ಮದುವೆಯ ನಂತರ ಬುರ್ಖಾ ಹಾಕಲು ಒಪ್ಪದ ಹಿಂದೂ ಪತ್ನಿಯ ಕೊಲೆ!

ಮದುವೆಯ ನಂತರ ಬುರ್ಖಾ ಹಾಕಲು ಒಪ್ಪದ ಹಿಂದೂ ಪತ್ನಿಯನ್ನು ಪತಿ ಕೊಲೆ ಮಾಡಿದ್ದಾನೆ.

ಮುಂಬೈ ನಿವಾಸಿ ಇಕ್ಬಾಲ್ ಮೊಹಮ್ಮದ್ ಶೇಖ್, ಪತ್ನಿ ರೂಪಾಲಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ಬುರ್ಖಾ ಧರಿಸಲು ನಿರಾಕರಣೆ, ಮುಸ್ಲಿಂ ಧರ್ಮದ ಆಚರಣೆಗೆ ಒಪ್ಪದ ಪತ್ನಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಪೊಲೀಸರು ಮೊಹಮ್ಮದ್‌ನನ್ನು ಬಂಧಿಸಿದ್ದಾರೆ.

ರೂಪಾಲಿ ಹಾಗೂ ಮೊಹಮ್ಮದ್ ಮೂರು ವರ್ಷದ ಹಿಂದೆ ಮದುವೆಯಾಗಿದ್ದರು. ಮದುವೆಯಾದಾಗಿನಿಂದಲೂ ಇಸ್ಲಾಂ ಧರ್ಮದ ಹೆಣ್ಣಿನಂತೆ ಇರಲು ಮೊಹಮ್ಮದ್ ಹಾಗೂ ಅವರ ಮನೆಯವರು ಒತ್ತಡ ಹೇರಿದ್ದರು ಎಂದು ರೂಪಾಲಿ ಪೋಷಕರು ಹೇಳಿದ್ದಾರೆ.

ಇದೇ ಕಾರಣಕ್ಕೆ ಹಲವು ಬಾರಿ ಜಗಳವಾಗಿದ್ದು, ರೂಪಾಲಿ ಮನೆ ಬಿಟ್ಟು ಬಂದಿದ್ದಳು. ಜಗಳದಿಂದ ಬೇಸತ್ತ ಮೊಹಮ್ಮದ್ ಕೂಡ ಹೆಂಡತಿಯಿಂದ ಪ್ರತ್ಯೇಕವಾಗಿ ವಾಸವಿದ್ದ. ಸೆ.೨೬ರಂದು ಮೊಹಮ್ಮದ್ ರೂಪಾಲಿಯನ್ನು ಭೇಟಿಯಾಗಿದ್ದಾನೆ. ಈ ವೇಳೆ ರೂಪಾಲಿ ವಿಚ್ಛೇದನ ನೀಡುವಂತೆ ಕೇಳಿದ್ದಾಳೆ. ಮಗು ಇರುವ ಕಾರಣ ವಿಚ್ಛೇದನ ನೀಡುವುದಿಲ್ಲ, ವಿಚ್ಛೇದನ ನೀಡಿದರೂ ಮಗು ನನ್ನ ಜೊತೆಯಲ್ಲಿ ಇರುತ್ತದೆ ಎಂದು ಮೊಹಮ್ಮದ್ ಹೇಳಿದ್ದಾನೆ. ಇದಕ್ಕೆ ಒಪ್ಪದ ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply