ಕಿರುತೆರೆ ನಟಿ ಶೂಟಿಂಗ್ ಸೆಟ್​ನಲ್ಲೇ ಆತ್ಮಹತ್ಯೆ

ಕಿರುತೆರೆ ನಟಿ ಶೂಟಿಂಗ್ ಸೆಟ್​ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಾಲಿವ್ ಎಂಬಲ್ಲಿನ ಶೂಟಿಂಗ್​ ಸೆಟ್​​ನಲ್ಲಿ ಕಿರುತೆರೆ ನಟಿ ತುನಿಷಾ ಶರ್ಮಾ (20) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳದಲ್ಲಿದ್ದವರು ಕೂಡಲೇ ಈಕೆಯನ್ನು ಆಸ್ಪತ್ರೆಗೆ ಕರೆದೊಯ್ದರು, ಅದಾಗಲೇ ಆಕೆ ಮೃತಪಟ್ಟಿದ್ದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎಂಬಿತ್ಯಾದಿ ಸಂಗತಿಗಳು ಇನ್ನಷ್ಟೇ ಖಚಿತವಾಗಿ ತಿಳಿಯಬೇಕಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದಾರೆ.

ಚಕ್ರವರ್ತಿನ್ ಅಶೋಕ್ ಸಾಮ್ರಾಟ್, ಗಬ್ಬರ್ ಪೂಂಚ್​ವಾಲಾ, ಶೇರ್ ಇ ಪಂಜಾಬ್​ ಮುಂತಾದ ಧಾರಾವಾಹಿಗಳಲ್ಲಿ ಈಕೆ ನಟಿಸಿದ್ದಳು. ಫಿತೂರ್, ಬಾರ್ ಬಾರ್ ದೇಖೋ, ಕಹಾನಿ 2: ದುರ್ಗಾ ರಾಣಿ ಸಿಂಗ್, ದಬಾಂಗ್​ 3 ಮುಂತಾದ ಸಿನಿಮಾಗಳಲ್ಲೂ ಈಕೆ ಅಭಿನಯಿಸಿದ್ದಳು.

 
 
 
 
 
 
 
 
 

Leave a Reply