತವಿಕವಾಗಿ ಮಾತನಾಡುತ್ತಾ ದೇಶ ಈಗ ಮತ್ತೊಮ್ಮೆ ಸಂಕಷ್ಟದಲ್ಲಿದೆ. ಬೆಲೆ ಏರಿಕೆ, ನಿರುದ್ಯೋಗ, ಸರ್ವಾಧಿಕಾರ , ಜನವಿರೋಧಿ ಧೋರಣೆಗಳಿಂದ ದೇಶದ ಜನತೆಗೆ ಮುಕ್ತಿ ಬೇಕಾಗಿದೆ. ಭಾರತವನ್ನು ಮತ್ತೆ ಅಭಿವೃದ್ಧಿ ಹಾದಿಗೆ ಮರಳಿಸಬೇಕಾಗಿದೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಬದಲಾವಣೆ ತರಲು ಪಕ್ಷದ ಸದಸ್ಯತ್ವ ಅಭಿಯಾನ ಆರಂಭಿಸಿದೆ.

ಮುಖ್ಯ ನೊಂದನಿದಾರರಿಗೆ ಹೆಚ್ಚಿನ ಜವಾಬ್ದಾರಿ ಇದೆ. ಹೆಚ್ಚಿನ ಮುತುರ್ಜಿಯಿಂದ ನೋಂದಾವಣೆ ಮಾಡಿದ ಪ್ರಮುಖರಿಗೆ ನಾಯಕತ್ವ ಹೊರಹೊಮ್ಮಲು ಅವಕಾಶ, ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಮುಖಂಡತ್ವ ಹೊರಹೊಮ್ಮಲು ಚುನಾವಣೆ ಗಳಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಯೂ ಪ್ರತಿನಿಧಿಗಳನ್ನು ಗುರುತಿಸ ಲಾಗುವುದು ಎಂದರು. ಈ ಸಂದರ್ಭದಲ್ಲಿ ನಿಧನ ಹೊಂದಿದ ಗಾನ ಕೋಗಿಲೆ ಲತಾ ಮಂಗಷ್ಕರ್ ರವರಿಗೆ ಶ್ರದ್ಧಾಂಜಲಿ ಸಲ್ಲಸಲಾಯಿತು.

ಸಭೆಯಲ್ಲಿ ಬಿ.ಎಲ್. ಶಂಕರ್, ಮಂಜುನಾಥ ಭಂಡಾರಿ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್,ಗೋಪಾಲ ಪೂಜಾರಿ, ಹರೀಶ್ ಕುಮಾರ್, ಮಿಥುನ್ ರೈ, ಶರ್ಲಿ ಲೋನ, Dr. Matilda ಡಿಸೋಜಾ, ಮಮತಾ ಗಟ್ಟಿ, ರಘು ನಂದನ್ ರಾಮಣ್ಣ, ವೆರೋನಿಕಾ ಕರ್ನೆಲಿಯೋ, ಮಂಜುನಾಥ ಪೂಜಾರಿ, ಸದಾಶಿವ ದೇವಾಡಿಗ, ನವೀನ್ ಚಂದ್ರ ಸುವರ್ಣ, ಹೆಚ್. ಪ್ರಸಾದ್ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ, ರಮೇಶ್ ಕಾಂಚನ್, ಜ್ಯೋತಿ ಹೆಬ್ಬಾರ್, ಪ್ರಶಾಂತ್ ಜತ್ತನ್ನ, ದಿನೇಶ್ ಪುತ್ರನ್, ಹರೀಶ್ ಶೆಟ್ಟಿ ಪಾಂಗಳ, ಗೀತಾ ವಾಗ್ಲೆ, ಡಾ. ಸುನಿತಾ ಶೆಟ್ಟಿ, ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಕೆ. ಅಣ್ಣಯ್ಯ ಸೇರಿಗಾರ್ ಸ್ವಾಗತಿಸಿದರು, ಕುಶಾಲ್ ಶೆಟ್ಟಿ ಧನ್ಯವಾದ ಸಲ್ಲಿಸಿ, ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply