ರೈಲಿನಲ್ಲಿ ಮೊಬೈಲ್ ಕದಿಯಲು ಹೋಗಿ ಸಿಕ್ಕಿಬಿದ್ದು ಒದ್ದಾಡಿದ ಕಳ್ಳ!

ರೈಲ್ವೆ(Train) ಪ್ರಯಾಣಿಕನ ಮೊಬೈಲ್ ಕಳವು ಮಾಡಲು ಹೋಗಿ ಸಿಕ್ಕಿಬಿದ್ದು ಕಳ್ಳನೋರ್ವ(Thief) 10 ಕಿ.ಮೀವರೆಗೂ ಜೋತಾಡುತ್ತಾ, ಮತ್ತೊಮ್ಮೆ ಈ ರೀತಿ ಮಾಡುವುದಿಲ್ಲ ಕ್ಷಮಿಸಿ ಎಂದು ಫಜೀತಿ ಮಾಡಿಕೊಂಡಿದ್ದಾನೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

ಸೆಪ್ಟೆಂಬರ್ 14ರಂದು ಬಿಹಾರದಲ್ಲಿ(Bihar) ಈ ಘಟನೆ ನಡೆದಿದ್ದು, ರೈಲಿನ ಕಿಟಕಿ(Window) ಬಳಿ ಕುಳಿತಿದ್ದ ಪ್ರಯಾಣಿಕನ(Passengers) ಮೊಬೈಲ್ ಕಳ್ಳತನ ಮಾಡಲು ಹೋಗಿ ಕಳ್ಳ ಸಿಕ್ಕಿಬಿದ್ದು ತಪ್ಪಿಸಿಕೊಳ್ಳಲಾಗದೇ ನರಳಾಡಿದ್ದಾನೆ.

ರೈಲು ಬೇಗುಸರಾಯ್‍ನಿಂದ(Begusarai) ಖಗರಿಯಾಗೆ (Khagaria) ಹೊರಟಿತ್ತು. ಈ ಮಧ್ಯೆ ಸಾಹೇಬ್‍ಪುರ ಕಮಲ್ (Sahebpur Kamal) ನಿಲ್ದಾಣದ ಬಳಿ ವ್ಯಕ್ತಿ ತನ್ನ ಕೈಯನ್ನು ಕಿಟಕಿ ಒಳಗೆ ಹಾಕಿ ಪ್ರಯಾಣಿಕನ ಮೊಬೈಲ್(Mobile) ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಇದರಿಂದ ಎಚ್ಚೆತ್ತುಕೊಂಡ ಪ್ರಯಾಣಿಕ ಆತನ ಕೈ ಹಿಡಿದುಕೊಂಡಿದ್ದಾನೆ. ಈ ವೇಳೆ ರೈಲು ಚಲಿಸಲು ಆರಂಭಿಸಿದೆ. ಆಗ ಕಳ್ಳ ದಯವಿಟ್ಟು ನನ್ನ ಕೈ ಬಿಡಿ ಎಂದು ಅಳುತ್ತಾ ಬೇಡಿಕೊಂಡಿದ್ದಾನೆ. ಆದರೂ ಪ್ರಯಾಣಿಕ ಆತನ ಕೈ ಬಿಡದೇ ಸತಾಯಿಸಿದ್ದಾನೆ. ಹೀಗಾಗಿ 10 ಕಿ.ಮೀವರೆಗೂ(10 kilometers) ಕಿಟಕಿ ಬಳಿ ತೂಗಾಡುತ್ತಾ, ಜೋತಾಡುತ್ತಾ ಕಳ್ಳ ಬಿಡಿಸಿಕೊಳ್ಳಲು ಸಾಧ್ಯವಾಗದೇ ಒದ್ದಾಡಿದ್ದಾನೆ.

ಕೊನೆಗೆ 10 ಕಿಲೋಮೀಟರ್‌ಗಳವರೆಗೂ ಹೀಗೆ ಸಾಗಿ ನಂತರ ರೈಲು ಖಗಾರಿಯಾಕ್ಕೆ ಹೋಗುತ್ತಿದ್ದ ವೇಳೆ ಆತನ ಕೈ ಬಿಟ್ಟಿದ್ದಾರೆ. ಕೈ ಬಿಟ್ಟ ಕೂಡಲೇ ಕಳ್ಳ ದಿಕ್ಕಾಪಾಲಾಗಿ ಓಡಿಹೋಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply