ಜಿಲ್ಲಾಡಳಿತದ ವತಿಯಿಂದ ಭಗೀರಥ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಜಯಂತಿ ಆಚರಣೆ

ಭಗೀರಥ ಮಹರ್ಷಿ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಜಯಂತಿ ಆಚರಣೆಯನ್ನು ಇಂದು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು, ಈ ಕಾರ್ಯಕ್ರಮದಲ್ಲಿ ಡಾ. ಯು ಸಿ ನಿರಂಜನ್ ಅವರು ಭಗೀರಥ ಮಹರ್ಷಿ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ರ ಸವಿಸ್ತಾರವಾದ ಜೀವನ ಚರಿತ್ರೆಯನ್ನು ಉಪನ್ಯಾಸ ನೀಡಿದರು, ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ನುಡಿ ನಮನ ಸಲ್ಲಿಸಿದರು, ಅಪರ ಜಿಲ್ಲಾಧಿಕಾರಿ ವೀಣಾ ಬಿ ಎನ್ ಮಾತನಾಡಿ ಇಂದಿನ ಯುವ ಪೀಳಿಗೆಗೆ ಮಲ್ಲಮ್ಮ ಹಾಗೂ ಭಗೀರಥ ಮಹರ್ಷಿಗಳ ಜೀವನ ಚರಿತ್ರೆ ಜೀವನಾಧಾರಿತ ವಿಷಯಗಳು ಎಂದರು, 

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಮತ್ತು ಉಡುಪಿ ತಹಶೀಲ್ದಾರ್ ಮತ್ತು ವಾರ್ತಾ ಇಲಾಖೆಯ ಮಂಜುನಾಥ್, ಗಂಗೊಳ್ಳಿ ಪೊಲೀಸ್ ಅಧಿಕಾರಿ ಶಾಂತಗೌಡ ದೊರನಹಳ್ಳಿ,ರಾಮನಗೌಡ ಚೌದ್ರಿ, ಮಲ್ಲಿಕಾರ್ಜುನ್ ಬಿರಾದಾರ,ಸಿದ್ದನಗೌಡ ಪಾಟೀಲ ,ಮಾದೇಶ್ ಮುದ್ನೂರ್ ಬಾಬುಗೌಡ, ಶರಣಗೌಡ, ಶಿವಾರೆಡ್ಡಿ ಪಾಟೀಲ್ ,ಮುತ್ತುರಾಜ ಶಿವಾನಂದ ತಳ್ಳಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply