Janardhan Kodavoor/ Team KaravaliXpress
25.6 C
Udupi
Sunday, July 3, 2022
Sathyanatha Stores Brahmavara

ವಿಕಲಚೇತನ ಫಲಾನುಭವಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳ ವಿತರಿಸುವ ಸಲುವಾಗಿ ಪೂರ್ವಭಾವಿ ತಪಾಸಣೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಇಲಾಖೆ, ಅಲಿಮ್ಕೋ ಆಫ್ ಇಂಡಿಯಾ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ
ಅನುಷ್ಠಾನದಲ್ಲಿರುವ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸಹಯೋಗದೊಂದಿಗೆ ವಿಕಲಚೇತನರಿಗಾಗಿ ಕೇಂದ್ರ ಸರಕಾರದ
ಎ.ಡಿ.ಐ.ಪಿ ಯೋಜನೆಯಡಿ ಗುರುತಿಸಲ್ಪಡುವ ವಿಕಲಚೇತನ ಫಲಾನುಭವಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳಾದ ಗಾಲಿ ಕುರ್ಚಿ, ಶ್ರವಣ ಸಾಧನ, ಕನ್ನಡಕ, ಕೃತಕ ಕಾಲು, ವಾಕರ್, ಊರುಗೋಲು, ವಾಕಿಂಗ್ ಸ್ಟಿಕ್, ಎಲ್.ಎಸ್
ಬೆಲ್ಟ್, ಇತ್ಯಾದಿ ವಿತರಿಸುವ ಸಲುವಾಗಿ ಪೂರ್ವಭಾವಿ ತಪಾಸಣೆ ಶಿಬಿರವು ನಗರದ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯಿತು. ತಪಾಸಣಾ ಶಿಬಿರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಕಾರ್ಯದರ್ಶಿ
ಕೆ. ರತ್ನಾಕರ ಶೆಟ್ಟಿ, ಗೌರವ ಖಚಾಂಚಿ ರಮಾದೇವಿ, ಡಿ.ಡಿ.ಆರ್.ಸಿ ನೋಡಲ್ ಅಧಿಕಾರಿ ಜಯಶ್ರೀ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!