ಹಿಜಾಬ್ ವಿವಾದ: ರಣಾಂಗಣವಾದ ಉಡುಪಿ MGM ಕಾಲೇಜು

ಉಡುಪಿ: ಹಿಜಾಬ್ ವಿವಾದ ವಿಚಾರ ಈಗಾಗಲೇ ಹೈಕೋರ್ಟ್ ಮೆಟ್ಟಿಲೇರಿದ್ದು, ಇನ್ನೇನು ಕೆಲ ಸಮಯದಲ್ಲೇ ತೀರ್ಪು ಬರಲಿದೆ. ಆದರೆ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಉಡುಪಿಯ ಎಂಜಿಎಂ ಕಾಲೇಜು ರಣಾಂಗಣವಾಗಿದೆ. ಉಡುಪಿ ಜಿಲ್ಲೆ ಮಣಿಪಾಲದ ಎಂಜಿಎಂ ಕಾಲೇಜಿನಲ್ಲಿ ಇಂದು ಸೈನ್ಸ್ ಪರೀಕ್ಷೆ ನಡೆಯುತ್ತಿದ್ದು, ಮತ್ತೊಂದೆಡೆ ಲ್ಯಾಬ್ ಕೂಡ ನಡೆಯುತ್ತಿದೆ.

ಪರೀಕ್ಷೆಗೆ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದು, ಕಾಲೇಜು ಸಿಬ್ಬಂದಿಗಳು ಗೇಟ್ ಬಳಿಯೇ ವಿದ್ಯಾರ್ಥಿನಿಯರನ್ನು ತಡೆದಿದ್ದಾರೆ. ಆದರೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ವಿಚಾರ ಕೇಳುತ್ತಿದ್ದಂತೆ ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲು ಹಾಗೂ ಕೇಸರಿ ಪೇಟಾ ಧರಿಸಿ ಕಾಲೇಜು ಆವರಣಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ. ವಂದೇ ಮಾತರಂ, ಜೈಶ್ರೀರಾಮ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ನೂರಾರು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜು ಬಳಿ ಆಗಮಿಸಿದ್ದು, ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಹಿಂದೂ – ಮುಸ್ಲಿಂ ವಿದ್ಯಾರ್ಥಿಗಳ ನಡುವೆ ನೂಕಾಟ ತಳ್ಳಾಟವೂ ನಡೆದಿದೆ. ಒಟ್ಟಾರೆ ಉಡುಪಿ ಎಂಜಿಎಂ ಕಾಲೇಜು ಆವರಣ ರಣರಂಗ ವಾಗಿದೆ 

 
 
 
 
 
 
 
 
 
 
 

Leave a Reply