ಶ್ರದ್ದಾಳ ಕೊಲೆ ಮಾಡಲೆಂದೇ ಫ್ರಿಡ್ಜ್, ಫ್ಲಾಟ್ ಖರೀದಿ ಮಾಡಿದ್ದ ದುರುಳ ಅಫ್ತಾಬ್!

ದೆಹಲಿಯಲ್ಲಿ ಮುಸ್ಲಿಂ ಸಮುದಾಯದ ಯುವಕನ ಕುಕೃತ್ಯಕ್ಕೆ ಬಲಿಯಾದ ಹಿಂದೂ ಯುವತಿ ಶ್ರದ್ಧಾ ವಾಕರ್​ ಕೊಲೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ದೆಹಲಿ ಪೊಲೀಸರಿಗೆ ಒಂದೊಂದೇ ಆಘಾತಕಾರಿ ವಿಚಾರಗಳು ಆರೋಪಿಯ ತನಿಖೆಯ ಸಂದರ್ಭದಲ್ಲಿ ತಿಳಿದು ಬರ್ತಿಇದೆ. ಅಫ್ತಾಬ್​​ ಅಮಿನ್​ ಪೂನಾವಾಲಾ ಶ್ರದ್ಧಾಳನ್ನು ಕೊಲೆ ಮಾಡಲೆಂದು ಕೇವಲ ರೆಫ್ರಿಜರೇಟರ್​ ಖರೀದಿ ಮಾಡಿದ್ದು ಮಾತ್ರವಲ್ಲ. ಈತ ದೆಹಲಿಯ ಛತ್ತರಪುರದಲ್ಲಿ ಫ್ಲಾಟ್​ನ್ನು ಇದೇ ಕಾರಣಕ್ಕೆ ಬಾಡಿಗೆ ಪಡೆದಿದ್ದ ಎನ್ನಲಾಗಿದೆ. ಅಫ್ತಾಬ್​ ಶ್ರದ್ಧಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದ ಈತ ಬಳಿಕ ಅದನ್ನು ದೆಹಲಿಯ ವಿವಿಧ ಅರಣ್ಯ ಭಾಗದಲ್ಲಿ ವಿಲೇವಾರಿ ಮಾಡಿದ್ದ.

ರಾಷ್ಟ್ರ ರಾಜಧಾನಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಅಫ್ತಾಬ್ ಫುಡ್​ ಬ್ಲಾಗರ್ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಲಿವ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದ ಇವರಿಬ್ಬರ ನಡುವೆ ಮದುವೆ ವಿಚಾರಕ್ಕೆ ಪದೇ ಪದೇ ಜಗಳವಾಗುತ್ತಿತ್ತು , ಆರೋಪಿ ಅಫ್ತಾಬ್​ ಹಾಗೂ ಕೊಲೆಯಾದ ಶ್ರದ್ಧಾ ಡೇಟಿಂಗ್​ ಸೈಟ್​ ಒಂದರಲ್ಲಿ ಪರಸ್ಪರ ಭೇಟಿಯಾಗಿದ್ದರು. 2019ರಿಂದ ರಿಲೇಶನ್​ಶಿಪ್​ನಲ್ಲಿದ್ದ ಇವರಿಬ್ಬರು ಇದೇ ವರ್ಷ ದೆಹಲಿಗೆ ಶಿಫ್ಟ್​ ಆಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅದಕ್ಕೂ ಮುನ್ನ ಇವರಿಬ್ಬರು ಮಹಾರಾಷ್ಟ್ರದಲ್ಲಿ ವಾಸವಿದ್ದರು.

ಮಾರ್ಚ್​ -ಏಪ್ರಿಲ್​ ತಿಂಗಳಲ್ಲಿ ಇವರಿಬ್ಬರು ಪರ್ವತ ಪ್ರದೇಶಗಳಿಗೆ ಪ್ರವಾಸ ಕೈಗೊಂಡಿದ್ದರು. ಮೇ ತಿಂಗಳಲ್ಲಿ ಇವರಿಬ್ಬರು ಹಿಮಾಚಲ ಪ್ರದೇಶಕ್ಕೆ ತೆರಳಿದ್ದರು ಆಗ ದೆಹಲಿಯ ಛತಾರ್​ಪುರ ನಿವಾಸಿ ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಕೊಂಡ ಇವರಿಬ್ಬರು ಬಳಿಕ ಅದೇ ವ್ಯಕ್ತಿಯ ಫ್ಲಾಟ್​ನಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ಇದಾದ ಬಳಿಕ ಅಫ್ತಾಬ್​​ ಛತಾರ್ಪುರದಲ್ಲಿ ಬೇರೊಂದು ಫ್ಲಾಟ್​ಗೆ ಶ್ರದ್ಧಾಳ ಜೊತೆಯಲ್ಲಿಯೇ ಶಿಫ್ಟ್​ ಆಗಿದ್ದ. ಇದೇ ಫ್ಲಾಟ್​ನಲ್ಲಿ ಮೇ 18ರಂದು ಶ್ರದ್ಧಾಳ ಕೊಲೆಯಾಗಿತ್ತು. ಪೊಲೀಸರಿಗೆ ತಿಳಿದಿರುವ ಮಾಹಿತಿಯ ಪ್ರಕಾರ ಶ್ರದ್ಧಾಳನ್ನು ಕೊಲೆ ಮಾಡುವ ಕೆಲವೇ ದಿನಗಳ ಮುನ್ನ ಅಫ್ತಾಬ್​ ಈ ಫ್ಲಾಟ್​ ಶಿಫ್ಟ್​ ಆಗಿದ್ದನಂತೆ. ಹೀಗಾಗಿ ಶ್ರದ್ಧಾಳನ್ನು ಕೊಲೆ ಮಾಡಲು ಅಫ್ತಾಬ್​ ಮೊದಲೇ ಪ್ಲಾನ್​ ಮಾಡಿಕೊಂಡಿದ್ದನಾ ಎಂಬ ಬಗ್ಗೆ ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ.

