ಮತ್ತೆ ಮೂರು ದಿನ ನಟಿ ಸಂಜನಾ, ರಾಗಿಣಿಗೆ ಜೈಲ್ ಊಟವೇ ಗತಿ   

ಬೆಂಗಳೂರು: ಚಂದನವನದ ಮಾದಕ ಜಾಲದ ವಿಚಾರಕ್ಕೆ ಸಂಬಂಧಿಸಿ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನ ಗಲ್ರಾನಿ ಪರಪ್ಪನ ಜೈಲಿಗೆ ಸೇರಿದ್ದರು.ಇಂದು ಅವರಿಬ್ಬರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಕುರಿತಂತೆ ಎನ್ ಡಿ ಪಿ ಎಸ್ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.

ಇಂದು ನಡೆದ ವಿಚಾರಣೆಯಲ್ಲಿ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಲಾಗಿದೆ ಎಂಬ ಆದೇಶ ಹೊರಡಿಸಿದೆ. ಇದರಿಂದಾಗಿ  ಮತ್ತೆ ಮೂರು ದಿನಗಳ ಕಾಲ ನಟಿಯರಿಬ್ಬರು ಜೈಲು ವಾಸಿಗಳಾಗಿದ್ದಾರೆ.

 
 
 
 
 
 
 
 
 

Leave a Reply