ರಕ್ಷಿತಾ ನಾಯಕ್ ನಿಗೂಢ ಸಾವು,  ಪ್ರಶಾಂತ್  ಪತ್ತೆಗಾಗಿ  ಪೊಲೀಸರು ಶೋಧ

ಉಡುಪಿ: ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ಸೇರಿಸಿ,  ಪರಿಚಯವಿದ್ದ  ಯುವತಿ ಅಸ್ವಸ್ಥಳಾದ ಕೂಡಲೇ ಯುವಕ ಕೈ ಕೊಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ. ಯುವಕ ನಾಪತ್ತೆ ಯಾಗಿದ್ದಾನೆ. ದಾಖಲಾದ ಕೆಲವೇ ಹೊತ್ತಿನಲ್ಲಿ ಯುವತಿ  ರಕ್ಷಿತಾ ನಾಯಕ್ ನಿಗೂಢವಾಗಿ ಮೃತಪಟ್ಟಿದ್ದಾಳೆ.  ಶನಿವಾರ 6:30 ಹೊತ್ತಿಗೆ ರಿಕ್ಷಾದಲ್ಲಿ ಯುವತಿಯನ್ನು ಕರೆದು ತಂದಿದ್ದ ಯುವಕ , ರಕ್ಷಿತಾಳ  ಮನೆಯವರಿಗೆ ಕರೆಮಾಡಿ ವಿಷಯ ತಿಳಿಸಿ  ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ.
ಉಡುಪಿಯ ಹಿರಿಯಡ್ಕ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ ಎಂಬ ಗ್ರಾಮದ ನಿವಾಸಿಯಾಗಿರುವ ರಕ್ಷಿತಾ, ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿನಿ. ಕರೊನಾ ಸಮಯದಲ್ಲಿ ಮಂಗಳೂರಿನ ಹೋಟೆಲ್​ ಒಂದರಲ್ಲಿ ನನಗೆ ಉದ್ಯೋಗ ಸಿಕ್ಕಿದೆ ಎಂದು ಮನೆಯವರಿಗೆ ತಿಳಿಸಿ​ದ್ದು, ಉಡುಪಿಯ ಅಂಬಾಗಿಲು ಪರಿಸರದಲ್ಲಿ ಸ್ನೇಹಿತೆಯ ಜತೆಗೆ ವಾಸವಿರುತ್ತೇನೆ ಎಂದು ಪಾಲಕ ರಿಗೆ ಹೇಳಿದ್ದಳು.
ಹದಿನೈದು ದಿನಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದ​ಳು  ರಕ್ಷಿತಾ  ​ಇದೀಗ ಅನುಮಾನಾಸ್ಪ ದವಾಗಿ ಮೃತ ಪಟ್ಟ ರಕ್ಷಿತಳದ್ದು ಕೊಲೆಯೆ ಎಂಬ ಅನುಮಾನ ಕಾಡುತ್ತಿದ್ದು, ಪ್ರಶಾಂತ್  ಪತ್ತೆಗಾಗಿ  ಪೊಲೀಸರು ಶೋಧ ಕಾರ್ಯ ಮುಂದು ವರಿಸಿದ್ದಾರೆ. ರಕ್ಷಿತಾಳ ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದೆ.  ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Leave a Reply