ಅಫ್ತಾಬ್​ನ ಸೋಶಿಯಲ್​ ಮೀಡಿಯಾದ ಖಾತೆಗಳನ್ನು ನೋಡಿದಾಗ ಈತ ಒಬ್ಬ ಫುಡ್​ ಬ್ಲಾಗರ್ ಎಂದು ಹೇಳಬಹುದಾಗಿದೆ. ಆದರೆ ಈತ ಕಳೆದ ಕೆಲವು ತಿಂಗಳಿನಿಂದ ಯಾವುದೇ ವಿಡಿಯೋಗಳನ್ನು ಪೋಸ್ಟ್​ ಮಾಡಿರಲಿಲ್ಲ. ಫೆಬ್ರವರಿಯಲ್ಲಿ ಈತ ಕೊನೆಯ ಬಾರಿಗೆ ವಿಡಿಯೋ ಪೋಸ್ಟ್​ ಮಾಡಿದ್ದ. ಇದಾದ ಬಳಿಕ ಈತ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಇರಲಿಲ್ಲ. ಈತನಿಗೆ ಇನ್​ಸ್ಟಾಗ್ರಾಂನಲ್ಲಿ 28 ಸಾವಿರಕ್ಕೂ ಅಧಿಕ ಫಾಲೋವರ್ಸ್​ ಇದ್ದರು ಎನ್ನಲಾಗಿದೆ. ಶ್ರದ್ಧಾ ಹಾಗೂ ಅಫ್ತಾಬ್ ಒಂದೇ ಕಾಲ್​​ ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆ ಮಾಡಿ ಶ್ರದ್ಧಾಳ ದೇಹವನ್ನು ಚೂರು ಚೂರು ಮಾಡಿದ ಬಳಿಕ ಪ್ರತಿದಿನ ಸಂಜೆ ಆರರಿಂದ ಏಳು ಗಂಟೆ ಸುಮಾರಿಗೆ ಅಫ್ತಾಬ್​ ಫ್ಲಾಟ್​ಗೆ ಬರುತ್ತಿದ್ದ. ಫ್ರಿಡ್ಜ್​ನಲ್ಲಿಟ್ಟಿದ್ದ ಶ್ರದ್ಧಾಳ ದೇಹದ ತುಂಡುಗಳನ್ನು ಕಪ್ಪು ಬಣ್ಣದ ಕವರ್​​ನಲ್ಲಿ ಹಾಕಿ ಮಧ್ಯರಾತ್ರಿ ಕಾಡಿಗೆ ತೆಗೆದುಕೊಂಡು ಹೋಗ್ತಿದ್ದ. ಹಾಗೂ ಕಪ್ಪು ಬಣ್ಣದ ಪ್ಲಾಸ್ಟಿಕ್​ ಕವರ್​ನಿಂದ ಆ ಮಾಂಸದ ಮುದ್ದೆಯನ್ನು ಹೊರ ತೆಗೆದು ಕಾಡಿನಲ್ಲಿ ಎಸೆಯುತ್ತಿದ್ದ ಎನ್ನಲಾಗಿದೆ. ಇದರಿಂದ ಪೊಲೀಸರಿಗೆ ಯಾವುದೇ ಅನುಮಾನ ಬರೋದಿಲ್ಲ ಅನ್ನೋದು ಅಫ್ತಾಬ್​ ಪ್ಲಾನ್​ ಆಗಿತ್ತು.

ಶ್ರದ್ಧಾಳನ್ನು ಕೊಲೆ ಮಾಡಿದ ಬಳಿಕ ಆಕೆಯ ಶವವನ್ನು ಸ್ನಾನಗೃಹದಲ್ಲಿ ಇರಿಸಿದ್ದ ಅಫ್ತಾಬ್ ಕೂಡಲೇ ಅಂಗಡಿಗೆ ಹೋಗಿ ರೆಫ್ರಿಜರೇಟರ್​ ಖರೀದಿ ಮಾಡಿದ್ದ. ಬಳಿಕ ಬಾತ್​ರೂಮಿನಲ್ಲಿಯೇ ಶವವನ್ನು ಕತ್ತರಿಸಿ ಫ್ರಿಡ್ಜ್​ಗೆ ಹಾಕಿದ್ದ ಎನ್ನಲಾಗಿದೆ. ರೆಫ್ರಿಜರೇಟರ್​ ಇದ್ದ ರೂಮಿನಲ್ಲಿಯೇ ಮಲಗುತ್ತಿದ್ದ ಅಫ್ತಾಬ್​ ತಾನು ಪ್ರತಿನಿತ್ಯ ಶ್ರದ್ಧಾಳ ಮುಖದ ತುಂಡನ್ನು ನೋಡುತ್ತಿದ್ದೆ ಎಂದು ಪೊಲೀಸರ ಬಳಿ ಬಾಯ್ಬಿಟ್ಟಿದ್ದಾನಂತೆ.

 
 
 
 
 
 
 
 
 
 
 

Leave a Reply