Janardhan Kodavoor/ Team KaravaliXpress
33 C
Udupi
Tuesday, December 1, 2020

ಫೋಟೋಗ್ರಾಫರ್​ ಮೇಲೆ ತಲವಾರು ಬೀಸಿದ ಮೂವರು ಆರೋಪಿಗಳು ಅಂದರ್ ​

ಮಂಗಳೂರು: ಫರಂಗಿಪೇಟೆಯಲ್ಲಿ ಬುಧವಾರ ರಾತ್ರಿ ಫೋಟೋಗ್ರಾಫರ್ ದಿನೇಶ್ ಕೊಲೆ ಯತ್ನ ಪ್ರಕರಣದ ಮೂವರು ಆರೋಪಿ ಗಳನ್ನು ​ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ​ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.

ಅಮ್ಮೆಮಾರ್ ನಿವಾಸಿ ಮಹಮ್ಮದ್ ಅರ್ಷದ್,​ ​ಮಹಮ್ಮದ್ ಸೈಫುದ್ದೀನ್​ ಹಾಗು ​ಅಬ್ದುಲ್ ರೆಹಮಾನ್  ಬಂಧಿತರು.​ ​ಇನ್ನೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ.


ಬುಧವಾರ ರಾತ್ರಿ ಫರಂಗಿಪೇಟೆಯ ಸ್ಟುಡಿಯೋದೊಳಗೆ ನುಗ್ಗಿದ ಆರೋಪಿಗಳು ಮಾರಕಾಸ್ತ್ರದಿಂದ ದಿನೇಶ್​ ಕೊಟ್ಟಿಂಜ​ ಅವರಿಗೆ ಗಂಭೀರ ಹಲ್ಲೆ ನಡೆಸಿದ್ದರು. ತಕ್ಷಣ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಪಿಎಸ್ಐ ಪ್ರಸನ್ನ ನೇತೃತ್ವದ ತಂಡ ಆರೋಪಿಗಳ​​ನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ:  ದಿನಾಂಕ 28-10-2020 ರಂದು  ಸಮಯ ಸಂಜೆ 7-15 ಗಂಟೆಗೆ ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮದ ಫರಂಗಿಪೇಟೆಯಲ್ಲಿನ ದಿನೇಶ್ ರವರ ತೃಷಾ ಪೋಟೊ ಸ್ಟುಡಿಯೋಕ್ಕೆ 4 ಜನ ಯುವಕರು ಪೋಟೊ ತೆಗೆಸುವಂತೆ ಬಂದು, ಇತ್ತೀ ಚಗೆ ಕುಂಪನಮಜಲು ಎಂಬಲ್ಲಿ ಹೆಣ್ಣು ಮಗುವಿನ ಮೇಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದಿನೇಶ್ ರವರು ಹೆಣ್ಣು ಮಗುವಿನ ಕಡೆಯವರಿಗೆ ಬೆಂಬಲ ನೀಡಿದ್ದ ದ್ವೇಷದಿಂದ, ಅದರಲ್ಲಿ ಒಬ್ಬನು ಕೊಲ್ಲುವ ಉದ್ದೇಶದಿಂದ  ಕತ್ತಿಯಿಂದ ತಲೆಗೆ, ಬಲ ಕೈಗೆ ಹಾಗೂ ಎಡ ಕಿಬ್ಬೊಟ್ಟೆಗೆ ಹಲ್ಲೆ ನಡೆಸಿ ತೀವ್ರ ಗಾಯವಾಗಿದ್ದು ,ಆ ವೇಳೆಯಲ್ಲಿ ಅಲ್ಲಿದ್ದ ಶೇಖರ ಪೂಜಾರಿ ರವರು ಹಲ್ಲೆಯಾಗುವುದನ್ನು ತಪ್ಪಿಸಲು ಅಲ್ಲೇ ಇದ್ದ ಚೇರ್ ನಿಂದ ಜೋರಾಗಿ ಇಬ್ಬರು ಆರೋಪಿಗಳಿಗೆ ಹೊಡೆದಿದ್ದು ಅವರ ಕೈಗೆ ಗಾಯವಾಗಿರುತ್ತದೆ, ನಂತರ ದಿನೇಶ್ ರವರನ್ನು ಚಿಕಿತ್ಸೆಗಾಗಿ ಮಂಗಳೂರಿನ A J ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿರುತ್ತದೆ 

ಕೂಡಲೇ ಆರೋಪಿಗಳಾದ   ಅಮ್ಮೆಮ್ಮಾರು ನಿವಾಸಿ ಮಹಮ್ಮದ್  ಅರ್ಷದ್(19),ಅಬ್ದುಲ್ ರೆಹಮಾನ್(22) ಮತ್ತು ಮಹ ಮ್ಮದ್ ಸೈಪುದ್ದೀನ್(22) ರವರನ್ನು  ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಪೊಲೀಸ್ ಉಪಾಧೀಕ್ಷಕರು ಬಂಟ್ವಾಳ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಪ್ರಸನ್ನ  ಹಾಗೂ ಸಿಬ್ಬಂದಿರವರು ದಸ್ತಗಿರಿ ಮಾಡಿರುತ್ತಾರೆ.​ ​ಮತ್ತೊಬ್ಬ ಆರೋಪಿ ಸವಾದ್ ನ ದಸ್ತಗಿರಿಗೆ  ವಿಶೇಷ ತಂಡವು ಶ್ರಮಿಸುತ್ತಿದೆ. ತನಿಖೆ ಮುಂದುವರೆದಿರುತ್ತದೆ.​​

