ಸೈಬರ್ ವಂಚಕರ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡರೆ ವಾಪಸು ಪಡೆಯಲು “ಗೋಲ್ಡನ್ ಅವರ್” ಸೌಲಭ್ಯ 

ಬೆಂಗಳೂರು: ಆತನಿಗೆ ಉಡುಗೊರೆ ಬಂದಿರುವುದಾಗಿ ಮೊಬೈಲ್‌ನಲ್ಲಿ ಸಂದೇಶ ಬಂದಿತ್ತು. ಖುಷಿಯಿಂದ ಲಿಂಕ್ ಒತ್ತಿದ ಕೂಡಲೇ ಅನಾಮಿಕರಿಂದ ಒಂದು ಮೊಬೈಲ್ ಕರೆ. ನಿಮ್ಮ ಖಾತೆಗೆ ಉಡುಗೊರೆ ಹಣ ಜಮೆಯಾಗ ಬೇಕಾದರೆ ಒಟಿಪಿ ಹೇಳಿ ಅಂತ ಪುಸಲಾಯಿಸಿದ ಅನಾಮಿಕನ ಮಾತು ನಂಬಿ ಒಟಿಪಿ ನಂಬರ್ ಹೇಳುತ್ತಿದ್ದಂತೆ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮಂಗ ಮಾಯ! ಸೈಬರ್ ವಂಚಕರ ಇಂಥ ಮೋಸದ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡವರ ಸಂಖ್ಯೆಗೆ ಕಡಿಮೆ ಇಲ್ಲ.

ಹೀಗೆ ಕಳೆದುಕೊಂಡ ಹಣ ವಾಪಸು ಪಡೆಯಲು ಸಾಧ್ಯವಿದೆಯೇ? ಹೌದು. ಬೆಂಗಳೂರು ಪೊಲೀಸರು ಪರಿಚಯಿಸಿ ರುವ “ಗೋಲ್ಡನ್ ಅವರ್” ಸೌಲಭ್ಯ ಬಳಿಸಿದರೆ ಸೈಬರ್ ವಂಚಕರ ಜಾಲದಿಂದ ಕಳೆದುಕೊಂಡ ಹಣವನ್ನು ವಾಪಸು ಪಡೆಯಬಹುದು!

ಬೆಂಗಳೂರು ನಗರ ಪೊಲೀಸರು ವರ್ಷದ ಹಿಂದೆ ಪರಿಚಯಿಸಿದ “ಗೋಲ್ಡನ್ ಅವರ್” ಸೌಲಭ್ಯ ಬಳಿಸಿಕೊಂಡು ಸಾವಿರಾರು ಜನರು ಸೈಬರ್ ವಂಚಕ ಜಾಲದಿಂದ ಕಳೆದುಕೊಂಡಿದ್ದ 48 ಕೋಟಿ ರೂ. ಹಣ ಮರಳಿ ವಾಪಸು ಪಡೆದಿದ್ದಾರೆ. ಕಳೆದ ಡಿಸೆಂಬರ್ 22 ರಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ ಪಂತ್ ಈ ಗೋಲ್ಡನ್ ಅವರ್ ಸೌಲಭ್ಯಕ್ಕೆ ಚಾಲನೆ ನೀಡಿದ್ದರು. 

ಅಂದಿನಿಂದ ಈವರೆಗೆ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 3175 ಪ್ರಕರಣಕ್ಕೆ ಸಂಬಂಧಿಸಿದಂತೆ 48.24 ಕೋಟಿ ರೂ. ಹಣ ವಂಚನೆ ತಪ್ಪಿಸಿದ್ದಾರೆ. ಜನ ಸ್ನೇಹಿ ಗೋಲ್ಡನ್ ಅವರ್ ಸೌಲಭ್ಯ ಇದೀಗ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.iew pictures in App save up to 80% data..View pictures in App save up to 80% data.

ಸಾಮಾನ್ಯವಾಗಿ ಒಂದು ಖಾತೆಯಿಂದ ಹಣ ವರ್ಗಾವಣೆಯಾದರೆ ಅದನ್ನು ಮರಳಿ ವಾಪಸು ಪಡೆಯಲು ಸಾಧ್ಯ ವಿಲ್ಲ. ಆದರೆ, ಸೈಬರ್ ವಂಚಕರ ಜಾಲಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮೂಲಕ ಸರ್ಕಾರಿ ಸಾಮ್ಯದ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್ ಸಂಶಯಾಸ್ಪದ ಟ್ರಾಂಜಕ್ಷನ್ ಒಂದು ತಾಸು ತಡೆ ಹಿಡಿ ಯಲು ಅವಕಾಶ ಮಾಡಲಾಗಿದೆ.

