ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಕರಿಮಣಿ ಸರ ಎಗರಿಸಿದ ದುಷ್ಕರ್ಮಿಗಳು!

ವಿಳಾಸ ಕೇಳುವ ನೆಪದಲ್ಲಿ ಅಂಗನವಾಡಿ ಕಾರ್ಯಕರ್ತೆಯ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ದುಷ್ಕರ್ಮಿಗಳು ಎಗರಿಸಿದ ಪ್ರಕರಣ ಇಂದು ಕಾರ್ಕಳದ ಇನ್ನಾ ಎಂಬಲ್ಲಿ ವರದಿಯಾಗಿದೆ.
 
ಇನ್ನಾ ನಿವಾಸಿ ರೇಖಾ ಚಿನ್ನದ ಕರಿಮಣಿ ಸರ ಕಳೆದುಕೊಂಡ ಮಹಿಳೆ ಎಂದು ತಿಳಿದು ಬಂದಿದೆ. ಇವರು ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಸ್ಕೂಟಿಯಲ್ಲಿ ಇನ್ನಾ ಹೊಸಕಾಡು ರಸ್ತೆಯಾಗಿ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅವರ ಸ್ಕೂಟಿ ನಿಲ್ಲಿಸಿ ವಿಳಾಸ ಕೇಳಿದ್ದಾರೆ. 
 
ಈ ವೇಳೆ ಸ್ಕೂಟ ನಿಲ್ಲಿಸಿ ವಿಳಾಸ ಹೇಳಲು ಮುಂದಾಗುತ್ತಿದ್ದಂತೆಯೇ ಬೈಕ್‌ನ ಹಿಂಭಾಗದಲ್ಲಿ ಕುಳಿತಿದ್ದ ದುಷ್ಕರ್ಮಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 32 ಗ್ರಾಂ ತೂಕದ, 1.44ಲಕ್ಷ ರೂ. ಮೌಲ್ಯದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
 
ಘಟನೆ ಕುರಿತು ರೇಖಾ ಅವರು ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಕಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply