ವಿದ್ಯಾರ್ಥಿಯ ಮೇಲೆ ಗೆಳೆಯರಿಂದ ಏಕಾಏಕಿ ಚಾಕು ಇರಿತ

ಮಂಗಳೂರು: ಪಿಯು ವಿದ್ಯಾರ್ಥಿಗೆ ಇನ್ನೊಂದು ಕಾಲೇಜಿನ ಪಿಯು ವಿದ್ಯಾರ್ಥಿ ಚಾಕು ಇರಿದ ಘಟನೆ ಮಂಗಳೂರು ಪೂರ್ವ ಪೊಲೀಸ್ ಠಾಣ ವ್ಯಾಪ್ತಿಯ ನಂತೂರು ಪದವು ಬಳಿ ನಡೆದಿದೆ.

ನಂತೂರು ಎನ್ ಎಸ್ ಎ ಎಂ ಕಾಲೇಜಿನ ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದ ವಿದ್ಯಾರ್ಥಿ ಶ್ರೇಯಾಂಕ್ ಸೆಪ್ಟಂಬರ್ 15 ರಂದು ಸಂಜೆ ಕಾಲೇಜು ಮುಗಿದ ನಂತರ ಗೆಳೆಯರೊಂದಿಗೆ ನಂತೂರು ಜಂಕ್ಷನ್ ಕಡೆಗೆ ತೆರಳುತ್ತಿದ್ದಾಗ ಅಲ್ಲಿದ್ದ ಸ್ಟುಡಿಯೋ ಬಳಿ ತಲುಪುತ್ತಿದ್ದಂತೆ ಶ್ರೇಯಾಂಕ್ ಗೆ ಪರಿಚಯವಿರುವ ಪದುವಾ ಕಾಲೇಜಿನ ಸ್ವಸ್ತಿಕ್ ಹಾಗೂ ಸಾವಂತ್ ಎಂಬವರು ಬಂದಿದ್ದಾರೆ. ಹಾಗೇ ಬಂದವರು ಶ್ರೇಯಾಂಕ್ ನನ್ನು ನಿನ್ನ ಬಳಿ ಮಾತನಾಡೋದಿದೆ ಎಂದು ಹೇಳಿ ಬಬ್ಬುಸ್ವಾಮಿ ದೇವಸ್ಥಾನದ ಹಿಂಬದಿಗೆ ಕರೆದುಕೊಂಡು ಹೋಗಿ, ಏಕಾಏಕಿ ಕಿಸೆಯಿಂದ ಚೂರಿ ತೆಗೆದು ಸ್ವಸ್ತಿಕ್ ಹಾಗೂ ಸಾವಂತ್ ಇಬ್ಬರು ಶ್ರೇಯಾಂಕ್ ನ ಹೊಟ್ಟೆಯ ಎಡಭಾಗಕ್ಕೆ ,ಎಡಗೈ, ಬೆನ್ನಿನ ಭಾಗಕ್ಕೆ ಇರಿದಿದ್ದಾರೆ. ಇದನ್ನು ಗಮನಿಸಿದ ಶ್ರೇಯಾಂಕ್ ಸ್ನೇಹಿತರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನು ಶ್ರೇಯಾಂಕ್ ಗೆಳೆಯನಾದ ಪದವಾ ಕೇಜಿನ ನಿತೇಶ್ ಅದೇ ಕಾಲೇಜಿನ ವಿದ್ಯಾರ್ಥಿಗಳಾದ ಅಲೆಕ್ಸಾಂಡರ್,ಸ್ವಸ್ತಿಕ್ ಹಾಗೂ ಶ್ರವಂತ್ ಎಂಬವರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಶ್ರೇಯಾಂಕ್ ಗೆಳೆಯರೊಂದಿಗೆ ಹೋಗಿ ಸಮಾಧಾನ ಮಾಡಿದ್ದರು ಎನ್ನಲಾಗಿದೆ. ಇದೇ ಕೋಪದಲ್ಲಿ ಶ್ರೇಯಾಂಕ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಶ್ರೇಯಾಂಕ್ ಪೋಷಕರು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply