Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಶಿವಸೇನಾ ​ನಾಯಕ ರಾಹುಲ್ ಶೆ​​ಟ್ಟಿಯ ಹತ್ಯೆ

ಪುಣೆ : ಮಹರಾಷ್ಟ್ರ  ಪುಣೆಯ ಬಳಿ ಲೊನವಾಲದ ಶಿವಸೇನೆಯ ಮುಖಂಡನನ್ನು ದುಷ್ಕರ್ಮಿಗಳು ​ಹತ್ಯೆ ಮಾಡಿದ್ದಾರೆ.ಮಾಜಿ ಶಿವಸೇನಾ ಮುಖಂಡ ಉಮೇಶ್ ಶೆಟ್ಟಿಯವರ ಪುತ್ರ ರಾಹುಲ್‌ ಶೆಟ್ಟಿ ಕೊಲೆಯಾದವರು ಎಂದು‌ ತಿಳಿದು ಬಂದಿದೆ.
ಮೂಲತಃ ಮಂಗಳೂರಿನವರಾದ ರಾಹುಲ್ ಶೆಟ್ಟಿಯನ್ನು ದುಷ್ಕರ್ಮಿಗಳು ಮೂರು ಬಾರಿ ಗುಂಡು ಹಾರಿಸಿ ಕೊಲೆ ಮಾಡಿ ದ್ದಾರೆ ಎನ್ನಲಾಗಿದೆ.​ ರಾಹುಲ್ ಶೆಟ್ಟಿ ಶಿವಸೇನಾ ಅಧ್ಯಕ್ಷರಾಗಿದ್ದರು. ಗುಂಡಿನ ದಾಳಿಯಾಗಿ ಆಸ್ಪತ್ರೆಗೆ ದಾಖಲಾ ಗಿದ್ದಾರೆ.​ ​ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನ​ಪ್ಪಿದ್ದಾರೆ ​ಮೂಲಗಳಿಂದ ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.​ ​ಹತ್ಯೆಗೆ ಕಾರಣ ತಿಳಿದು ಬರಬೇಕಿದೆ.​ ​ನಿನ್ನೆ ಅದೇ ಪರಿಸರದಲ್ಲಿ ಗಣೇಶ್ ನಾಯ್ಡ ಎಂಬವರ ಕೊಲೆಯಾಗಿತ್ತು.​ ​ಇಂದು ರಾಹುಲ್ ಶೆಟ್ಟಿ ಕೊಲೆಯಾಗಿದೆ.​ ಹತ್ಯೆ ನಡೆದ ಸ್ಥಳದಲ್ಲಿ ಪೊಲೀಸರಿಗೆ ಸಿಸಿ ಕ್ಯಾಮರಾದ ದೃಶ್ಯಗಳು ಲಭ್ಯವಾಗಿದೆ.​ ​ ‌ಪೊಲೀಸರು ತನಿಖೆ‌ ನಡೆಸುತ್ತಿದ್ದಾರೆ
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!