ಬೆಂಗಳೂರಿನಲ್ಲಿ ಬಾಡಿಗೆ ನೆಲೆಸಿರುವ ಬಾಚ್ಯುಲರ್ಸ್ ಮಾಹಿತಿ ಸಂಗ್ರಹ 

ಬೆಂಗಳೂರು: ಬೆಂಗಳೂರಿನಲ್ಲಿ ಬಾಡಿಗೆ ನೆಲೆಸಿರುವ ಬಾಚ್ಯುಲರ್ಸ್ ಮಾಹಿತಿ ಕೋರುವ ಸುತ್ತೋಲೆ ಒಂದು ವೈರಲ್ ಆದ ಘಟನೆ ನಡೆದಿದೆ. ಹೌದು,ಅಪಾರ್ಟ್ಮೆಂಟ್ ಫ್ಲ್ಯಾಟ್ ಹಾಗೂ ಮನೆಗಳಲ್ಲಿ ನೆಲೆಸಿರುವ ಯುವಕರು ಮತ್ತು ಅವಿವಾಹಿತರ ಚಟುವಟಿಕೆಗಳ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸುವಂತೆ ಸರ್ಕಾರ ಸೂಚನೆ ನೀಡಿರುವ ಸುತ್ತೋಲೆಯೊಂದು ಜಾಲತಾಣದಲ್ಲಿ ವೈರಲ್ ಆಗಿದ್ದು, ಬಹು ಚರ್ಚೆಗೆ ಗ್ರಾಸವಾಗಿದೆ.

ಡ್ರಗ್ ಜಾಲವನ್ನು ಮಟ್ಟಹಾಕಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಈಗಾಗಲೇ ಪೊಲೀಸರಿಗೆ ಕೆಲ ಸೂಚನೆಗಳನ್ನು ನೀಡಿದೆ. ಈ ಕಾರಣಕ್ಕೆ ನಗರದ ಫ್ಲ್ಯಾಟ್ ಹಾಗೂ ಮನೆಗಳಲ್ಲಿ ಬಾಡಿಗೆಗೆ ನೆಲೆಸಿರುವ ಅವಿವಾಹಿತ ಯುವಕರ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಯುವಕರ ಹೆಸರು, ಫೋನ್ ನಂಬರ್, ವಿಳಾಸ, ಫ್ಲ್ಯಾಟ್ ಸಂಖ್ಯೆ ಪಡೆಯಬೇಕು.

ಇನ್ನು ಯುವಕರು ಮನೆಗೆ ತಡರಾತ್ರಿ ಅನುಮಾನಾಸ್ಪದವಾಗಿ ಬರುವುದು ಮತ್ತು ಪಾರ್ಟಿ ಮಾಡುವುದನ್ನು ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ. ಅಲ್ಲದೆ, ಮಾದಕವಸ್ತುಗಳ ಸಂಗ್ರಹ ಮತ್ತು ಮಾರಾಟ ಮಾಡುವುದು ಗೊತ್ತಾದರೆ ಗಮನಕ್ಕೆ ತರಬೇಕು ಎಂದು ಅಪಾರ್ಟ್​ಮೆಂಟ್ ಹಾಗೂ ಮನೆ ಮಾಲೀಕರಿಗೆ ಸೂಚಿಸಿರುವುದು ಪತ್ರದಲ್ಲಿದೆ.

ಸುರೇಖಾ ರಾವ್ ಎಂಬುವವರು ಈ ಪತ್ರವನ್ನು ಟ್ವಿಟರ್ ಮೂಲಕ ನಗರ ಪೊಲೀಸರ ಗಮನಕ್ಕೆ ತಂದಿದ್ದಾರೆ ಮಾತ್ತು ಇದು ಸತ್ಯವೆ ಎಂಬುದಾಗಿ ಕೇಳಿದ್ದಾರೆ. ಇದರಿಂದ ಆನೇಕ ಚರ್ಚೆ ಆರಂಭವಾಗಿದ್ದು, ಕೆಲವರು ಇದು ವೈಟ್​ಫೀಲ್ಡ್ ಮತ್ತು ಕಾಡುಗುಡಿ ಪೊಲೀಸರು ಹೊರಡಿಸಿರುವ ಆದೇಶ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಂಕಿತ್ ಸಾವಂತ್ ಎಂಬುವರು, ‘ಈಗಾಗಲೇ ಬೆಂಗಳೂರಿನಲ್ಲಿ ಅವಿವಾಹಿತ ಯುವಕರಿಗೆ ಬಾಡಿಗೆ ಮನೆ ಸಿಗುವುದೇ ಕಷ್ಟ.

ಇಂಥಹ ಆದೇಶದಿಂದ ಮತ್ತಷ್ಟು ಸಮಸ್ಯೆ ಉಂಟಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದ್ದು, ಮತ್ತಿತರರು ‘ಅವಿವಾಹಿತರು ಮಾತ್ರ ಡ್ರಗ್ಸ್ ತೆಗೆದುಕೊಳ್ಳುವುದೇ, ಈ ಮಾಹಿತಿ ಸಂಗ್ರಹ ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನೆ ಮಾಡಿದ್ದಾರೆ.

ಸದ್ಯ ಇದಕ್ಕೆ ಪ್ರತಿಕ್ರಿಯಿಸಿರುವ ನಗರ ಪೊಲೀಸರು, ‘ಇಂತಹ ಯಾವುದೇ ಸುತ್ತೋಲೆ ಅಥವಾ ನೋಟಿಸ್ ಕಾಡುಗುಡಿ ಮತ್ತು ವೈಟ್​ಫೀಲ್ಡ್ ಠಾಣೆ ಪೊಲೀಸರು ಜಾರಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಎಲ್ಲಿನ ಸರ್ಕಾರ ಇಂತಹ ಸುತ್ತೋಲೆ ಹೊರಡಿಸಿದೆ, ಇಷ್ಟಕ್ಕೂ ಇದು ಅಸಲಿಯೋ ಅಥವಾ ನಕಲಿಯೋ ಎಂಬುದು ಇನ್ನು ತಿಳಿದುಬಂದಿಲ್ಲ.

 
 
 
 
 
 
 
 
 

Leave a Reply