ಠೇವಣಿದಾರರಿಗೆ ಕೋಟ್ಯಂತರ ರೂ. ಪಂಗನಾಮ ಹಾಕಿದ ಕಮಲಾಕ್ಷಿ ವಿವಿದೊದ್ದೇಶ ಸಹಕಾರಿ ಸಂಘ. ತಲೆನೋವಿನ ಮಾತ್ರೆ ತೆಗೆದುಕೊಂಡು ಕಚೇರಿ ಸಿಬ್ಬಂದಿಯ ಹೈಡ್ರಾಮಾ .
ಠೇವಣಿಗಳಿಗೆ ಅಧಿಕ ಬಡ್ಡಿ ಆಸೆ ತೋರಿಸಿ ಗ್ರಾಹಕರಿಗೆ ನೂರಾರು ಕೋಟಿ ರೂಪಾಯಿ ಗಳನ್ನು ವಂಚಿಸಿದ ಉಡುಪಿಯ ಕಮಲಾಕ್ಷಿ ವಿವಿದೊದ್ದೇಶ ಸಹಕಾರಿ ಸಂಘ. ಇದೀಗ ಠೇವಣಿದಾರರಿಗೆ ಹಣವನ್ನು ಹಿಂದಿರುಗಿಸಲು ಸತಾಯಿಸುತ್ತಿದ್ದು, ಗ್ರಾಹಕರು ಪ್ರತಿನಿತ್ಯ ಕಚೇರಿಗೆ ಬಂದು ಬರಿಗೈಯಲ್ಲಿ ಹಿಂದಿರುಗುತ್ತಿದ್ದಾರೆ. ಅವಧಿ ಮುಗಿದರೂ ಠೇವಣಿ ಹಿಂದಕ್ಕೆ ನೀಡುತ್ತಿಲ್ಲ ಎಂದು ಗ್ರಾಹಕರು ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಕಚೇರಿ ಸಿಬ್ಬಂದಿಯೊಬ್ಬಳು ತಲೆನೋವಿನ ಮಾತ್ರೆ ತೆಗೆದು ಕೊಂಡು ಹೈಡ್ರಾಮಾ ಸೃಷ್ಟಿಸಿ, ಸ್ವಲ್ಪ ಕಾಲ ಆತಂಕದ ವಾತಾವರಣ ಸೃಷ್ಟಿಸಿದ್ದಳು.
ಸಾವಿರಾರು ಜನರು ಠೇವಣಿ ಹಣವನ್ನು ಇಟ್ಟಿದ್ದು, ಜೂನ್ ತಿಂಗಳಿಂದ ಗ್ರಾಹಕರಿಗೆ ಸೊಸೈಟಿ ಯಾವುದೇ ಬಡ್ಡಿಯನ್ನು ನೀಡದೆ ಸತಾಯಿಸುತ್ತಿದ್ದು, ಇದೀಗ ಸಹಕಾರ ಬ್ಯಾಂಕ್ ಮುಖ್ಯಸ್ಥ ಬಿ ವಿ ಲಕ್ಷ್ಮೀನಾರಾಯಣ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಸಾವಿರದಿಂದ -ಕೋಟ್ಯಾಂತರ ರೂಪಾಯಿವರೆಗೂ ಗ್ರಾಹಕರು ಠೇವಣಿ ಇಟ್ಟಿದ್ದಾರೆ. ಉಡುಪಿ ನಗರಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.