ಸ್ವಾತಂತ್ರ್ಯ ರಥಕ್ಕೆ ಅಡ್ಡಿ: ಮೂವರು ಎಸ್‌ಡಿಪಿಐ ಕಾರ್ಯಕರ್ತರು ಅಂದರ್ 

ಕಬಕ: ಪುತ್ತೂರು ಪಟ್ಟಣ ಹೊರವಲಯದ ಕಬಕ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಭಾನುವಾರ ಸ್ವಾತ್ರಂತ್ರ್ಯೋತ್ಸವದ ಅಂಗವಾಗಿ ಸ್ವಾತಂತ್ರ್ಯ ರಥ ಯಾತ್ರೆ ಹಮ್ಮಿಕೊಳ್ಳ ಲಾಗಿತ್ತು. ಈ ವೇಳೆ ಅಲ್ಲಿಗೆ ಬಂದ ಎಸ್‌ಡಿಪಿಐ ಕಾರ್ಯಕರ್ತರು ಸ್ವಾತಂತ್ರ್ಯ ರಥ ಯಾತ್ರೆಗೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮೂವರು ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಅಜೀಜ್‌ ಕಬಕ, ಸಮೀರ್‌ ಕಬಕ ಮತ್ತು ಅಬ್ದುಲ್‌ ರಹಿಮಾನ್‌ ಕೊಡಿಪ್ಪಾಡಿ ಬಂಧಿತರು. ಅವರಿಗೆ ಪುತ್ತೂರು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಕಬಕ ಗ್ರಾಪಂ ಪಿಡಿಒ ಆಶಾ ನೀಡಿದ ದೂರಿನ ಮೇರೆಗೆ ತನಿಖೆ ನಡೆಯುತ್ತಿದೆ. ಕೊರೊನಾ ನಿಯಮ ಉಲ್ಲಂಘನೆ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ.

ಘಟನೆ ಹಿನ್ನಲೆ :ಪುತ್ತೂರು ಪಟ್ಟಣ ಹೊರವಲಯದ ಕಬಕ ಗ್ರಾಮ ಪಂಚಾಯತಿ ಸಹ ಯೋಗದಲ್ಲಿ ಭಾನುವಾರ ಸ್ವಾತ್ರಂತ್ರ್ಯೋತ್ಸವದ ಅಂಗವಾಗಿ ಸ್ವಾತಂತ್ರ್ಯ ರಥ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ರಥದಲ್ಲಿ ವೀರ ಸಾವರ್ಕರ್ ಭಾವಚಿತ್ರ ಅಳವಡಿಸಿದ್ದನ್ನು ವಿರೋಧಿಸಿ ಎಸ್‌ಡಿಪಿಐ ಕಾರ್ಯಕರ್ತರು ರಥಕ್ಕೆ ಅಡ್ಡಲಾಗಿ ನಿಂತು ಸಾವರ್ಕರ್ ಭಾವಚಿತ್ರ ತೆಗೆದು ಟಿಪ್ಪು ಚಿತ್ರವನ್ನು ಅಳವಡಿಸಬೇಕೆಂದು ಗಲಾಟೆ ನಡೆಸಿದ್ದರು.  ಕೆಲಕಾಲ ಉದ್ದಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.  
 
 
 
 
 
 
 
 
 
 
 

Leave a Reply