ಅಂದರೆ ಬೆಂಗಳೂರು ಪೊಲೀಸ್ ನಿಯಂತ್ರಣ ಕೊಠಡಿಯಿಂದ ಕರೆ ಮಾಡಿ ಸಂಶಯಾಸ್ಪದ ಬ್ಯಾಂಕ್ ಖಾತೆಯ ಬಗ್ಗೆ ದೂರು ನೀಡಿದ ಕೂಡಲೇ ಆ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡ ಲಾಗುತ್ತದೆ. 

ಜಪ್ತಿ ಮಾಡಬೇಕಾದರೆ ದೂರುದಾರರು 112 ಗೆ ಕರೆ ಮಾಡಿ ವಿವರ ನೀಡಿರಬೇಕು. ಆನಂತರ ಸಂಬಂಧಪಟ್ಟ ಪೊಲಿಸ್ ಠಾಣೆಗೆ ದೂರು ಸಲ್ಲಿಸಬೇಕು. ಒಂದು ವೇಳೆ ಹಣ ಕಳೆದುಕೊಂಡು ಒಂದು ತಾಸಿನ ನಂತರ ದೂರು ಸಲ್ಲಿಸಿದರೆ, ಅಷ್ಟರಲ್ಲಿ ವಂಚಕರ ಜಾಲದ ಖಾತೆಗೆ ವರ್ಗಾವಣೆಯಾದ ಹಣವನ್ನು ಡ್ರಾ ಮಾಡಿರುತ್ತಾರೆ.

ಹೀಗಾಗಿ ಆ ಹಣ ವಾಪಸು ಪಡೆಯಲು ಸಾಧ್ಯವಿಲ್ಲ. ಹೀಗಾಗಿ ನೀವು ಸೈಬರ್ ವಂಚಕರ ಜಾಲದಿಂದ ಹಣ ಕಳೆದು ಕೊಂಡ ತಕ್ಷಣ 112 ಗೆ ಕರೆ ಮಾಡಿ ಹಣವನ್ನು ವಾಪಸು ಪಡೆಯುವ ಗೋಲ್ಡನ್ ಅವರ್ ಸೌಲಭ್ಯ ಪಡೆಯ ಬಹುದು. ತಡವಾದರೆ ಹಣ ವಾಪಸು ಬರುವುದು ಅನುಮಾನ.

ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಇಲಾಖೆಗೆ ತಂತ್ರಜ್ಞಾನ ಅಭಿವೃದ್ಧಿ ಪಡಿಸುವಲ್ಲಿ ನಿಪುಣತೆಯುಳ್ಳವರು. ಸಂಚಾರ ವಿಭಾಗದ ಪೊಲೀಸ್ ಆಯುಕ್ತರಾಗಿದ್ದಾಗಲೂ ತಂತ್ರಜ್ಞಾನವನ್ನು ಅತಿ ಜಾಣ್ಮೆ ಯಿಂದ ಬಳಿಸಿಕೊಂಡು ಸಂಚಾರ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಿದ್ದರು.

ಆನ್‌ಲೈನ್ ಪೋಗ್ರಾಮಿಂಗ್ ಅಭಿವೃದ್ಧಿ ಪಡಿಸಿ ‘ಗೋಲ್ಡನ್ ಅವರ್ ‘ ಮೂಲಕ ಸೈಬರ್ ವಂಚಕರಿಂದ ಕಳೆದು ಕೊಳ್ಳುವ ಹಣವನ್ನು ರಕ್ಷಣೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಪರಿಚಯಿಸಿದ್ದಾರೆ. ಇದನ್ನು ಹಂತ ಹಂತವಾಗಿ ರಾಜ್ಯದೆಲ್ಲೆಡೆ ವಿಸ್ತರಣೆ ಮಾಡಲು ಚಿಂತನೆ ನಡೆಸಿದ್ದಾರೆ.

ಸಾಮಾನ್ಯ ಅಪರಾಧಗಳಿಗೆ ಹೋಲಿಸಿದರೆ, ಸೈಬರ್ ಅಪರಾಧ ಕೃತ್ಯಗಳು ವಂಚನೆಗಳು ಹೆಜ್ಜಾಗುತ್ತಿವೆ. ಈ ವಂಚಕ ಜಾಲದಿಂದ ಕಳೆದುಕೊಂಡ ಹಣ ಪಡೆಯಲು ರೂಪಿಸಿರುವ ಗೋಲ್ಡನ್ ಅವರ್ ಯೋಜನೆ ಡಿಜಿಪಿ ಪ್ರವೀಣ್ ಸೂದ್ ಅವರ ಕನಸಿನ ಕೂಸಾಗಿದೆ.

 
 
 
 
 
 
 
 
 
 
 

Leave a Reply