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಮಂಗಳೂರಿನಲ್ಲಿ ಬೋಟ್ ದುರಂತ,6ಮಂದಿ ನಾಪತ್ತೆ

ಮಂಗಳೂರು: ಡಿ 1 : ಮೀನುಗಾರಿಕೆಗೆ ತೆರಳಿ ವಾಪಾಸಾಗುತ್ತಿದ್ದ ಬೋಟ್ ಮಗುಚಿ ಬಿದ್ದು 6 ಮಂದಿ ಮೀನುಗಾರರು ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬೋಳಾರದ ಶ್ರೀ ರಕ್ಷಾ ಎಂಬ ಮೀನುಗಾರಿಕಾ ಬೋಟ್...

}ಶ್ರೀಕೃಷ್ಣ ಮಠದ ನಾಮ ಫಲಕದಲ್ಲಿ ಕನ್ನಡವನ್ನು ತೆಗೆದು ಹಾಕಿರುವುದು ಸರಿಯಾದ ಕ್ರಮವಲ್ಲ~ಕಸಾಪ

ಉಡುಪಿ, ಡಿ.1: ಉಡುಪಿ ಶ್ರೀಕೃಷ್ಣ ಮಠದ ನಾಮ ಫಲಕದಲ್ಲಿ ಕನ್ನಡವನ್ನು ತೆಗೆದು ಹಾಕಿರುವುದು ಸರಿಯಾದ ಕ್ರಮವಲ್ಲ. ಕನ್ನಡ ಸಾಹಿತ್ಯ ಪರಿಷತ್ ಇದನ್ನು ಉಗ್ರವಾಗಿ ಖಂಡಿಸುತ್ತದೆ ಎಂದು ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ...

ಹಣತೆ ದೀಪದೊಂದಿಗೆ ಕಲಾತ್ಮಕ ಛಾಯಾಗ್ರಹಣ ನಡೆಸಿದ ಕರಂದಾಡಿ ಶ್ರೀಧರ್ ಶೆಟ್ಟಿಗಾರ್… 

​​ಕಾಪು ಮಜೂರು ಗ್ರಾಮದ ಕರಂದಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ದೀಪೋತ್ಸವ ರವಿವಾರ ನಡೆಯಿತು. ದೀಪೋತ್ಸವದ ಪ್ರಯುಕ್ತ ಶ್ರೀ ದೇವರಿಗೆ ನವಕ ಕಲಶಾಭಿಷೇಕ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ರಂಗಪೂಜೆ,ತುಳಸಿ ಪೂಜೆ, ತುಳಸಿ ಸಂಕೀರ್ತಣೆ...

ಗ್ರಾ.ಪಂ. ಚುನಾವಣೆ ಘೋಷಣೆ: ಕಾಂಗ್ರೆಸ್ ರಾಜಕೀಯ ದೊಂಬರಾಟ ಪ್ರಾರಂಭ–ಪೆರ್ಣಂಕಿಲ ಶ್ರೀಶ ನಾಯಕ್ ಲೇವಡಿ

ಉಡುಪಿ: ಕೊರೋನಾದ ಸಂಕಷ್ಟದ ಕಾಲದಲ್ಲಿ ನಿದ್ದೆಯಲ್ಲಿ ಮುಳುಗಿದ್ದ ಕಾಂಗ್ರೆಸ್ ನಾಯಕರು ಇದೀಗ ಗ್ರಾಮ ಪಂಚಾಯತ್ ಚುನಾವಣೆಯ ಘೋಷಣೆಯಿಂದ ಎದ್ದು ರಾಜಕೀಯ ದೊಂಬರಾಟದಲ್ಲಿ ತೊಡಗಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ...

ಮಣಿಪಾಲ: ಯುವಕರ ಸಮಯ ಪ್ರಜ್ಞೆಯಿಂದ ಭಾರಿ​ ಬೆಂಕಿ​ ಅನಾಹುತದಿಂದ ಪಾರು

ಮಣಿಪಾಲ : ಸಮೀಪದ ದುಗ್ಲಿ ಪದವು ಎಂಬಲ್ಲಿ ತಡರಾತ್ರಿ ಸುಮಾರಿಗೆ ಬೆಂಕಿಬಿದ್ದಿದ್ದು​ ​ಯುವಕರ ಸಮಯ​ ​ಪ್ರಜ್ಞೆಯಿಂದ ಬಹಳಷ್ಟು ಜೀವ ಹಾನಿ ಮತ್ತು ಆಸ್ತಿಪಾಸ್ತಿ ರಕ್ಷಣೆಯಾಗಿದೆ.​ ಇಂದು ರಾತ್ರಿ ಸುಮಾರು ಹತ್ತು ಗಂಟೆ ಸುಮಾರಿಗೆ ಮಣಿಪಾಲ...
error: Content is protected !!