ಕೊಲ್ಲೂರು ಮೂಕಾಂಬಿಕಾ ದೇವಳದಲ್ಲಿರುವ ಕೆ.ಜಿಗಟ್ಟಲೆ ಚಿನ್ನಾಭರಣಕ್ಕೆ ಲೆಕ್ಕವಿಲ್ಲ~ ಅವ್ಯವಹಾರದ ಶಂಕೆ  

ಕೊಲ್ಲೂರು​:  ​ಪ್ರಸಿದ್ಧ ಯಾತ್ರಾ ಸ್ಥಳ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನಿಧಿಯಿಂದ 2018-19ನೇ ಸಾಲಿನಲ್ಲಿ ಉಡುಪಿ ಜಿಲ್ಲಾಧಿಕಾರಿ ನಿವಾಸದ ದೂರವಾಣಿ ಬಿಲ್ ಮೊತ್ತ 23,363 ರೂ. ಪಾವತಿಸಲಾಗಿದೆ. ಕೆಲವು ಸರ್ಕಾರಿ ಸಿಬ್ಬಂದಿಯ ಸಂಬಳ ಮತ್ತು ಭತ್ಯೆಗಳನ್ನೂ ​ಕೂಡಾ  ​ಪಾವತಿಸಲಾಗಿದೆ
 
ಸರ್ಕಾರದ ಬಳಿ ಇದಕ್ಕಾಗಿ ಹಣವಿಲ್ಲವೇ ಎಂದು ಕರ್ನಾಟಕ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ರಾಜ್ಯ ವಕ್ತಾರ ಗುರುಪ್ರಸಾದ್ ಗೌಡ ಪ್ರಶ್ನಿಸಿದ್ದಾರೆ.​ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೆಕ್ಕಪರಿಶೋಧಕರ ವರದಿ ಗಮನಿಸಿದರೆ 2004 ರಿಂದ 2016ರವರೆಗೆ ಸುಮಾರು 21.80 ಕೋಟಿ ರೂ. ಆರ್ಥಿಕ ಅವ್ಯವಹಾರ ನಡೆದಿದೆ. 
ದೇವಸ್ಥಾನದ ಈ ಹಿಂದಿನ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ದೇವನಿಧಿಯನ್ನು ದುರ್ಬಳಕೆ ಮಾಡಿಕೊಂ​ಡ​ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.


2004 ರಿಂದ 2016ರವರೆಗೆ ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಸಂದಾಯವಾಗಿರುವ ಚಿನ್ನಾ ಭರಣ ಹಾಗೂ ಆಸ್ತಿಪಾಸ್ತಿಗಳನ್ನು ನಿಯಮಾನುಸಾರ ನೋಂದಣಿ ಮಾಡಿಲ್ಲ. 2016ರಲ್ಲಿ ದೇವಿಯ 4.20 ಕಿಲೋ ತೂಕದ ಬಂಗಾರದ ಹಾರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮನೆಯಲ್ಲಿ ಪತ್ತೆಯಾಗಿತ್ತು. ಆದರೂ ಸರ್ಕಾರಿ ಲೆಕ್ಕಪರಿಶೋಧಕರಿಗೆ ಚಿನ್ನಾಭರಣಗಳ ಮಾಹಿತಿ ಸಲ್ಲಿಸದಿರುವುದು ಆಶ್ಚರ್ಯ ತಂದಿದೆ ಎಂದರು.


ದೇವಸ್ಥಾನದ ಸಿಬ್ಬಂದಿ ಬಗ್ಗೆ ಯಾವುದೇ ನಿಖರ ಮಾಹಿತಿ ಲಭ್ಯವಿಲ್ಲ. ಇದನ್ನು ಗಮನಿಸಿದರೆ ನಕಲಿ ನೌಕರರ ಹೆಸರಿನಲ್ಲಿ ಸಂಬಳ ಹಣವನ್ನು ಅಧಿಕಾರಿಗಳೇ ಕಬಳಿಸುತ್ತಿರುವ ಅನುಮಾನ ವ್ಯಕ್ತವಾಗುತ್ತಿದೆ. ಸಿಬ್ಬಂದಿಯ ಸಂಬಳದಲ್ಲಿ ಕಡಿತ ಮಾಡಿದ ಭವಿಷ್ಯ​ ​ನಿಧಿಯನ್ನು ಇಲಾಖೆಗೆ ಸಲ್ಲಿಸದೇ ಇರುವ ಕಾರಣ ಈ ಹಿಂದೆ 7.46 ಲಕ್ಷ ರೂ. ದಂಡ ಹಾಕಲಾಗಿತ್ತು. ಇದನ್ನು ಸಂಬಂಧಪಟ್ಟ ಅಧಿಕಾರಿಯಿಂದ ವಸೂಲಿ ಮಾಡುವ ಬದಲು ದೇವಸ್ಥಾನದ ಖಾತೆಯಿಂದ ಭರಿಸಲಾಗಿದೆ ಎಂದರು.

​​
ಮಹಾಸಂಘದ ಸದಸ್ಯರಾದ ಸುನೀಲ್ ಘನವಟ್, ಪ್ರಭಾಕರ ನಾಯಕ್, ಶ್ರೀನಿವಾಸ, ಚಂದ್ರ ಮೊಗೇರ, ಮಧುಸೂದನ ಐಯ್ಯರ್ ಉಪಸ್ಥಿತರಿದ್ದರು.

​​
 
 
 
 
 
 
 
 
 
 
 

Leave a Reply