Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

ರಕ್ಷಿತಾ ನಾಯಕ್ ಸಾವಿಗೆ ಮತ್ತೆ ಹೊಸ ತಿರುವು- ಪ್ರಿಯಕರ ಬಂಧನ

ಉಡುಪಿ: ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ ಯುವತಿ ರಕ್ಷಿತಾ ನಾಯಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪ್ರಿಯಕರ ಪ್ರಶಾಂತ್​ ಕುಂದರ್ ನನ್ನು ಭಾನುವಾರದಂದು ಉಡುಪಿ ಪೊಲೀಸರು  ಬಂಧಿಸಿದ್ದಾರೆ.​ ಬಂಧಿತ ಆರೋಪಿ ಪ್ರಶಾಂತ್ ವಿರುದ್ಧ ಅತ್ಯಾಚಾರ ಮತ್ತು ‌ಆತ್ಮ ಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ.  ಪ್ರಶಾಂತ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

​​ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿದ್ದ ರಕ್ಷಿತಾ,  ಅ.24ರ ರಾತ್ರಿ ಉಡುಪಿಯ ಖಾಸಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.ರಕ್ಷಿತಾ ಸಾವನ್ನಪ್ಪಿದ ಸಂಜೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದಳು ಆಕೆಯನ್ನು ಆಟೋದಲ್ಲಿ ಕರೆತಂದ ಪ್ರಶಾಂತ್ ಕುಂದರ್‌, ಆಸ್ಪತ್ರೆಯ ಸ್ಟ್ರೆಚ್ಚರ್​ಗೆ ಹಾಕಿ ಪರಾರಿಯಾಗಿದ್ದ. ಇದಾದ ಕೆಲವೇ ಕ್ಷಣದಲ್ಲಿ ಯುವತಿ ಮೃತಪಟ್ಟಿದ್ದಳು. ಆಕೆಯ ಹೆತ್ತವರಿಗೂ ಆತನೇ ಕರೆ ಮಾಡಿ ವಿಷಯ ತಿಳಿಸಿದ್ದು ಬಳಿಕ ಫೋನ್​ ಸ್ವಿಚ್ಡ್​ ಆಫ್​ ಮಾಡಿಕೊಂಡಿದ್ದ.

ಇನ್ನು ರಕ್ಷಿತಾಳ ಪಾಲಕರು ತಮ್ಮ ಮಗಳ ಸಾವು ಅನುಮಾನಾಸ್ಪದ ಎಂದು ದೂರು ದಾಖಲಿಸಿದ್ದರು. ನಂತರ ಪ್ರಕರಣದ ಕುರಿತು ತನಿಖೆ ಚುರುಕುಗೊಳಿಸಿದ ಪೊಲೀಸರು ಪ್ರಶಾಂತ್​ ಕುಂದರ್​ನನ್ನು ಕಳೆದ ಸೋಮವಾರ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಇದೀಗ ಭಾನುವಾರ ಬಂಧಿಸಲಾಗಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!