ಲವ್ ಜಿಹಾದ್ ಗೆ ಯುವತಿ ಬಲಿ!

 ತನ್ನ ಪ್ರೇಯಸಿಯನ್ನೇ ಕೊಲೆ ಮಾಡಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿ ನಗರ ತುಂಬೆಲ್ಲಾ ಎಸೆದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಘಟನೆಯಲ್ಲಿ ಶ್ರದ್ಧಾ ಮೃತ ಯುವತಿಯಾಗಿದ್ದು, ಅಫ್ತಾಬ್ ಅಮೀನ್ ಪೂನಾವಾಲಾ ಪ್ರಕರಣದ ಆರೋಪಿಯಾಗಿದ್ದಾನೆ.

26 ವರ್ಷದ ಶ್ರದ್ಧಾ ಮುಂಬೈನ ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು, ಅಲ್ಲಿ ಅವಳು ಪೂನಾವಾಲಾ ನನ್ನು ಪ್ರೀತಿಸುತಿದ್ದಳು ಎನ್ನಲಾಗಿದೆ. ಅದಲ್ಲದೆ ಇಬ್ಬರೂ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದಾರೆ ಮತ್ತು ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಈ ವಿಚಾರ ಯುವತಿಯ ಮನೆಯವರಿಗೆ ತಿಳಿದು ಪ್ರೀತಿಗೆ ನಿರಾಕರಿಸಿದ್ದಾರೆ, ಇದರಿಂದ ಮನನೊಂದ ಇಬ್ಬರು ಮುಂಬೈಯಿಂದ ದೆಹಲಿಗೆ ಓಡಿಹೋಗಿ ಅಲ್ಲಿ ಜೀವನ ಆರಂಭಿಸಿದ್ದಾರೆ, ಅಲ್ಲಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ, ಇತ್ತ ಪ್ರೀತಿಗೆ ನಿರಾಕರಿಸಿದ ಪೋಷಕರ ಕರೆಗಳನ್ನು ಯುವತಿ ಸ್ವೀಕರಿಸಲು ನಿರಾಕರಿಸಿದ್ದಾಳೆ, ಇದರಿಂದ ಗಾಬರಿಗೊಂಡ ಯುವತಿಯ ಪೋಷಕರು ಮುಂಬೈ ನಲ್ಲಿ ವಾಸಮಾಡುತ್ತಿದ್ದ ಯುವತಿಯ ಮನೆಗೆ ಬಂದಿದ್ದಾರೆ ಆದರೆ ಅಲ್ಲಿ ಮನೆಗೆ ಬೀಗ ಹಾಕಲಾಗಿತ್ತು ಗಾಬರಿಗೊಂಡ ಯುವತಿಯ ಪೋಷಕರು ಕೂಡಲೇ ತನ್ನ ಮಗಳನ್ನು ಪೂನಾವಾಲಾ ಅಪಹರಿಸಿದ್ದಾನೆ ಎಂದು ಠಾಣೆಯಲ್ಲಿ ದೂರು ನೀಡಿದ್ದಾರೆ.

ಅತ್ತ ಮುಂಬೈ ಪೊಲೀಸರು ಯುವತಿಯ ಹುಡುಕಾಟ ನಡೆಸಿದರೆ, ಇತ್ತ ಯುವತಿ ಮತ್ತು ಪ್ರಿಯಕರನ ನಡುವೆ ನಡೆಯುತ್ತಿದ್ದ ಜಗಳ ಅತಿರೇಕಕ್ಕೆ ತಿರುಗಿ ಕೋಪಗೊಂಡ ಪೂನಾವಾಲಾ ಶ್ರದ್ಧಾಳನ್ನು ಹರಿತವಾದ ಆಯುಧದಿಂದ ಕೊಲೆ ಮಾಡಿ ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಅವುಗಳನ್ನು ಇಡಲು ಫ್ರಿಡ್ಜ್ ನಲ್ಲಿ ಇಟ್ಟಿದ್ದಾನೆ ಬಳಿಕ ಹದಿನೆಂಟು ದಿನಗಳಲ್ಲಿ ಪ್ರತಿದಿನ ರಾತ್ರಿ ಎರಡು ಗಂಟೆಯ ಸುಮಾರಿಗೆ ದೇಹದ ತುಂಡುಗಳನ್ನು ದೆಹಲಿಯ ವಿವಿಧ ಸ್ಥಳಗಳಲ್ಲಿ ಎಸೆದು ಬಂದಿದ್ದನಂತೆ.

ಇತ್ತ ಮುಂಬೈ ಪೊಲೀಸರು ಪ್ರಕರಣ ಭೇದಿಸಲು ಹುಡುಕಾಟ ನಡೆಸಿದಾಗ ಮೊಬೈಲ್ ನೆಟ್ ವರ್ಕ್ ಪರಿಶೀಲಿಸಿದಾಗ ದೆಹಲಿಯಲ್ಲಿರುವ ಮಾಹಿತಿ ಲಭ್ಯವಾಗಿದೆ ಅದರಂತೆ ದೆಹಲಿಗೆ ಬಂದು ಪೂನಾವಾಲಾನನ್ನ ವಶಕ್ಕೆ ಪಡೆದು ತನಿಖೆ ನಡೆಸಿದಾಗ ತಾನು ಮಾಡಿದ ಕೃತ್ಯ ಬಾಯಿ ಬಿಟ್ಟಿದ್ದಾನೆ. ಘಟನೆಗೆ ಸಂಬಂಧಿಸಿ ಮುಂಬೈ ಪೊಲೀಸರು ಪೂನಾವಾಲನನ್ನು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ.

Leave a Reply