Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಮಗುವನ್ನು‌ ನೇಣಿಗೆ ಹಾಕಿ ಆತ್ಮಹತ್ಯೆ ‌ಮಾಡಿಕೊಂಡ ಬ್ರಹ್ಮಾವರ ಮೂಲದ ತಾಯಿ

ಬೆಂಗಳೂರು: ಮೂರೂವರೆ ವರ್ಷದ ಮಗುವಿನ ಕುತ್ತಿಗೆಗೆ ಶಾಲ್ ಬಿಗಿದು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರಿನ‌‌ ಆರ್ ಆರ್ ನಗರದಲ್ಲಿ ನಡೆದಿದೆ. ಮಗು ರಿಯಾಳನ್ನು ಕೊಂದ ತಾಯಿ ದೀಪಾ (31) ನೇಣು ಬಿಗಿದುಕೊಂಡಿದ್ದಾರೆ. 

ಸ್ಥಳದಲ್ಲಿ ಡೆತ್ ನೋಟು ಸಿಕ್ಕಿದ್ದು, ನನ್ನ ಸಾವಿಗೆ ಯಾರೂ ಕಾರಣರಲ್ಲ.  ಸಾರಿ ಅಮ್ಮ ಎಂದು ಬರೆದಿರುವುದು ಪತ್ತೆಯಾಗಿದೆ.  ಮೂಲತಃ ಬ್ರಹ್ಮಾವರದ ದೀಪಾ ಅವರು RR ನಗರದ ಅಪಾರ್ಟೆಂಟ್ ನಲ್ಲಿ ಪತಿ‌ ಜೊತೆ ವಾಸವಾಗಿದ್ದರು. 

ಕಳೆದ ಒಂದು ವಾರದಿಂದ ಜ್ವರ ಮತ್ತು ಹೊಟ್ಟೆ ನೋವಿನಿಂದ ದೀಪಾ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಜ್ವರ ಮತ್ತು ಹೊಟ್ಟೆ ನೋವು ಹಿನ್ನೆಲೆ ಚಿಕಿತ್ಸೆ ಕೂಡಾ ಪಡೆಯುತ್ತಿದ್ದರು. ಆದರೆ ರಾತ್ರಿ ಎಲ್ಲರೂ ಮಲಗಿದ್ದ ವೇಳೆ ಮಗುವಿನ ಕುತ್ತಿಗೆಗೆ ಶಾಲ್  ಬಿಗಿದು ನೇಣು ಹಾಕಿ ತಾನೂ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!