ಅಣ್ಣ ತಮ್ಮಂದಿರ ಕಲಹ ಕೊಲೆಯೊಂದಿಗೆ ಅಂತ್ಯ!

ಅಣ್ಣ ತಮ್ಮಂದಿರ ಕಲಹವೊಂದು ಅಣ್ಣನ ಕೊಲೆಯೊಂದಿಗೆ ಅಂತ್ಯವಾದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಬನಾರಿ ಎಂಬಲ್ಲಿ ನಡೆದಿದೆ.

ಮೃತನನ್ನು ಬನಾರಿ ಕೊಡಂಗೆ ನಿವಾಸಿ ಗಣೇಶ್(53) ಎಂದು ಗುರುತಿಸಲಾಗಿದ್ದು, ಕೊಲೆಗೈದ ಆರೋಪಿ ತಮ್ಮನನ್ನು ಪದ್ಮನಾಭ(49) ಎಂದು ಗುರುತಿಸಲಾಗಿದೆ.

ಮಂಗಳವಾರ ರಾತ್ರಿ ಮಲಗಿದ್ದ ಗಣೇಶ್ ಬಂಗೇರ ಅವರನ್ನು ತಮ್ಮನೇ ತಲೆಗೆ ಹೊಡೆದು ಕೊಲೆ ಮಾಡಿದ್ದು, ಆನಂತರ ಏನೂ ಆಗಿರದಂತೆ ಮಲಗಿದ್ದ. ಬೆಳಗ್ಗೆ ತಾಯಿ ಹತ್ತಿರ ಬಂದು ಕರೆದಾಗ, ಮಗ ಏಳದೇ ಇರುವುದನ್ನು ಕಂಡು ಮಗಳಿಗೆ ಫೋನ್ ಮಾಡಿ ತಿಳಿಸಿದ್ದರು. ಮಗಳು, ಇತರ ಸಂಬಂಧಿಕರು ಬಂದು ನೋಡಿದಾಗ ಗಣೇಶ್ ಮಲಗಿದಲ್ಲೇ ಸಾವನ್ನಪ್ಪಿದ್ದರು. ಯಾವುದೋ ಆಯುಧದಿಂದ ಹೊಡೆದು ಕೊಲೆಗೈದಿದ್ದಾಗಿ ಮಗಳು ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಗಣೇಶ್ ಬಂಗೇರ ಅವರನ್ನು ತಲೆ, ಎದೆಯ ಭಾಗಕ್ಕೆ ಹೊಡೆದು ಕೊಲೆಗೈದು ರಕ್ತವನ್ನು ಒರೆಸಿ ಮಂಚದಲ್ಲಿ ಮಲಗಿಸಲಾಗಿತ್ತು ಎಂದು ದೂರಲಾಗಿದೆ.

ಆರೋಪಿ ಪದ್ಮನಾಭ(47)ನನ್ನು ಪೊಲೀಸರು ಬಂಧಿಸಿದ್ದಾರೆ. ಅಣ್ಣ – ತಮ್ಮಂದಿರಿಗೆ ಮದುವೆಯಾಗಿದ್ದು, ಇಬ್ಬರ ಪತ್ನಿಯರು ಕೂಡ ಮನೆ ಬಿಟ್ಟು ಹೋಗಿದ್ದರು. ಆನಂತರ ಕುಡಿದು ಬಂದು ಗಲಾಟೆ ನಡೆಸುತ್ತಿದ್ದು, ಇದೀಗ ತಮ್ಮನೇ ಅಣ್ಣನನ್ನು ಕೊಲೆಗೈದು ಜೈಲು ಸೇರಿದ್ದಾನೆ.

 
 
 
 
 
 
 
 
 
 
 

Leave a Reply