ಮಲ್ಪೆ:  ಮೂಡುಬೆಟ್ಟುವಿನ ಯುವಕ ಮಿಥುನ್ ನೇಣು ಬಿಗಿದು ಆತ್ಮಹತ್ಯೆ 

ಆತ್ಮಹತ್ಯೆ ಮಾಡಿಕೊಂಡ ಯುವಕ ಮಿಥುನ್ (32)ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಎಂದಿನಂತೆ ಪೈಂಟಿಂಗ್ ಕೆಲಸಕ್ಕೆಂದು ಮನೆಯಿಂದ ಹೋಗಿದ್ದ ಮಿಥುನ್ ಅರ್ಧದಲ್ಲೇ ಕೆಲಸದಿಂದ ಮನೆಗೆ ಬಂದು ತನ್ನ ಕೊಠಡಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮನೆ ಮಂದಿ ಮನೆಯಲ್ಲಿ ಇದ್ದಾಗ ಬಂದ ಮಿಥುನ್ ನೇರ ತನ್ನ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ.   ಸ್ವಲ್ಪ ಸಮಯವಾದ ಬಳಿಕ ಮನೆಯವರು ಕರೆದಾಗ ಹೊರ ಬಾರದಿದ್ದಾಗ ಸಂಶಯಗೊಂಡು ಬಾಗಿಲನ್ನು ಸ್ಥಳೀಯರ ಸಹಕಾರದಿಂದ ತೆರೆದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಅತ್ಯಂತ ಉತ್ಸಾಹಿ ಯುವಕನಾಗಿದ್ದ ಮಿಥುನ್ ಎಲ್ಲರೊಂದಿಗೂ ಆತ್ಮೀಯನಾಗಿ ಬೆರೆಯುತ್ತಿದ್ದ. ಹಲವಾರು ಸಂಘ ಸಂಸ್ಥೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಸಮಾಜಮುಖಿ  ಚಿಂತನೆಯುಳ್ಳವನಾಗಿದ್ದ. ತನಿಖೆಯಿಂದಷ್ಟೇ ಆತ್ಮಹತ್ಯೆಯ ಕಾರಣ  ತಿಳಿಯಬೇಕಾಗಿದೆ.  

 
 
 
 
 
 
 
 
 
 
 

Leave a Reply