ಮಂಗಳೂರಿನಲ್ಲಿ ಪತ್ತೆಯಾಯ್ತು ಖತರ್ನಾಕ್ ತಂಡ : ಮಹಿಳೆಯರು, ಯುವತಿಯರೇ ಇವರ ಟಾರ್ಗೆಟ್

ಮಂಗಳೂರು: ಇಲ್ಲೊಂದು ಖದೀಮರ ತಂಡ ಮದುವೆಯಾದ ಮಹಿಳೆಯರು ಹಾಗೂ ಯುವತಿಯರನ್ನು ಟಾರ್ಗೇಟ್ ಮಾಡಿಕೊಂಡು ಅವರಿಂದ ನಂಬರ್ ಪಡೆದು, ಅವರನ್ನು ದೈಹಿಕವಾಗಿ ಬಳಸಿ ಅವರಿಂದಲೇ ಹಣ ದೋಚುತ್ತಿತ್ತು.ಅವರನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಭಾನುವಾರ ಪೊಲೀಸರು 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಮತ್ತೊಂದು ಇಂತಹದ್ದೇ ಗ್ಯಾಂಗ್ ನ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಅದರಂತೆ ಮೂವರನ್ನು ಬಂಧಿಸಿದ್ದಾರೆ.

ಪೊಳಲಿ ನಿವಾಸಿ ತಸ್ವಿನ್‌ , ಮೊಹಮ್ಮದ್ ಮುನೀರ್ ಹಾಗೂ ಕೈಕಂಬ ನಿವಾಸಿ ಸಾದಿಕ್ ಬಂಧಿತರು. ಮೊಹಮ್ಮದ್ ಮುನೀರ್ ಎಂಬಾತ ಈ ಪ್ರಕರಣದ ಪ್ರಮುಖ ಆರೋಪಿ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಈ ಖದೀಮರು ಮೊದಲು ಮಹಿಳೆಯರು ಹಾಗೂ ಯುವತಿಯರ ನಂಬರ್ ಸಂಗ್ರಹಿಸುತ್ತಿದ್ದರು. ಆ ಬಳಿಕ ತಮ್ಮದಲ್ಲದ ಕಾರುಗಳಲ್ಲಿ ಬಂದು ಶ್ರೀಮಂತರಂತೆ ಪೋಸು ನೀಡುತ್ತಿದ್ದರು. ಬಳಿಕ ಹೆಣ್ಣು ಮಕ್ಕಳನ್ನು ಕಾರಿನಲ್ಲಿ ಕರೆದೊಯ್ಯಲು ಆರಂಭಿಸುತ್ತಾರೆ. ಬಳಿಕ ಲೈಂಗಿಕವಾಗಿ ಬಳಸಿಕೊಂಡು ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.ಬಂಧಿತ ಮುನೀರ್ ಚಾಲಕನಾಗಿ ಕೆಲಸ ಮಾಡುತ್ತಿದ್ದು ಅಪರಾಧಿ ಹಿನ್ನೆಲೆ ಹೊಂದಿದ್ದಾನೆ. ಸ್ಥಳೀಯರ ಮಾಹಿತಿಯಂತೆ ಇವರಿಗೆ ಉನ್ನತ ವ್ಯಕ್ತಿಗಳ ಸಂಪರ್ಕವಿದೆ ಎನ್ನಲಾಗಿದೆ. ಹೀಗಾಗಿ ಯಾವುದೇ ಭಯವಿಲ್ಲದೇ ಇವರು ತಮ್ಮ ಕೃತ್ಯಗಳನ್ನು ನಡೆಸುತ್ತಿದ್ದಾರೆ. 

ಈ ತಂಡ ಮಹಿಳೆಯರನ್ನು ಲೈಂಗಿಕವಾಗಿ ಬಳಸಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಇದಕ್ಕೆ ಹೆದರಿ ಬಹಳಷ್ಟು ಹೆಣ್ಣು ಮಕ್ಕಳು ತಮ್ಮ ಚಿನ್ನಾಭರಣಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

 
 
 
 
 
 
 
 
 
 
 

Leave a Reply