Janardhan Kodavoor/ Team KaravaliXpress
25.6 C
Udupi
Saturday, December 3, 2022
Sathyanatha Stores Brahmavara

ಅಪ್ರಾಪ್ತೆ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ!

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಅಪಹರಿಸಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

17ವರ್ಷದ ಯುವತಿಯ ಜತೆಗೆ ಪೊಕ್ಸೋ ಹಾಗೂ ಅತ್ಯಾಚಾರ ಎಸಗಿದ ವಿಚಾರದಲ್ಲಿ ಕಬಕ ನಿವಾಸಿ ಸಂಶೀರ್ (21), ಪೊಕ್ಸೋ ಹಾಗೂ ಅಪಹರಣ ಪ್ರಕರಣದ ಕನ್ಯಾನ ಸಜಾದ್ ಯಾನೆ ಸಜ್ಜು (22) ಹಾಗೂ ವಾರಂಟ್ ಪ್ರಕರಣದಲ್ಲಿ ಆಸಿಫ್ ಬಂಧಿತರಾಗಿದ್ದಾರೆ. ಇನ್ನೋರ್ವ ಆರೋಪಿ ಶಾಫಿ ತಲೆಮರೆಸಿಕೊಂಡಿದ್ದಾನೆ.ಯುವತಿ ಅಡ್ಯನಡ್ಕಕ್ಕೆ ತೆರಳಿ ಅಲ್ಲಿಂದ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಕನ್ಯಾನ ಮೂಲದ ಸಜಾದ್ ಅಜ್ಞಾತ ಜಾಗದಲ್ಲಿ ಇರಿಸಿದ್ದು, ಬಳಿಕ ಆತನ ಜತೆಗೆ ಮಂಗಳೂರು ಭಾಗದಲ್ಲಿ ಓಡಾಡಿರುವುದು ತನಿಖೆಯಿಂದ ತಿಳಿದಿದೆ. ಕಬಕ ಸಂಶೀರ್ ಈಕೆಯನ್ನು ಪ್ರೀತಿಸಿ ಅತ್ಯಾಚಾರ ಎಸಗಿರುವ ಬಗ್ಗೆ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಉಳಿದಂತೆ ಹೆಚ್ಚಿನ ವಿವರ ತಿಳಿದುಬರಬೇಕಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!