ಮೊಹಮ್ಮದ್ ಜುಬೈರ್ ದ್ವೇಷಪೂರಿತ ಟ್ವೀಟ್‌ ಗಳನ್ನು ಪೋಸ್ಟ್‌ ಮಾಡಲು ಹಣ ಪಡೆದಿದ್ದಾರೆ: ಸುಪ್ರೀಂ ಕೋರ್ಟ್‌

ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ಟ್ವೀಟ್‌ಗಳಿಗೆ ಹಣ ಪಡೆದಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಯುಪಿ ಸರ್ಕಾರದ ಪರವಾಗಿ ವಾದ ಮಂಡಿಸಿದ ವಕೀಲೆ ಗರಿಮಾ ಪ್ರಸಾದ್, ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠಕ್ಕೆ ಜುಬೇರ್ ಅವರು ಒಂದು ಟ್ವೀಟ್ ಪೋಸ್ಟ್ ಮಾಡಲು 12 ಲಕ್ಷ ರೂಪಾಯಿ ಮತ್ತು ಇನ್ನೊಂದಕ್ಕೆ 2 ಕೋಟಿ ರೂಪಾಯಿ ಪಡೆದಿದ್ದಾರೆ, ಟ್ವೀಟ್‌ ಹೆಚ್ಚು ಪ್ರಚೋದನಕಾರಿಯಾಗಿದ್ದರೆ ಹೆಚ್ಚಿನ ಪೇಮೆಂಟ್‌ ಸಿಗುತ್ತದೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಅನೇಕ ಎಫ್‌ಐಆರ್‌ಗಳನ್ನು ಪ್ರಶ್ನಿಸಿ ಜುಬೇರ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ವಾದಗಳ ಸಮಯದಲ್ಲಿ, ಜುಬೇರ್ ಅವರು ಪತ್ರಕರ್ತ ಎಂದು ಹೇಳಿಕೊಳ್ಳುತ್ತಾರೆ ಆದರೆ, ವಾಸ್ತವದಲ್ಲಿ ಅವರು ದ್ವೇಷಪೂರಿತ ವಿಷತುಂಬಿರುವ ಟ್ವೀಟ್‌ ಗಳನ್ನು ಪೋಸ್ಟ್‌ ಮಾಡಲು ಹಣ ಪಡೆಯುತ್ತಾರೆ ಎಂದು ಗರಿಮಾ ಪ್ರಸಾದ್‌ ಹೇಳಿದ್ದಾರೆ.

ಕೋಮು ವಿಭಜನೆಯನ್ನು ಉಂಟುಮಾಡುವ ವೀಡಿಯೊಗಳು ಮತ್ತು ಭಾಷಣಗಳ ಲಾಭವನ್ನು ಜುಬೈರ್ ಪಡೆಯುತ್ತಾನೆ. ಅವನು ಈ ಥರಹದ ವೀಡಿಯೊದ ಲಾಭವನ್ನು ಪಡೆದುಕೊಳ್ಳುತ್ತಾನೆ, ಅದನ್ನು ತನ್ನ ಲಕ್ಷಗಟ್ಟಲೆ ಅನುಯಾಯಿಗಳಿಗೆ ಟ್ವೀಟ್ ಮಾಡುತ್ತಾನೆ. ನಂತರ ಅವನು ದೇಶಾದ್ಯಂತ ಜನರ ಉತ್ಸಾಹವನ್ನು ಕೆರಳಿಸಲು ಹೀಗೆಲ್ಲ ಬರೆಯುತ್ತಾನೆ. ಇದರ ನಂತರ ಕೋಮು ಉದ್ವಿಗ್ನತೆ ಉಂಟಾಗುತ್ತದೆ, ಎಂದು ಅವರು ಆರೋಪಿಸಿದ್ದಾರೆ.

Leave a Reply