ಅಯೋಧ್ಯೆ, ಮಥುರಾ ಮಂದಿರಗಳ ಮೇಲೆ ಬಾಂಬ್‌ ದಾಳಿ- ಪ್ರತಿಕಾರದ ಪತ್ರ ಬರೆದ ಪಿಎಫ್‌ಐ!

ಇತ್ತೀಚೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧಿಸಲಾಗಿದೆ. ಇದರಿಂದ ಕುದ್ದುಹೋಗಿರುವ ಪಿಎಫ್‌ಐ ಪ್ರತಿಕಾರದ ಪತ್ರವನ್ನು ರವಾನಿಸಿದೆ. ಪ್ರಮುಖ ಹಿಂದೂ ದೇವಾಲಯಗಳಾದ ಅಯೋಧ್ಯೆಯ ರಾಮಮಂದಿರ ಮತ್ತು ಮಥುರಾದ ಕೃಷ್ಣ ಜನ್ಮಭೂಮಿ ಮಂದಿರದ ಮೇಲೆ ಬಾಂಬ್‌ ದಾಳಿ ನಡೆಸಲಾಗುವುದು ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ. ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ರಾಜಕಾರಣಿಗಳನ್ನು ತಾವು ಗುರಿಯಾಗಿಸಿಕೊಂಡಿದ್ದೇವೆ, ನಮ್ಮನ್ನು ಕೆಣಕಿದವರಿಗೆ ಶಿರಚ್ಛೇದನ ಶಿಕ್ಷೆಯನ್ನು ನೀಡುತ್ತೇವೆ ಎಂದು ತಮಗೆ ಬಂದ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಬಿಜೆಪಿ ಶಾಸಕರೊಬ್ಬರು ದೂರು ದಾಖಲಿಸಿದ್ದಾರೆ.
ಮಹಾರಾಷ್ಟ್ರದ ಬಿಜೆಪಿ ಶಾಸಕ ವಿಜಯ್ ದೇಶ್‌ಮುಖ್ ಅವರು ಪಿಎಫ್‌ಐ ಮುಖಂಡ ಮೊಹಮ್ಮದ್ ಶಫಿ ಬಿರಾಜದಾರ್ ಎಂಬಾತನಿಂದ ‘ಸರ್ ತಾನ್ ಸೆ ಜುದಾ’ (ಶಿರಚ್ಛೇಧನ) ಬೆದರಿಕೆ ಪತ್ರವನ್ನು ಸ್ವೀಕರಿಸಿದ್ದು ತಕ್ಷಣವೇ ಪೊಲೀಸ್ ದೂರು ದಾಖಲಿಸಿದ್ದಾರೆ.
ಅಯೋಧ್ಯೆ ಮತ್ತು ಮಥುರಾ ದೇವಾಲಯಗಳ ಮೇಲೆ ಆತ್ಮಹತ್ಯಾ ಬಾಂಬರ್‌ಗಳ ಮೂಲಕ ದಾಳಿ ಮಾಡುವುದಾಗಿ ಬಿರಾಜದಾರ್ ಬೆದರಿಕೆ ಹಾಕಿದ್ದಾರೆ ಎಂದು ದೇಶಮುಖ್ ಎಫ್‌ಐಆರ್ ನಲ್ಲಿ ಪ್ರಸ್ತಾಪಿಸಿದ್ದಾರೆ. ಮೋದಿ ಮತ್ತು ಅನೇಕ ಪ್ರಮುಖ ನಾಯಕರು ತಮ್ಮ ರಾಡಾರ್‌ನಲ್ಲಿದ್ದಾರೆ. ಪಿಎಫ್‌ಐ ಮೇಲೆ ಸರ್ಕಾರದ ನಿಷೇಧದ ತಮಗೆ ಕೋಪ ತರಿಸಿದ್ದು ಶಿರಚ್ಛೇದನದ ಮೂಲಕ ದ್ವೇಷ ತೀರಿಸಿಕೊಳ್ಳುವುದಾಗಿ ಬಿರಾಜದಾರ್ ಬೆದರಿಕೆ ಹಾಕಿದ್ದಾರೆ ಎಂದು ಶಾಸಕರು ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದು, ಮೊದಲು ಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪ್ರಯತ್ನಿಸುತ್ತಿದ್ದಾರೆ. ಕಳೆದ ತಿಂಗಳು ಕೇಂದ್ರ ಸರ್ಕಾರವು ಪಿಎಫ್‌ಐ ಮತ್ತು ಅದರ ಎಂಟು ಅಂಗಸಂಸ್ಥೆಗಳು ಭಾರತ ವಿರೋಧಿ ಚಟುವಟಿಕೆಗಳು ಹಾಗೂ  ಐಸಿಸ್, ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ (ಜೆಎಂಬಿ) ಮತ್ತು ಸಿಮಿಯಂತಹ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದಡಿ ನಿಷೇಧಿಸಿತ್ತು.
ಅಯೋಧ್ಯೆ ರಾಮಮಂದಿರ ಮತ್ತು ಕೃಷ್ಣ ಜನ್ಮಭೂಮಿ ಮಂದಿರದಂತಹ ಪ್ರಮುಖ ಹಿಂದೂ ದೇವಾಲಯಗಳನ್ನು ಆತ್ಮಹತ್ಯಾ ಬಾಂಬರ್‌ಗಳಿಂದ ಗುರಿಯಾಗಿಸುವ ಬೆದರಿಕೆಯನ್ನು ಪಿಎಫ್‌ಐ ಸದಸ್ಯರು ಪತ್ರದಲ್ಲಿ ಉಲ್ಲೇಖಿಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಂತಹ  ರಾಜಕಾರಣಿಗಳು ಮತ್ತು ಇತರ ಹಲವಾರು ನಾಯಕರು ತಮ್ಮ ರಾಡಾರ್‌ನಲ್ಲಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸೊಲ್ಲಾಪುರ ಪೊಲೀಸರು ಪತ್ರದ ಸತ್ಯಾಸತ್ಯತೆ ಕುರಿತು ತನಿಖೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.

 
 
 
 
 
 
 
 
 
 
 

Leave a Reply