Janardhan Kodavoor/ Team KaravaliXpress
24.6 C
Udupi
Thursday, June 30, 2022
Sathyanatha Stores Brahmavara

ಶ್ರೀನಗರ : ಭಯೋತ್ಪಾದಕರ ಗುಂಡಿನ ದಾಳಿಯಿಂದ ಟಿವಿ ನಟಿ ಅಮ್ರೀನ್ ಭಟ್ ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಬುಧವಾರ 35 ವರ್ಷದ ಸಾಮಾಜಿಕ ಮಾಧ್ಯಮದ ಪ್ರಭಾವಿ ಮಹಿಳೆಯೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ತಿಳಿದು ಬಂದಿದೆ.

ಈ ದಾಳಿಯಲ್ಲಿ ಮಹಿಳೆಯ ಸೋದರಳಿಯ 10 ವರ್ಷದ ಬಾಲಕ ಕೂಡ ಗಾಯಗೊಂಡಿದ್ದಾನೆ ಎನ್ನಲಾಗಿದೆ.

ರಾತ್ರಿ 7.55 ರ ಸುಮಾರಿಗೆ ಭಯೋತ್ಪಾದಕರು ಅಮ್ರೀನ್ ಭಟ್ ಎಂಬ ಮಹಿಳೆಯ ಮನೆಯ ಮೇಲೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಸ್ಥಿತಿಯಲ್ಲಿ ಆಕೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ವೈದ್ಯರು ಆಕೆ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಕಾಶ್ಮೀರ ವಲಯ ಪೊಲೀಸರಿಂದ ತಿಳಿದು ಬಂದಿದೆ.

ಸಾವನ್ನಪ್ಪಿದ ಈ ಮಹಿಳೆ ಅಮ್ರೀನ್ ಭಟ್ ಟಿಕ್‌ಟಾಕ್ ಕಲಾವಿದೆ ಮತ್ತು ಟಿವಿ ತಾರೆ. ಘಟನೆಯಲ್ಲಿ ಮಹಿಳೆಯ ಸೋದರಳಿಯ ಫರ್ಹಾನ್ ಜುಬೈರ್ ಕೂಡ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ದಾಳಿಯನ್ನು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರು ನಡೆಸಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!