5.5ಲಕ್ಷ ಚಿನ್ನದ ಆಭರಣಗಳ ಕದ್ದ ಆರೋಪಿ ಅಂದರ್

ದಿನಾಂಕ 23.02.2023 ರಂದು ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕೈಲಾಜೆ ಪಾದೆಮನೆ ರಾಘವೇಂದ್ರ ಭಟ್ ರವರ ಮನೆಯ ಕಪಾಟಿನ ಬಾಗಿಲನ್ನು ಯಾರೋ ಕಳ್ಳರು ತೆರೆದು ಸುಮಾರು ಐದೂವರೆ ಲಕ್ಷ ಬೆಲೆಬಾಳುವ ಚಿನ್ನದ ಆಭರಣಗಳು ಮತ್ತು ನಗದು ರೂ. 5500/- ನ್ನು ಕಳ್ಳತನ ಮಾಡಿದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 25/2023 ರಂತೆ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಕಾರ್ಕಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮತ್ತು ಸಿಬ್ಬಂದಿಗಳ ತಂಡವು ಆರೋಪಿತನಾದ ಹುಬ್ಬಳ್ಳಿ  ಮಾರುತಿ ನಗರದ ಚಂದ್ರಗೌಡ  ಎಂಬಾತನನ್ನು ದಸ್ತಗಿರಿ ಗೊಳಿಸಿ ಕಳ್ಳತನ ಮಾಡಿದ್ದ 5.50 ಲಕ್ಷ ಮೌಲ್ಯದ ಚಿನ್ನದ ಆಭರಣಗಳನ್ನು ಪತ್ತೆ ಮಾಡಿರುತ್ತಾರೆ.

ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಅಕ್ಷಯ ಹಾಕೆ IPS ರವರ ಸೂಚನೆಯಂತೆ,  ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಿದ್ದಲಿಂಗಪ್ಪ KSPS, ಕಾರ್ಕಳ ಪೊಲೀಸ್ ಉಪಧೀಕ್ಷಕರಾದ ಅರವಿಂದ ಕಲಗಜ್ಜಿ KSPS ರವರ ಮಾರ್ಗದರ್ಶನದಲ್ಲಿ ಕಾರ್ಕಳ ವೃತ್ತ ನಿರೀಕ್ಷಕರಾದ ಟಿ.ಡಿ.ನಾಗರಾಜ್ ಮತ್ತು ವೃತ್ತ ಕಚೇರಿ ಸಿಬ್ಬಂದಿಗಳಾದ ಗಿರೀಶ್, ಪ್ರಶಾಂತ್, ಅಶೋಕ್, ವಿಶ್ವನಾಥ್, ಗಣೇಶ್ ಮತ್ತು ರುಕ್ಮಿಣಿ ರವರು ಪಾಲ್ಗೊಂಡಿರುತ್ತಾರೆ. ಎಸ್.ಪಿ ರವರ  ಕಚೇರಿಯ ದಿನೇಶ್ ಮತ್ತು ಶಿವಾನಂದ್ ರವರು ಪತ್ತೆ ಕಾರ್ಯಕ್ಕೆ ಸಹಕರಿಸಿರುತ್ತಾರೆ.

 
 
 
 
 
 
 
 
 
 
 

Leave a Reply