ಇಂದು ನಿರ್ಧಾರವಾಗಲಿದೆ ಮಾದಕ ನಟಿಯರಿಗೆ ಜೈಲು ಬೇಲೊ

ಬೆಂಗಳೂರು: ಡ್ರಗ್ಸ್ ದಂಧೆಯ ನಂಟು ಹೊಂದಿರುವ ಪ್ರಕರಣದಲ್ಲಿ ಸಿಸಿಬಿಗೆ ಸರಿ ಸಿಕ್ಕು ಸದ್ಯ ಜೈಲುಪಾಲಾಗಿದ್ದ ಜೈಲುಪಾಲಾಗಿದ್ದ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅರ್ಜಿ ಎನ್‌ಡಿಪಿಎಸ್ ವಿಚಾರಣೆ ಸೋಮವಾರ ನಡೆಯಲಿದೆ. ಇಂದು ವಿಶೇಷ ನ್ಯಾಯಾಲಯ ಈ ಜಾಮೀನು ಅರ್ಜಿ ವಿಚಾರಣೆ ನಡೆಸಿದೆ.

ಈಗಾಗಲೇ ಸೆ.19 ರಂದು ನಡೆದಿದ್ದ ವಿಚಾರಣೆಯಲ್ಲಿ ಉಳಿದ ಎಲ್ಲಾ ಆರೋಪಿಗಳ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿದ್ಧವಾಗಿದ್ದೇವೆ ಎನ್ನುವುದಾಗಿ ತಿಳಿಸಿದ್ದರು, ಆದರೆ ಸಂಜನಾ ಗಲ್ರಾನಿ ಜಾಮೀನು ಅರ್ಜಿಗೆ ಆಕ್ಷೇಪಣೆ ಕೋರಲು ಇನ್ನು ಹೆಚ್ಚಿನ ಕಾಲ್ ಅವಕಾಶಕ್ಕಾಗಿ ಸಿಸಿಬಿ ಪರ ವಕೀಲರು ನ್ಯಾಯಾಲಯದಲ್ಲಿ ಕೇಳಿಕೊಂಡಿದ್ದರು. ಈ ವೇಳೆಯಲ್ಲಿ ಬಂಧಿತರಾದ ಎಲ್ಲಾ ಆರೋಪಿಗಳು ಒಂದೇ ಪ್ರಕರಣಕ್ಕೆ ಸಂಬಂಧ ಪಟ್ಟಿರುವ ಕಾರಣ ಎಲ್ಲರಿಗೂ ಒಂದೇ ಆಕ್ಷೇಪಣೆ ಸಲ್ಲಿಸಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿತ್ತು.  ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತ್ತು.

ಚಂದನವನಕ್ಕೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಈಗಾಗಲೇ ನಟಿ ರಾಗಿಣಿ, ಸಂಜನಾ ಮತ್ತು ಪೆಡ್ಲರ್‌ಗಳಾದ ರವಿಶಂಕರ್, ಲೂಮ್ ಪೆಪ್ಪರ್, ವಿರೇನ್ ಖನ್ನಾ, ವೈಭವ್ ಜೈನ್ ಸೇರಿದಂತೆ ಇನ್ನು ಕೆಲವರು ಸಿಸಿಬಿ ಬಲೆಗೆ ಸಿಕ್ಕಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಎಲ್ಲ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದ್ದು, ಸೋಮವಾರ ವಿಚಾರಣೆಗೆ ಬರಲಿವೆ.

ಇದೀಗ ಇಂದು ಬೆಳಗ್ಗೆ 12ಗಂಟೆಗೆ ನಡೆಯಬೇಕಿದ್ದ ಜಾಮೀನು ಅರ್ಜಿ ವಿಚಾರಣೆಯು ಸಿಸಿಬಿ ಪರ ವಕೀಲರು ಸಂಜನಾ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಕೋರಿದ ಕಾರಣ ಮಧ್ಯಾಹ್ನ 3:00 ಗಂಟೆಗೆ ಮುಂದೂಡ ಲಾಗಿದೆ. ಇನ್ನು ಆರೋಪಿಗಳ ಪರವಾಗಿರುವ ವಕೀಲರು ಸಿಸಿಬಿ ಪರ ವಕೀಲರು ಸಲ್ಲಿಸುವ ಆಕ್ಷೇಪಣೆಯ ಮೇರೆಗೆ ವಾದ ಮಂಡಿಸ ಲಿದ್ದಾರೆ. ಸದ್ಯ ಅವರಿಬ್ಬರ ವಾದವನ್ನು ಆಲಿಸಿದ ನ್ಯಾಯಾಲಯ ಯಾವ ತೀರ್ಪು ನೀಡುತ್ತದೆ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

 
 
 
 
 
 
 
 
 

Leave a Reply