ಬಿಹಾರದ ಬಂಕ ಜಿಲ್ಲೆಯ ಮದರಸ ಕಟ್ಟಡ ಧ್ವಂಸ~ ನೂರಿ ಮಸ್ಜಿದ್ ಇಮಾಂ ಮೃತ್ಯು

ಬಿಹಾರದ ಬಂಕ ಜಿಲ್ಲೆಯ ನೂರಿ ಮಸ್ಜಿದ್ ಮತ್ತು ಮದರಸ ಕಟ್ಟಡದಲ್ಲಿ ಭಾರೀ ಸ್ಪೋಟಗೊಂಡು ಮದರಸ ಕಟ್ಟಡ ಸಂಪೂರ್ಣ ಧ್ವಂಸಗೊಂಡಿದ್ದು, ಸ್ಥಳದಲ್ಲೇ ನೂರಿ ಮಸ್ಜಿದ್ ಇಮಾಂ ಮೃತರಾದ ದಾರುಣ ಘಟನೆ ನಡೆದಿದೆ. ಸ್ಪೋಟದ ಸದ್ದು ಬಹಳ ದೂರದವರೆಗೆ ಕೇಳಿ ಬಂದಿದ್ದು, ಸ್ಥಳೀಯ ಮನೆಗಳಿಗೂ ಹಾನಿ ಸಂಭವಿಸಿದೆ.

ಪಾಟ್ನಾದ 250 ಕಿಲೋ ಮೀಟರ್ ದೂರದಲ್ಲಿರುವ ಬಂಕಾದಲ್ಲಿ ಘಟನೆ ನಡೆದಿದ್ದು, ಇಮಾಂ ಮೃತರಾದರೆ, ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಮೃತರಾದ ಇಮಾಂ ಮುಹಮ್ಮದ್ ಅಬ್ದುಲ್ ಸತ್ತಾರ್ ಮೋಬಿನ್ ಎಂದು ಗುರುತಿಸಲಾಗಿದ್ದು, ಜಾರ್ಖಂಡ್ ಮಾಧಪುರ ಜಿಲ್ಲೆಯವರೆಂದು ತಿಳಿದುಬಂದಿದೆ.

ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮೇ 5 ರಂದು ಮದರಸ ಬಂದ್ ಮಾಡಲಾಗಿತ್ತು. 200 ರಷ್ಟು ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಇಲ್ಲವಾದರೆ ಇನ್ನಷ್ಟು ಅಪಾಯ ಉಂಟಾಗುತ್ತಿತ್ತು. 

ಘಟನೆಗೆ ಗನ್ ಪೌಡರ್ ನಿಂದ ಸ್ಪೋಟ ನಡೆದಿರುವುದಾಗಿ ಪ್ರಾಥಮಿಕ ಮಾಹಿತಿ ತಿಳಿದು ಬಂದಿರುವುದಾಗಿ ಪೊಲೀಸ್ ಅಧಿಕಾರಿ ಶ್ರೇಷ್ಠನ್ ಕುಮಾರ್ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

 
 
 
 
 
 
 
 
 
 
 

Leave a Reply