ಸುಶಾಂತ್​ ಸಿಂಗ್​ ರಜಪೂತ್​​ರದ್ದು ಆತ್ಮಹತ್ಯೆಯಲ್ಲ, ಕೊಲೆ’

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಕಳೆದ ಎರಡು ವರ್ಷಗಳ ಹಿಂದೆ ತನ್ನ ಅಪಾರ್ಟ್​ಮೆಂಟ್​ನಲ್ಲಿ ನಿಗೂಢವಾಗಿ ಸಾವನ್ನಪ್ಪಿ ಎರಡು ವರ್ಷಗಳ ಬಳಿಕ ಇದೀಗ ಅವರ ಸಾವಿನ ಕುರಿತಂತೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಸುಶಾಂತ್​ ಸಿಂಗ್​ ರಜಪೂತ್​ ಶವದ ಮರಣೋತ್ತರ ಪರೀಕ್ಷೆಯಲ್ಲಿ ಭಾಗಿಯಾಗಿದ್ದ ಕೂಪರ್​ ಆಸ್ಪತ್ರೆಯ ಸಿಬ್ಬಂದಿಯೊಬ್ಬರು, ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ, ಅದೊಂದು ಕೊಲೆ ಎಂದು ಹೇಳಿದ್ದಾರೆ.


ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರೂಪಕುಮಾರ್​ ಶಾ ಎಂಬವರು ಈ ಸ್ಫೋಟಕ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ. ಸುಶಾಂತ್​ ಸಿಂಗ್​ ರಜಪೂತ್​ ನಿಧನರಾದ ದಿನದಂದು ನಮ್ಮ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ಗೆಂದು ಒಟ್ಟು ಐದು ಮೃತದೇಹಗಳು ಬಂದಿದ್ದವು. ನಾವು ಮರಣೋತ್ತರ ಪರೀಕ್ಷೆಗೆ ಮುಂದಾದ ಸಂದರ್ಭದಲ್ಲಿ ಐದರಲ್ಲಿ ಒಂದು ಮೃತದೇಹ ಸುಶಾಂತ್​​ರದ್ದು ಎಂದು ನಮಗೆ ತಿಳಿಯಿತು. 

ಅವರ ಮೃತದೇಹದ ಮೇಲೆ ಹಲವಾರು ಗಾಯದ ಗುರುತುಗಳು ಹಾಗೂ ಅವರ ಕುತ್ತಿಗೆ ಮೇಲೆ ಎರಡರಿಂದ ಮೂರು ಗುರುತುಗಳು ಇದ್ದವು ಎಂದು ಹೇಳಿದ್ದಾರೆ. ಆದರೆ ಉನ್ನತಾಧಿಕಾರಿಗಳು ಕೇವಲ ಅವರ ದೇಹದ ಫೋಟೋಗಳನ್ನು ಮಾತ್ರ ಕ್ಲಿಕ್ಕಿಸುವಂತೆ ಸೂಚನೆ ನೀಡಿದ್ದರು ಮಾಹಿತಿ ನೀಡಿದ್ದಾರೆ.


2020ರ ಜೂನ್​ 14ರಂದು ಬಾಂದ್ರಾದಲ್ಲಿರುವ ತನ್ನ ನಿವಾಸದಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಸುಶಾಂತ್​ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ, ಆತನನ್ನು ಕೊಲೆ ಮಾಡಲಾಗಿದೆ ಎಂಬುದು ಸುಶಾಂತ್​ ಕುಟುಂಬಸ್ಥರ ಆರೋಪವಾಗಿತ್ತು. ಆದರೆ ಸುಶಾಂತ್​ರದ್ದು ಕೊಲೆಯೋ ಆತ್ಮಹತ್ಯೆಯೋ ಎಂಬ ವಿಚಾರ ಕಳೆದ ಎರಡು ವರ್ಷಗಳಿಂದ ಕಗ್ಗಂಟಾಗಿಯೇ ಉಳಿದಿದೆ.


ಈ ಹಿಂದೆ ಆಮೀರ್​ ಖಾನ್​ ಸಹೋದರ ಫೈಸಲ್​ ಖಾನ್ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು. ಸುಶಾಂತ್​ ಸಿಂಗ್​ ರಜಪೂತ್​ ಕೊಲೆಯಾಗಿದ್ದಾರೆ. ಆದರೆ ಈ ಪ್ರಕರಣವನ್ನು ಯಾವಾಗ ಪೊಲೀಸರು ಓಪನ್​ ಮಾಡ್ತಾರೋ ಅನ್ನೋದಕ್ಕೆ ಸಮಯವೇ ಉತ್ತರ ನೀಡಬೇಕು. ಇದರಲ್ಲಿ ಹಲವಾರು ಏಜೆನ್ಸಿಗಳು ಒಳಗೊಂಡಿವೆ. ಕೆಲವೊಮ್ಮೆ ಸತ್ಯ ಹೊರಬರೋದಿಲ್ಲ. ಆದರೆ ಈ ಪ್ರಕರಣದಲ್ಲಿ ಸತ್ಯ ಹೊರಬರಲಿ ಎಂಬುದು ನನ್ನ ಪ್ರಾರ್ಥನೆ ಎಂದಿದ್ದರು.

 
 
 
 
 
 
 
 
 

Leave a Reply