ಸಿಕಂದರಾಬಾದ್​​ ಹಿಂಸಾಚಾರದಲ್ಲಿ ಮಾಜಿ ಸೈನಿಕನ ಕೈವಾಡ

ಸಿಕಂದರಾಬಾದ್​: ಅಗ್ನಿಪಥ ಯೋಜನೆ ವಿರೋಧಿಸಿ ಸಿಕಂದರಾಬಾದ್​ನಲ್ಲಿ ಉಂಟಾಗಿದ್ದ ಗಲಭೆಯ ಹಿಂದಿನ ಪ್ರಮುಖ ಆರೋಪಿಯನ್ನು ಭಾನುವಾರ ಬಂಧಿಸಲಾಗಿದೆ.

ಆವುಲ ಸುಬ್ಬಾ ರಾವ್​​ನನ್ನು ವಶಕ್ಕೆ ಪಡೆಯಲಾಗಿದ್ದು, ಈತ ಮಾಜಿ ಸೈನಿಕನಾಗಿದ್ದು, ಅಗ್ನಿಪಥ ಯೋಜನೆ ಖಂಡಿಸಿ ತೆಲಂಗಾಣದ ಸಿಕಂದರಾಬಾದ್ ರೈಲ್ವೇ ನಿಲ್ದಾಣದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಹಿಂಸಾಚಾರದ ರೂವಾರಿ ಈತನೇ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದ. ಈ ಎಲ್ಲಾ ಘಟನೆಗೂ ಈತನೇ ಕಾರಣ ಎಂದು ತಿಳಿದುಬಂದಿದೆ. ಇನ್ನು ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು.

ವಾಟ್ಸಾಪ್​ ಮೂಲಕ ಮೆಸೇಜ್​ ಕಳುಹಿಸಿ ಹೆಚ್ಚು ಜನರನ್ನು ಸೇರಿಸಿ ಗಲಭೆ ಸೃಷ್ಟಿಸಲು ಈತ ಪ್ರಚೋದನೆ ನೀಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಬಂಧಿತ ರಾವ್​ ಆಂದ್ರಪ್ರದೇಶದ ಪ್ರಕಾಶಮ್​ ಜಿಲ್ಲೆಯವರಾಗಿದ್ದು, ಕಳೆದ ಕೆಲವು ವರ್ಷಗಳಿಂದ ನರಸರಾವ್​ಪೇಟೆ, ಹೈದರಾಬಾದ್​ ಮತ್ತು ಸೇರಿದಂತೆ ಎಳು ಕಡೆ ಸೇನಾ ಆಕಾಂಕ್ಷಿಗಳಿಗಾಗಿ ತರಬೇತಿ ಶಾಖೆಯನ್ನು ನಡೆಸುತ್ತಿದ್ದಾರೆ.

ಪ್ರಕರಣ ಸಂಬಂಧಿಸಿದಂತೆ ಅದೊನಿ, ಕರ್ನೂಲ್​, ಗುಂಟೂರ್​, ನೆಲ್ಲೂರು, ವಿಶಾಖಪಟ್ಟಣಂ ಮತ್ತು ಯಲಮಂಚಿಲಿಯಲ್ಲಿ ಹಲವರನ್ನು ಬಂಧಿಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

 
 
 
 
 
 
 
 
 

Leave a Reply