Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ಚಾಲಕನ ಅವಸರ- ಬಸ್ಸಿನಿಂದ ಕೆಳಕ್ಕೆ ಬಿದ್ದ ವಿದ್ಯಾರ್ಥಿನಿ

ಮೂಡಬಿದಿರೆ: ಖಾಸಗಿ ಬಸ್ ಚಾಲಕ ಮತ್ತು ನಿರ್ವಾಹಕನ ದಿವ್ಯ ನಿರ್ಲಕ್ಷ್ಯದಿಂದ ವಿದ್ಯಾರ್ಥಿನಿಯೋರ್ವಳು ಬಸ್ ನಿಂದ ಬಿದ್ದ ಘಟನೆಯೊಂದು ನಡೆದಿದೆ. ಕಾಲೇಜ್ ವಿದ್ಯಾರ್ಥಿನಿಯೋರ್ವಳು ಬಸ್ ಹತ್ತುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿನಿ ಬಸ್ ಹತ್ತುವ ಸಂದರ್ಭ, ಬಸ್ ಚಲಿಸಿದ ಪರಿಣಾಮ, ಬಾಲಕಿ ಬಿದ್ದ ಘಟನೆ ನಡೆದಿದೆ.

ಮೂಡಬಿದ್ರೆಯ ಆಳ್ವಾಸ್ ಕಾಲೇಜು ಬಳಿ ಈ ಘಟನೆ ಸಂಭವಿಸಿದೆ. ಕಾಲೇಜು ವಿದ್ಯಾರ್ಥಿನಿಯರು ಬಸ್ ಹತ್ತುತ್ತಿದ್ದ ವೇಳೆ ಬಸ್ ಚಾಲಕನ ಅವಸರಕ್ಕೆ ಫುಟ್ ಬೋರ್ಡ್ ನಿಂದ ಆಯ ತಪ್ಪಿ ವಿದ್ಯಾರ್ಥಿನಿ ಜಾರಿ ರಸ್ತೆಗೆ ಬಿದ್ದಿದ್ದಾಳೆ. ಬಸ್ಸಿನ ಹಿಂಬದಿ ಚಕ್ರಕ್ಕೆ ಸಿಲುಕುವುದರಿಂದ ಸ್ವಲ್ಪದರಲ್ಲೇ ವಿದ್ಯಾರ್ಥಿನಿ ಪಾರಾಗಿದ್ದಾಳೆ.

ಬಸ್ ಚಾಲಕ ನಿರ್ವಾಹಕರ ಈ ನಡತೆ ಇದೇ ಮೊದಲಲ್ಲ. ಅವಸರದಿಂದ ಎಲ್ಲರನ್ನೂ ಹತ್ತೋಕೇ ಹೇಳುವುದು ಇದೇ ಚಾಲ್ತಿಯಾಗಿ ಹೋಗಿದೆ. ಟೈಮ್ ಕೀಪ್ ಮಾಡೋ ವಿಷಯಕ್ಕಷ್ಟೇ ಇವರು ಪ್ರಮುಖ್ಯತೆ ಕೊಡುವುದೇ ಮುಖ್ಯ ಎಂಬ ಅವಸರವೇ ಈ ಎಲ್ಲಾ ದುರ್ಘಟನೆಗೆ ಕಾರಣ ಎನ್ನಬಹುದು. ಸಾಮಾನ್ಯ ಜನರ ಬದುಕಿನಲ್ಲಿ ಆಟ ಆಡುವ ಇವರಿಗೆ ಸಾರ್ವಜನಿಕರೇ ತಕ್ಕ ಬುದ್ಧಿ ಕಲಿಸಬೇಕು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!