ಕೋಟ- ನೆರೆ ಪೀಡಿತ ಪ್ರದೇಶಗಳಿಗೆ ಡೀಸಿ ಭೇಟಿ

ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ನೆರೆ ಪೀಡಿತ ಮೂಡುಗಿಳಿಯಾರು ಭಾಗಕ್ಕೆ ಉಡುಪಿ ಜಿಲ್ಲಾಧಿಕಾರಿ ಕೂರ್ಮ ಎಂ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯಿತ್ತಿರುವ ಭಾರಿ ಮಳೆಗೆ ಸಾಕಷ್ಟು ಮನೆಗಳು,ಭತ್ತ ಕೃಷಿ ಭೂಮಿಗಳು ಜಲಾವೃತಗೊಂಡು ಹಾನಿಗೊಂಡ ಬಗ್ಗೆ ವೀಕ್ಷಿಸಿದ್ದೇನೆ ಸ್ಥಳೀಯಾಡಳಿತಗಳು ಸಮರೋಪಾದಿಯಾಗಿ ಪರಿಹಾರ ಕ್ರಮಗಳನ್ನು ಕೈಗೊಂಡಿದೆ.ಕಳೆದ ಹಲವು ವರ್ಷಗಳ ಹಿಂದೆAದೂ ಉಯಿಸದ ನೆರೆ ಈ ಬಾರಿ ಬಂದಿದೆ.ವರುಣ ಇನ್ನಷ್ಟು ಅಬ್ಬರಿಸುತ್ತಿದ್ದಾನೆ ಮುನ್ಸೂಚನಾ ಕ್ರಮವಾಗಿ ಕೊನೆಯವರೆಗೂ ಕಾಯುವ ಮನಸ್ಥಿತಿ ಸೃಷ್ಠಿಸಿಕೊಳ್ಳಬೇಡಿ ನೆರೆ ಪೀಡತ ಮನೆಗಳ ಕುಟುಂಬಗಳನ್ನು ಮೂಕ ಪ್ರಾಣಿಗಳನ್ನು ಸ್ಥಳಾಂತರಿಸಲು ಸ್ಥಳೀಯಾಡಳಿತಕ್ಕೆ ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ.ನೆರೆ ಇಳಿದ ನಂತರ ನಾಟಿಗೊಂಡ ಕೃಷಿ ಭೂಮಿಯ ಬಗ್ಗೆ ಕಂದಾಯ ಅಧಿಕಾರಿಗಳಿಂದ ನಷ್ಟ ಅಂದಾಜು ಮಾಹಿತಿ ಪಡೆದು ಪರಿಹಾರಕ್ಕೆ ಸರಕಾರಕ್ಕೆ ವರದಿ ಕಳುಹಿಸಲಾಗುವುದು.
ಕಡಲಕೊರೆತದ ಕುರಿತಂತೆ ಸ್ಥಳೀಯ ಉಸ್ತುವಾರಿ ಸಚಿವರು,ಶಾಸಕರು ,ಅಧಿಕಾರಿಗಳ ಸಭೆಯಲ್ಲಿ ಅದರ ಕುರಿತು ಚರ್ಚಿಸಿದ್ದೇವೆ, ಪರಿಹಾರದ ಭಾಗವಾಗಿ ಎಲ್ಲೆಲ್ಲಿ ದೊಡ್ಡ ಮಟ್ಟದ ಕೊರೆತ ಕಂಡುಬAದ ಸ್ಥಳಗಳಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳುವ ಮತ್ತು ಶಾಶ್ವತ ಪರಿಹಾರಕ್ಕೆ ಸರಕಾರಕ್ಕೆ ವರದಿ ನೀಡಲಾಗಿದೆ.
ಇನ್ನು ಮೂರುನಾಲ್ಕು ದಿನದ ರೆಡ್ ಅಲಟ್೯ ಕುರಿತಂತೆ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಸಂಬAಧ ಆಯಾ ದಿನಗಳ ಕೊನೆಯಲ್ಲಿ ಶಿಕ್ಷಣಾಧಿಕಾರಿಗಳಿಂದ ವರದಿ ಪಡೆದು ಆಯಾ ವ್ಯಾಪ್ತಿಯಲ್ಲಿ ಮಳೆದ ಮಾಹಿತಿ ಪಡೆದು ಅಲ್ಲಿನ ಶಿಕ್ಷಣಾಧಿಕಾರಿಗಳಿಗೆ ರಜೆ ನೀಡುವ ಕುರಿತು ಹೆಚ್ಚಿನ ಅಧಿಕಾರಿವನ್ನುನೀಡಲಾಗಿದೆ ಎಂAದರು.
ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ,ಬ್ರಹ್ಮಾವರ ತಹಶಿಲ್ದಾರ್ ರಾಜಶೇಖರಮೂರ್ತಿ,ಉಪತಹಶೀಲ್ದಾರ್ ರಾಘವೇಂದ್ರ,ಕೋಟ ಹೋಬಳಿ ಕಂದಾಯ ನೀರಿಕ್ಷಕ ರಾಜು,ಬ್ರಹ್ಮಾವರ ತಾ.ಪಂ ಇಓ ಎಚ್.ವಿ ಇಬ್ರಾಹಿಂಪುರ್,ಕೋಟ ಗ್ರಾಮಲೆಕ್ಕಾಧಿಕಾರಿ ಚಲುವರಾಜ್,ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ,ಸದಸ್ಯರಾದ ಶೇಖರ್ ಜಿ,ಚಂದ್ರ ಪೂಜಾರಿ, ಪಾಂಡು ಪೂಜಾರಿ,ಸಂತೋಷ್ ಪ್ರಭು,ಯೋಗೇಂದ್ರ ಪೂಜಾರಿ,ಮಾಜಿ ತಾ.ಪಂ ಸದಸ್ಯ ಭರತ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply