ಕೌಟುಂಬಿಕ ಕಲಹ ಹಿನ್ನೆಲೆ ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆ.

ಕೌಟುಂಬಿಕ ಕಲಹ ಹಿನ್ನೆಲೆ ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆ.ಬೆಂಗಳೂರಿನ ಬ್ಯಾಡರ ಹಳ್ಳಿಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ.

ಅಳಿಯ ಹಲ್ಲಗೇರಿ ಶಂಕರ್ ಕುಟುಂಬದ ಜೊತೆ ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ರು.

ಮಗಳು ಸಿಂಧೂರಾಣಿ ಗಂಡನ ಮನೆಗೆ ಹೋಗದೆ ಬಗ್ಗೆ ಅಸಮಧಾನ ಗೊಂಡಿದ್ದ ಶಂಕರ್… ಕಳೆದ ಐದು ದಿನಗಳಿಂದ ಮನೆಗೆ ಬಂದಿರಲಿಲ್ಲ..

ನೆನ್ನೆ ಮನೆಗೆ ಬಂದು ವಾಪಸ್ ಹೋಗಿದ್ದ ಶಂಕರ್. ಬೀಗ ಹಾಕಿದ್ದನ್ನ ಗಮನಿಸಿ ಸ್ನೇಹಿತರ ಮನೆಗೆ ಹೋಗಿರಬಹುದೆಂದು ವಾಪಸ್ ಹೋಗಿದ್ದ.

ಇವತ್ತು ಮತ್ತೆ ಮನೆಗೆ ಬಂದು ಬೀಗ ಹೊಡೆದು ಒಳ ನೋಡಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ.ಎಲ್ಲರೂ ಸೀರೆಗಳಲ್ಲಿ ನೇಣು ಹಾಕಿಕೊಂಡಿದ್ರು‌.

ಪವಾಡದಂತೆ ಐದು ದಿನ ಕಳೆದ್ರೂ ಅಹಾರ ವಿಲ್ಲದಿದ್ರೂ ಬದುಕುಳಿದ ಹೆಣ್ಣು ಮಗು ಪ್ರೇಕ್ಷಾ. ಕಳೆದ ಐದು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕೆ. ಇಬ್ಬರು ಕಂದಮ್ಮಗಳ ಬಿಟ್ಟು ಆತ್ಮಹತ್ಯೆ ಮಾಡಿಕೊಂಡ ಕುಟುಂಬ.

ಅದರಲ್ಲಿ ಒಂದು ಒಂಭತ್ತು ತಿಂಗಳ ಗಂಡು ಮಗು ಮಾತ್ರ ಹಸಿವಿನಿಂದ ಮೃತಪಟ್ಟಿದೆ. ಮತ್ತೊಂದು ಹೆಣ್ಣು ಮಗು ಪವಾಡದಂತೆ ಬದುಕುಳಿದಿದೆ.

ಶಂಕರ್ ಅವರ ಚಿಕ್ಕ ಮಗಳು ಹಾಗೂ ಗಂಡನ ನಡುವೆ ಜಗಳ ನಡೆಯುತ್ತಿತ್ತು. ಈ ಹಿಂದೆ ಕೂಡ ಚಿಕ್ಕ ಮಗಳು ಅತ್ಮಹತ್ಯೆಗೆ ಯತ್ನಿಸಿದ್ದಳು.

ಇಬ್ಬರನ್ನ ಠಾಣೆಗೆ ಕರೆದು ರಾಜಿ ಸಂಧಾನ ಮಾಡಲಾಗಿತ್ತು. ಶಂಕರ್ ಕೆಲಸದ ನಿಮಿತ್ತ ಹೊರ ಊರಿಗೆ ಹೋಗಿದ್ದರು ಶಂಕರ್ ಮರಳಿ ಬಂದಾಗ ಮನೆಯಿಂದ ಕೆಟ್ಟ ವಾಸನೆ ಮೂಗಿಗೆ ರಾಚಿದೆ.

ಕಿಟಕಿ ತೆರೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ತಕ್ಷಣವೇ ಪೊಲೀಸ ರಿಗೆ ಮಾಹಿತಿ ನೀಡಿದ ಶಂಕರ್.

ಐದು ದಿನಗಳ ಕಾಲ ಹೆಣದ ನಡುವೆ, ಅನ್ನ ನೀರು ಇಲ್ಲದೇ ಸಾವಿನ ಮನೆಯಲ್ಲೇ ಇದ್ದ ಮಗು.

ಆತ್ಮಹತ್ಯೆ ಸ್ಥಳದಿಂದ ಮಗುವಿನ ರಕ್ಷಣೆ ಮಾಡಲಾಗಿದೆ. ಈ ಕುಟುಂಬದವರು ಮಂಢ್ಯದ ಹಲಗೇರಿಯವರು.ಪಶ್ಚಿಮ‌ ವಿಭಾಗದ ಸಂಜೀವ್ ಪಾಟೀಲ್ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.

 
 
 
 
 
 
 
 
 
 
 

Leave a Reply